Asianet Suvarna News Asianet Suvarna News

ಅಪ್ರಾಪ್ತ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ನಾನು ಯಾವುದೇ ತಪ್ಪು ಮಾಡಿಲ್ಲ, ಯಡಿಯೂರಪ್ಪ

ಅರಮನೆ ರಸ್ತೆಯ ಕಾರ್ಲಟನ್ ಹೌಸ್ ಕಟ್ಟಡದಲ್ಲಿರುವ ಸಿಐಡಿಗೆ ಕಚೇರಿಯಲ್ಲಿ ಪ್ರಕರಣದ ತನಿಖಾಧಿಕಾರಿ ಡಿವೈಎಸ್ಪಿ ಪುನೀತ್ ಅವರು ಯಡಿಯೂರಪ್ಪ ಅವರನ್ನು ಸುಮಾರು ಮೂರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು. ಘಟನೆ ದಿನ ಮನೆಯಲ್ಲಿ ಏನಾಯಿತು? ದೂರುದಾರ ಮಹಿಳೆ ಹಾಗೂ ಸಂತ್ರಸ್ತೆ ತಮಗೆ ಪರಿಚಿತರೇ ಇತ್ಯಾದಿ ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

Former CM  BS Yeddyurappa Appeared CID on Sexually Harassment to Minor Girl Case grg
Author
First Published Jun 18, 2024, 9:13 AM IST

ಬೆಂಗಳೂರು(ಜೂ.18):  ಅಪ್ರಾಪ್ತ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಸಿಐಡಿ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದರು.

ಅರಮನೆ ರಸ್ತೆಯ ಕಾರ್ಲಟನ್ ಹೌಸ್ ಕಟ್ಟಡದಲ್ಲಿರುವ ಸಿಐಡಿಗೆ ಕಚೇರಿಯಲ್ಲಿ ಪ್ರಕರಣದ ತನಿಖಾಧಿಕಾರಿ ಡಿವೈಎಸ್ಪಿ ಪುನೀತ್ ಅವರು ಯಡಿಯೂರಪ್ಪ ಅವರನ್ನು ಸುಮಾರು ಮೂರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು. ಘಟನೆ ದಿನ ಮನೆಯಲ್ಲಿ ಏನಾಯಿತು? ದೂರುದಾರ ಮಹಿಳೆ ಹಾಗೂ ಸಂತ್ರಸ್ತೆ ತಮಗೆ ಪರಿಚಿತರೇ ಇತ್ಯಾದಿ ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಬಿಎಸ್‌ವೈ, ಬಿವೈವಿ ಬಗ್ಗೆ ಹರೀಶ್‌ ಹಗುರ ಮಾತು ಸಹಿಸಲ್ಲ: ರೇಣುಕಾಚಾರ್ಯ

'ನನಗೂ ದೂರುದಾರ ಮಹಿಳೆ ಹಾಗೂ ಆಪ್ರಾಪ್ತಗೂ ಯಾವುದೇ ರೀತಿಯ ಪರಿಚಯವಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ಸಹಾಯ ಕೇಳಿಕೊಂಡು ಪ್ರತಿ ನಿತ್ಯ ಹಲವು ಜನರು ಮನೆ ಬಳಿ ಬರುತ್ತಾರೆ. ಅವರನ್ನು ಮಾತನಾಡಿಸಿ ನಮ್ಮ ಕೈಲಾದ ಸಹಾಯ ಮಾಡುತ್ತೇವೆ. ಹಾಗೆಯೇ ಅಂದು ಮಹಿಳೆ ಹಾಗೂ ಆಕೆಯ ಮಗಳು ನಮ್ಮ ಮನೆಗೆ ಬಂದು ತಮ್ಮ ಸಮಸ್ಯೆ ಹೇಳಿಕೊಂಡು ಸಹಾಯ ಕೇಳಿದ್ದರು. ಈ ವೇಳೆ ಅವರನ್ನು ಮನೆಯಲ್ಲಿ ಕೂರಿಸಿ ಸಮಸ್ಯೆ ಆಲಿಸಿದೆ. ಬಹಳ ಸೌಜನ್ಯದಿಂದ ಅವರೊಂದಿಗೆ ಮಾತನಾಡಿ ಕಳುಹಿಸಿ ಕೊಟ್ಟಿದ್ದೆ. ಆದರೆ, ಆ ಮಹಿಳೆ ನನ್ನ ವಿರುದ್ಧ ಸುಳ್ಳು ಆರೋಪಮಾಡಿದ್ದಾರೆ. ಇದರಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ' ಎಂದು ಬಿ.ಎಸ್.ಯಡಿಯೂರಪ್ಪ ತನಿಖಾಧಿಕಾರಿ ಎದುರು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ?:

ಯಡಿಯೂರಪ್ಪ ತಮ್ಮ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು. ಈ ಸಂಬಂಧ ಕಳೆದ ಮಾ.14ರಂದು ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರು ಬಿಎಸ್‌ ವೈ ವಿರುದ್ಧ ಪೋಕೋ ಪ್ರಕರಣ ದಾಖಲಿಸಿದ್ದರು. ಬಳಿಕ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ಬಳಿಕ ತನಿಖೆ ಆರಂಭಿಸಿದ್ದ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಯಡಿಯೂರಪ್ಪಗೆ ಮಾ.28ರಂದು ನೋಟಿಸ್ ಜಾರಿಗೊಳಿಸಿ ವಿಚಾರಣೆ ಮಾಡಿದ್ದರು. ಬಳಿಕ ಅಗತ್ಯ ಬಿದ್ದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಜಾಮೀನು ರಹಿತ ವಾರೆಂಟ್: ನಂತರ ಜೂ.12 ರಂದು ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ಜೂ.11ರಂದು ಯಡಿಯೂರಪ್ಪಗೆ ನೋಟಿಸ್ ಜಾರಿಗೊಳಿಸಿದ್ದರು. ಆದರೆ, ಪಕ್ಷದ ಪೂರ್ವ ನಿಗದಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಾವು ದೆಹಲಿಯಲ್ಲಿ ಇದ್ದು, ಜೂ.17ರಂದು ವಿಚಾ ರಣೆಗೆ ಹಾಜರಾಗುವುದಾಗಿ ಸಿಐಡಿ ತನಿಖಾಧಿಕಾರಿಗೆ ಯಡಿಯೂರಪ್ಪ ಪತ್ರ ಬರೆದಿದ್ದರು. ವಿಚಾರಣೆಗೆ ಗೈರು ಹಾಜರಾಗಿದ್ದರು. ಈ ನಡುವೆ ಸಿಐಡಿ ಅಧಿಕಾರಿಗಳು ಆರೋಪಿ ಯಡಿಯೂರಪ್ಪ ವಿಚಾರಣೆಗೆ ಗೈರು ಹಾಜರಾಗಿರುವ ವಿಚಾರವನ್ನು ಸೆಷನ್ ಕೋರ್ಟ್ ಗಮನಕ್ಕೆ ತಂದು ಬಂಧನಕ್ಕೆ ಜಾಮೀನುರಹಿತ ವಾರೆಂಟ್ಗೆ ಮನವಿಮಾಡಿದ್ದರು. ವಿಚಾರಣೆ ಮಾಡಿದ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿತ್ತು.

ಬಂಧನಕ್ಕೆ ತಡೆ ನೀಡಿದ್ದ ಹೈಕೋರ್ಟ್: ಇದರ ಬೆನ್ನಲ್ಲೇ ಯಡಿಯೂರಪ್ಪ ಅವರು ತಮ್ಮ ವಿರುದ್ಧದ ಪೋಕೋ ಪ್ರಕರಣ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಮಾಡಿದ ನ್ಯಾಯಾಲಯವು ಯಡಿಯೂರಪ್ಪಳ ರುಡಿಯೂರಪ್ಪ ಬಂಧನಕ್ಕೆ ತಡೆ ನೀಡಿ, ಜೂ.17ರಂದು ವಿಚಾರಣೆಗೆ ಸಿಐಡಿ ಅಧಿಕಾ ರಿಗಳ ಎದುರು ಹಾಜರಾಗುವಂತೆ ಆದೇಶಿಸಿತ್ತು. ಬಂಧನದ ಭೀತಿಯಿಂದ ನಿರಾಳರಾಗಿದ್ದ ಯಡಿ ಯೂರಪ್ಪ ಸೋಮವಾರ ಸಿಐಡಿ ತನಿಖಾಧಿಕಾರಿ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.

Latest Videos
Follow Us:
Download App:
  • android
  • ios