ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ: ರಾಜ್ಯ ಸರ್ಕಾರ ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸ, ಎಚ್‌ಡಿಕೆ
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದಿಂದ ಯಾವುದೇ ಕಾರಣಕ್ಕೂ ಅದು ಮತವಾಗಿ ಪರಿವರ್ತನೆ ಆಗುವುದಿಲ್ಲ: ಎಚ್.ಡಿ. ಕುಮಾರಸ್ವಾಮಿ
ಮೈಸೂರು(ಅ.09): ಮೀಸಲಾತಿ ಹೆಚ್ಚಳ ಮಾಡಲು ಹೊರಟಿರುವ ರಾಜ್ಯ ಸರ್ಕಾರವು ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳ ಕುರಿತು ನಾಗಮೋಹನ್‌ದಾಸ್ ನೇತೃತ್ವದ ಸಮಿತಿ 2 ವರ್ಷಗಳ ಹಿಂದೆಯೇ ವರದಿ ನೀಡಿದೆ. ಇದುವರೆಗೂ ಸರ್ಕಾರ ಸುಮ್ಮನಿತ್ತು. ಆದರೀಗ ತರಾತುರಿಯಲ್ಲಿ ವರದಿಯ ಅನುಷ್ಠಾನಕ್ಕೆ ಮುಂದಾಗಿರುವ ರಾಜ್ಯ ಸರ್ಕಾರವು ಜೇನುಗೂಡಿಗೆ ಕಲ್ಲು ಹೊಡೆದಿದೆ ಎಂದರು.
ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಮೀಸಲಾತಿ ಹೆಚ್ಚಳ ಮಾಡುವುದರಿಂದ ಬಿಜೆಪಿಗೆ ರಾಜಕೀಯ ಲಾಭ ಸಿಗುವುದಿಲ್ಲ. ಮೀಸಲಾತಿ ಹೆಚ್ಚಳ ಮಾಡುವ ನಿರ್ಧಾರ ಮಾಡಿರುವ ರಾಜ್ಯ ಸರ್ಕಾರ ತನ್ನ ಕುತ್ತಿಗೆಗೆ ತಂದುಕೊಂಡಿದೆ ಎಂದು ಅವರು ವಿಶ್ಲೇಷಿಸಿದರು.
ಎಸ್‌ಡಿಪಿಐಗೆ ಬಿಜೆಪಿ ಆರ್ಥಿಕ ನೆರವು: ಎಂ. ಲಕ್ಷ್ಮಣ್ ಗಂಭೀರ
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದಿಂದ ತಮಗೆ ಮತ ಬರುತ್ತದೆ ಎಂದುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಅದು ಮತವಾಗಿ ಪರಿವರ್ತನೆಯಾಗುವುದಿಲ್ಲ. ರಾಜಕೀಯ ನಾಯಕರು ತಮಗಾಗಿ, ತಮ್ಮ ಅನುಕೂಲಕ್ಕಾಗಿ ಮೀಸಲಾತಿ ಹೋರಾಟವನ್ನ ಹುಟ್ಟು ಹಾಕಿದದಾರೆ. ಮುಂದೊಂದು ದಿನ ಅವರಿಗೆ ತಿರುಗುಬಾಣ ಆಗುತ್ತದೆ ಎಂದು ಅವರು ಹೇಳಿದರು. ಎಸ್ಸಿ, ಎಸ್ಟಿಮೀಸಲಾತಿ ಹೆಚ್ಚಳ ಮತ್ತು ಭಾರತ್ ಜೋಡೊ ಯಾತ್ರೆಯಿಂದ ನಮಗೆ ಯಾವುದೇ ಎಫೆಕ್ಟ್ ಆಗಲ್ಲ. ಮೀಸಲಾತಿ ಹೆಚ್ಚಳವು ಇದ್ಯಾವುದು ಚುನಾವಣೆಗೆ ಯಾವ ಪಕ್ಷಕ್ಕೂ ಪ್ಲಸ್ ಆಗಲ್ಲ ಎಂದರು.
'ಮುಂದಿನ ವಿಧಾನಸಭಾ ಚುನಾವಣೆಗೆ ತಯಾರಾಗಿ'
ಮತಕ್ಕಾಗಿ ಹೆಸರು ಬದಲಾವಣೆ:
ರೈಲುಗಳ ಹೆಸರು ಬದಲಾವಣೆ ಮೂಲಕ ಭಾವನಾತ್ಮಕವಾಗಿ ಜನರನ್ನು ಸೆಳೆಯುವ ತಂತ್ರವಿದು. ಹೆಸರು ಬದಲಾವಣೆ ಮಾಡಿದ ಮಾತ್ರಕ್ಕೇ ಜನರ ಜೀವನ ಬದಲಾವಣೆ ಆಗುವುದಿಲ್ಲ. ಆಯಾಯ ಕಾಲಕ್ಕೆ ಈ ರೀತಿಯ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಇದು ಕೂಡ ವೋಟ್ ಬ್ಯಾಂಕ್‌ನ ಒಂದು ಭಾಗವಾಗಿದೆ ಎಂದರು.
ಪ್ರತಾಪ್ ಸಿಂಹ ಅವರನ್ನ ಎಂಪಿ ಮಾಡಿರುವುದು ಹೆಸರು ಬದಲಾವಣೆ ಮಾಡಲು ಅಲ್ಲ. ಇನ್ನೂ ಸಾಕಷ್ಟುಸಮಸ್ಯೆಗಳು ಜ್ವಲಂತವಾಗಿವೆ. ಅದರ ಬಗ್ಗೆ ಎಂಪಿ ಗಮನ ಹರಿಸಲಿ. ಪ್ರವಾಹಪೀಡಿತರಿಗೆ, ಮಳೆ ಹಾನಿ ಸಂತ್ರಸ್ತರ ಬಗ್ಗೆ ಗಮನ ಹರಿಸಲಿ. ಇದ್ಯಾವುದೋ ಹೆಸರು ಬದಲಿಸಿರುವುದೇ ಮುಖ್ಯವಲ್ಲ ಎಂದು ಅವರು ಕುಟುಕಿದರು.