Asianet Suvarna News Asianet Suvarna News

ಶ್ರೀಗಂಧ ಕಳ್ಳತನ ಪ್ರಕರಣ: ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು!

ಯಾದಗಿರಿ ಅರಣ್ಯ ಇಲಾಖೆಯ ಕಚೇರಿಯಲ್ಲಿ ಜಪ್ತಿ ಮಾಡಿಡಲಾಗಿದ್ದ 150 ಕೆ.ಜಿ. ಶ್ರೀಗಂಧ ತುಂಡುಗಳ ಕಳ್ಳತನ ಪ್ರಕರಣದ ಜಾಡು ಹಿಡಿದು ಹೊರಟಿರುವ ಖಾಕಿಪಡೆಗೆ ಇಲಾಖೆಯಲ್ಲಿನ ಒಳಸಂಚಿನ ವಾಸನೆ ಬಡಿದಂತಿದೆ. 

forest department investigation for sandalwood theft case at yadgir gvd
Author
First Published Oct 12, 2023, 11:59 PM IST

ಆನಂದ್ ಎಂ. ಸೌದಿ

ಯಾದಗಿರಿ (ಅ.12): ಯಾದಗಿರಿ ಅರಣ್ಯ ಇಲಾಖೆಯ ಕಚೇರಿಯಲ್ಲಿ ಜಪ್ತಿ ಮಾಡಿಡಲಾಗಿದ್ದ 150 ಕೆ.ಜಿ. ಶ್ರೀಗಂಧ ತುಂಡುಗಳ ಕಳ್ಳತನ ಪ್ರಕರಣದ ಜಾಡು ಹಿಡಿದು ಹೊರಟಿರುವ ಖಾಕಿಪಡೆಗೆ ಇಲಾಖೆಯಲ್ಲಿನ ಒಳಸಂಚಿನ ವಾಸನೆ ಬಡಿದಂತಿದೆ. ಹೀಗಾಗಿ, ಸೂಕ್ತ ಸಾಕ್ಷ್ಯಾಧಾರಗಳ ಸಂಗ್ರಹಿಸಿ, ಕಳ್ಳರ ಕೈಕೋಳಕ್ಕೆ ಸಿದ್ಧತೆಗಳು ನಡೆದಿವೆ. ಇನ್ನೊಂದೆಡೆ, ಈ ಕಳ್ಳತನ ಮರೆಮಾಚಲು ಹೊಸ ಮರ ಕಡಿದ ಪ್ರಕರಣದ ತನಿಖೆಯನ್ನು ಅರಣ್ಯ ಇಲಾಖೆ ಮಾಡಬೇಕಿದೆ. 

ಹಾಗೊಂದು ವೇಳೆ, ಇಲ್ಲಿಯೂ ಪ್ರಾಮಾಣಿಕ ತನಿಖೆ ನಡೆದರೆ ಇಲಾಖೆಯಲ್ಲಿನವರೇ ಕೆಲವರ ಬಣ್ಣ ಬಯಲಾಗಬಹುದಾದ ಆತಂಕದಿಂದ ಹೊಸ ಮರ ಕಡಿದ ಪ್ರಕರಣದ ಬಗ್ಗೆ ಯಾರೂ ಯಾರ ಬಳಿಯೂ ಬಾಯ್ಬಿಡದಂತೆ ಅಧಿಕಾರಿಗಳ ಕಟ್ಟಪ್ಪಣೆ ಸಿಬ್ಬಂದಿಗಳ ಮೌನವಾಗಿಸಿದೆ.  ಅಂದಹಾಗೆ, ಕಳವು ನಡೆದ 9 ದಿನಗಳ ನಂತರ ಅರಣ್ಯ ಇಲಾಖೆಯು ತನ್ನ ಕಚೇರಿ ಆವರಣದಲ್ಲಿ ಸಿಸಿಟಿವಿಗಳ ಅಳವಡಿಸಿದೆ. ಗುರುವಾರ ಸಿಸಿಟಿವಿ ಅಳವಡಿಕೆ ಕಾರ್ಯ ಭರದಿಂದ ಸಾಗಿತ್ತು. 

ಕಾಂಗ್ರೆಸ್‌ ಸರ್ಕಾರ ರಾಜ್ಯವನ್ನು ಕತ್ತಲೆಯಲ್ಲಿಟ್ಟಿದ್ದು, ಸಿದ್ದು ಓರ್ವ ಪಕ್ಷಾಂತರಿ: ಆರ್.ಅಶೋಕ್

ಕಳ್ಳತನಕ್ಕೆ ಫೋನಲ್ಲೇ ಸಂಚು: ಶ್ರೀಗಂಧದ ಜಾಡು ಅರಿತ ಇಲಾಖೆಯವರೇ ಕೆಲವರು ಕಳ್ಳತನದ ಒಳಸಂಚು ಹೂಡಿದ್ದರೇ ಎಂಬ ದಟ್ಟವಾದ ಅನುಮಾನಗಳಿಂದಾಗಿ ಪ್ರಕರಣದ ತನಿಖೆಗಿಳಿದಿರುವ ಯಾದಗಿರಿ ಪೊಲೀಸರು ಹಲವರ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಜಪ್ತಿ ಮಾಡಿ ಇಡಲಾಗಿದ್ದ 150 ಕೆ.ಜಿ.ಯಷ್ಟು ಶ್ರೀಗಂಧದ ತುಂಡುಗಳು ಇಲ್ಲಿನ ವಲಯ ಅರಣ್ಯಾಧಿಕಾರಿ ಕಚೇರಿಯಿಂದ ಕಳ್ಳತನವಾದ ದಿನದಂದು ಕೆಲವು ಫೋನ್‌ ಕರೆಗಳು ಹಾಗೂ ಸಂದೇಶಗಳು ವಿನಿಮಯಗೊಂಡ ಬಗ್ಗೆ ಈಗ ಅನುಮಾನಗಳು ವ್ಯಕ್ತವಾಗಿವೆ.

ಮರಗಳ್ಳರಿಂದ ಜಪ್ತಿ ಮಾಡಲಾಗಿದ್ದ ಶ್ರೀಗಂಧ ಇಲ್ಲಿನ ವಲಯ ಅರಣ್ಯಾಧಿಕಾರಿ ಕಚೇರಿಯಿಂದ ಕಳ್ಳತನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಿಳಿದಿರುವ ಪೊಲೀಸ ರಿಗೆ, ಕಳ್ಳತನ ಸಮಯದಲ್ಲಿ ದುಷ್ಕರ್ಮಿಗಳು ಫೋನ್‌ ಕರೆಗಳು ಹಾಗೂ ಜಾಲತಾಣಗಳ ಮೂಲಕ ಮಾತುಕತೆ- ವಿನಿಮಯ ನಡೆಸಿರಬಹುದು ಎಂಬ ಶಂಕೆಗಳು ವ್ಯಕ್ತವಾ ಗುತ್ತಿವೆ. ಜೊತೆಗೆ, ಸುತ್ತಮುತ್ತಲ ಸಿಸಿಟಿವಿ ಪರಿಶೀಲನೆಗೆ ಮುಂದಾಗಿರುವ ಖಾಕಿಪಡೆ, ಅರಣ್ಯ ಇಲಾಖೆ ನೀಡಿದ ದೂರಿನನ್ವಯ ಅ.1 ಹಾಗೂ ಅ.3ರ ನಡುವೆ ಸ್ಥಳದಲ್ಲಿನ ಚಲನ ವಲನಗಳ ಬಗ್ಗೆಯೂ ನಿಗಾ ವಹಿಸಿದ್ದಾರೆ. ಅಲ್ಲದೆ, ಇಲಾಖೆಯ ಜೀಪು, ಹೊರಗುತ್ತಿಗೆ ಆಧಾರದ ಮೇಲೆ ಬಾಡಿಗೆ ಪಡೆದ ಮತ್ತೊಂದು ಜೀಪು ಹಾಗೂ ಖಾಸಗಿ ಸರಕು ಸಾಗಾಣಿಕೆ ವಾಹನವೊಂದರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ.

ಏನಿದು ಪ್ರಕರಣ?: ಯಾದಗಿರಿ ಜಿಲ್ಲೆ ಹತ್ತಿಕುಣಿ ಅರಣ್ಯ ಪ್ರದೇಶದಲ್ಲಿ ಸೆ.13-14 ರ ಮಧ್ಯೆ ಅಕ್ರಮವಾಗಿ ಶ್ರೀಗಂಧ ಕಡಿದು ಸಾಗಿಸುತ್ತಿದ್ದ ಮಹಾರಾಷ್ಟ್ರ ಮೂಲದ ಓರ್ವ ವ್ಯಕ್ತಿ ಸೇರಿ, 150 ಕೆ.ಜಿ. ಶ್ರೀಗಂಧವನ್ನು ಜಪ್ತಿ ಮಾಡಲಾಗಿತ್ತು. ಈ ಜಪ್ತಿಯಾದ ಮಾಲನ್ನು ಯಾದಗಿರಿ ಅರಣ್ಯಾಧಿಕಾರಿ ಕಚೇರಿಯಲ್ಲಿಟ್ಟಿದ್ದಾಗ, ಅ.1 ಹಾಗೂ ಅ.3ರ ಮಧ್ಯೆ ಕಳ್ಳತನವಾಗಿತ್ತು.ಈ ಕಳ್ಳತನ ಪ್ರಕರಣದ ಮುಜುಗರದಿಂದ ತಪ್ಪಿಸಿಕೊಳ್ಳಲು ಇಲಾಖೆಯವರೇ ಕೆಲವರು ಗುರುಮಠಕಲ್‌ ಭಾಗದ ಮಲ್ಲಾ ಅರಣ್ಯ ಪ್ರದೇಶದಲ್ಲಿ ಹೊಸ ಮರಗಳ ಕಡಿದು ತಂದ ಆರೋಪಗಳೂ ಕೇಳಿ ಬಂದವು. 

ವಾರಂಟಿ ಇಲ್ಲದ ಗ್ಯಾರಂಟಿ ನೀಡಿದ ಕಾಂಗ್ರೆಸ್‌: ಮಾಜಿ ಸಿಎಂ ಬೊಮ್ಮಾಯಿ ಲೇವಡಿ

ಇದರ ಬೆನ್ನಲ್ಲೇ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಅವರು ಖುದ್ದು ಅರಣ್ಯ ಸಚಿವರಿಗೆ ಪತ್ರ ಬರೆದು ಪ್ರಕರಣದ ತನಿಖೆಗೆ ಆಗ್ರಹಿಸಿದ್ದರು. ಈ ಅಕ್ರಮದ ಜಾಡು ಹಿಡಿದು ಹೊರಟು ‘ಕನ್ನಡಪ್ರಭ’ದಲ್ಲಿ ಈ ಕುರಿತು ವರದಿಗಳು ಪ್ರಕಟಗೊಂಡಿದ್ದವು. ಇದರ ಪರಿಣಾಮ ಜಪ್ತಿ ಮಾಡಿಟ್ಟಿದ್ದ ಶ್ರೀಗಂಧ ಕಚೇರಿಯಿಂದಲೇ ಕಳ್ಳತನ ಪ್ರಕರಣ ದಲ್ಲಿ ನಿರ್ಲಕ್ಷ್ಯ ಆರೋಪದಡಿ ಇಬ್ಬರನ್ನು ಅಮಾನತು ಮಾಡಲಾಗಿದ್ದರೆ, ಹೊಸ ಮರ ಕಡಿದ ಬಗ್ಗೆ ಅನಾಮಧೇಯರ ವಿರುದ್ಧ ಅರಣ್ಯ ಇಲಾಖೆ ದೂರು ದಾಖಲಿಸಿಕೊಂಡಿದೆ.

Follow Us:
Download App:
  • android
  • ios