ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಕತ್ತಲೆಯಲ್ಲಿಟ್ಟಿದ್ದು, ಸಿದ್ದು ಓರ್ವ ಪಕ್ಷಾಂತರಿ: ಆರ್.ಅಶೋಕ್
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 5 ತಿಂಗಳಲ್ಲಿ ರಾಜ್ಯವನ್ನು ಕತ್ತಲೆಗೆ ದೂಡಿದ್ದು, ಪವರ್ ಇಲಾಖೆಯಲ್ಲಿ ಈಗಾಗಲೇ 20 ಸಾವಿರ ಕೋಟಿಗೂ ಹೆಚ್ಚು ಸಾಲ ಮಾಡಿದೆ. ಹಣ ಇಲ್ಲ ಎಂದಾದ ಮೇಲೆ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಲು ಶಕ್ತಿ ಎಲ್ಲಿಂದ ಬರುತ್ತದೆ ಎಂದು ಮಾಜಿ ಕಂದಾಯ ಸಚಿವ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರ (ಅ.12): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 5 ತಿಂಗಳಲ್ಲಿ ರಾಜ್ಯವನ್ನು ಕತ್ತಲೆಗೆ ದೂಡಿದ್ದು, ಪವರ್ ಇಲಾಖೆಯಲ್ಲಿ ಈಗಾಗಲೇ 20 ಸಾವಿರ ಕೋಟಿಗೂ ಹೆಚ್ಚು ಸಾಲ ಮಾಡಿದೆ. ಹಣ ಇಲ್ಲ ಎಂದಾದ ಮೇಲೆ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಲು ಶಕ್ತಿ ಎಲ್ಲಿಂದ ಬರುತ್ತದೆ ಎಂದು ಮಾಜಿ ಕಂದಾಯ ಸಚಿವ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು. ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಿದ್ಯಾರ್ಥಿಗಳು ಮೇಣದ ಬತ್ತಿ ನೆರವಿಂದ ಓದುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿರುವ 16 ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ ಹಣ ವಾಪಸ್ ಪಡೆದಿದ್ದಾರೆ ಎಂದು ಟೀಕಿಸಿದರು.
ಸರ್ಕಾರ ದಿವಾಳಿಯಾಗಿದೆ: ಸರ್ಕಾರದ ಬಳಿ ಹಣ ಇಲ್ಲದ ಕಾರಣ ನಮ್ಮ ಕ್ಷೇತ್ರಗಳಿಗೆ ಮೀಸಲಾಗಿದ್ದ ಅನುದಾನವನ್ನು ಅನ್ಯ ಕ್ಷೇತ್ರಗಳಿಗೆ ಕೊಡುತ್ತಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯಿಂದ ಕೂಡಿದ್ದು ಲೋಕಸಭೆಗೆ ಇಂದು ಚುನಾವಣೆ ನಡೆದರೂ ರಾಜ್ಯದಲ್ಲಿ 25 ಸ್ಥಾನಗಳು ಸಹ ಕಾಂಗ್ರೆಸ್ ಪಡೆಯುವುದಿಲ್ಲ.ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ ಕಟ್ಟೆಯೊಡೆದಿದೆ ಎಂದು ಭವಿಷ್ಯ ನುಡಿದರು.
ಇವತ್ತಿಗೆ ಚುನಾವಣೆ ನಡೆದರೂ ಸಿದ್ದರಾಮಯ್ಯಗೆ ಜನ ವೋಟ್ ಹಾಕಲ್ಲ: ಆರ್.ಅಶೋಕ್
ಸಿದ್ದರಾಮಯ್ಯ ಓರ್ವ ಪಕ್ಷಾಂತರಿ: ಮೈಸೂರು ಸಿದ್ದರಾಮಯ್ಯ ಒಬ್ಬ ಪಕ್ಷಾಂತರಿ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಆರ್. ಅಶೋಕ್ ಆರೋಪಿಸಿದರು. ರಾಜ್ಯದಲ್ಲಿ ಬಿಜೆಪಿಯೇ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಸಂಬಂಧ ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಸಿದ್ದರಾಮಯ್ಯನವರು ಮೊದಲ ಫಲಾನುಭವಿಗಳು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದು ಬಿಜೆಪಿ ಬೆಂಬಲದಿಂದಲೇ. ಇಂದು ಪ್ರಪಂಚದಲ್ಲಿಯೇ ಬಿಜೆಪಿ ನಂಬರ್ 1 ಪಾರ್ಟಿ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಸಮಾಜವಾದಿ ಪಾರ್ಟಿ, ಜೆಡಿಎಸ್, ಈಗ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಯಾವ್ ಯಾವ ಪಾರ್ಟಿಯಲ್ಲಿ ಏನು ಅಧಿಕಾರ ಸಿಗುತ್ತೆ ಅಲ್ಲಿ ಹೋಗ್ತಾರೆ. ಮುಂದೆ ಯಾವ ಪಾರ್ಟಿಗೆ ಹೋಗ್ತಾರೆ ಗೊತ್ತಿಲ್ಲ. ಸಿದ್ದರಾಮಯ್ಯನವರು ಭ್ರಮೆಯಲ್ಲಿದ್ದಾರೆ. ಪ್ರಧಾನಿ ಮೋದಿಯವರು ಮತ್ತೆ ಪ್ರಧಾನಿ ಆಗುವುದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಅಳಕುಪುಳುಕಾಗಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಾರೆ. ಇವತ್ತಿಗೆ ಚುನಾವಣೆ ನಡೆದರೂ ಸಿದ್ದರಾಮಯ್ಯನವರಿಗೆ ಜನ ವೋಟ್ ಹಾಕಲ್ಲ. ಚುನಾವಣೆಯಲ್ಲಿ ಗೆಲ್ಲಲಿಕ್ಕೆ ಅವರೇ ಹರಸಾಹಸ ಮಾಡುತ್ತಾರೆ.
ಸ್ಟಾಲಿನ್ ಮೇಲಿನ ಮೋಹಕ್ಕೆ ತಮಿಳುನಾಡಿಗೆ ನೀರು: ಕಾಂಗ್ರೆಸ್ ವಿರುದ್ಧ ಅಶೋಕ್ ಆಕ್ರೋಶ
ಬಿಜೆಪಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಸಿದ್ದರಾಮಯ್ಯಗಿಲ್ಲ ಎಂದು ಅವರು ಟೀಕಿಸಿದರು. ವಿಪಕ್ಷ ನಾಯಕನನ್ನ ಸಿದ್ದರಾಮಯ್ಯ ಆಯ್ಕೆ ಮಾಡ್ತಾರಾ? ಯಾವಾಗ ಮಾಡ್ಬೇಕು, ಹೇಗೆ ಮಾಡಬೇಕು ನಾವು ತೀರ್ಮಾನ ಮಾಡ್ತೀವಿ. ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ದಿನನಿತ್ಯ ಸಿದ್ದರಾಮಯ್ಯನವರ ಪಂಚೆ, ವಾಚ್ ಬಗ್ಗೆ ಬೈಯ್ತಿದ್ದಾರೆ. ಇದಕ್ಕೆ ನೋ ರಿಯಾಕ್ಷನ್, ಬಿಜೆಪಿ ಬಗ್ಗೆ ಮಾತ್ರ ರಿಯಾಕ್ಷನ್. ಇದರಿಂದಲೇ ಗೊತ್ತಾಗುತ್ತೆ ಯಾವ ಪಾರ್ಟಿ ಹಾಳಾಗೋಗಿದೆ ಎಂಬುದು ಎಂದು ಅವರು ತಿರುಗೇಟು ನೀಡಿದರು.