Asianet Suvarna News Asianet Suvarna News

ಎನ್‌ಆರ್‌ಐಗಳು ದತ್ತು ಪಡೆಯಲು ನೆಲೆಸಿದ ದೇಶದ ಒಪ್ಪಿಗೆ ಕಡ್ಡಾಯ: ಹೈಕೋರ್ಟ್

ಚಿಕ್ಕಬಳ್ಳಾಪುರದ ರಶ್ಮಿ ಎಂಬುವವರಿಂದ ಐದು ತಿಂಗಳ ಹೆಣ್ಣು ಮಗುವನ್ನು ದತ್ತು ಪಡೆದ ಸಂಬಂಧ ತಮಗೆ ನಿರಕ್ಷೇಪಣಾ ಪ್ರಮಾಣ ಪತ್ರ ನೀಡದ ಮಕ್ಕಳ ರಕ್ಷಣಾ ಘಟಕ ಕ್ರಮ ಆಕ್ಷೇಪಿಸಿ ಜರ್ಮನಿ ಫ್ರಾಂಕ್ಟರ್ಟ್ ಪ್ರದೇಶದಲ್ಲಿ ನೆಲೆಸಿರುವ ಬೆಂಗಳೂರು ಮೂಲದ ಯು.ಅಜಯ ಕುಮಾರ್ ದಂಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ಎಂ. ನಾಗಪ್ರ ಸನ್ನ ಅವರ ಪೀಠ ಈ ಸ್ಪಷ್ಟನೆ ನೀಡಿದೆ.

For Adoption by NRIs mandatory to obtain a confirmation letter from the country of residence grg
Author
First Published Jan 26, 2024, 9:58 AM IST

ಬೆಂಗಳೂರು(ಜ.26):  ವಿದೇಶದಲ್ಲಿ ನೆಲೆಸಿರುವ ಭಾರತ ಮೂಲದ ದಂಪತಿ ಭಾರತದಲ್ಲಿನ ಮಗುವನ್ನು ದತ್ತು ಪಡೆಯಲು 'ಹೇಗ್' ಒಪ್ಪಂದದಂತೆ (ಅಂತ‌ರ್ ದೇಶೀಯ) ತಾವು ನೆಲೆಸುವ ದೇಶದಿಂದ ದೃಢೀಕರಣ ಪತ್ರ ಪಡೆಯುವುದು ಕಡ್ಡಾಯ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಚಿಕ್ಕಬಳ್ಳಾಪುರದ ರಶ್ಮಿ ಎಂಬುವವರಿಂದ ಐದು ತಿಂಗಳ ಹೆಣ್ಣು ಮಗುವನ್ನು ದತ್ತು ಪಡೆದ ಸಂಬಂಧ ತಮಗೆ ನಿರಕ್ಷೇಪಣಾ ಪ್ರಮಾಣ ಪತ್ರ ನೀಡದ ಮಕ್ಕಳ ರಕ್ಷಣಾ ಘಟಕ ಕ್ರಮ ಆಕ್ಷೇಪಿಸಿ ಜರ್ಮನಿ ಫ್ರಾಂಕ್ಟರ್ಟ್ ಪ್ರದೇಶದಲ್ಲಿ ನೆಲೆಸಿರುವ ಬೆಂಗಳೂರು ಮೂಲದ ಯು.ಅಜಯ ಕುಮಾರ್ ದಂಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ಎಂ. ನಾಗಪ್ರ ಸನ್ನ ಅವರ ಪೀಠ ಈ ಸ್ಪಷ್ಟನೆ ನೀಡಿದೆ. ಜೊತೆಗೆ, ಭಾರತದ ಮಗುವನ್ನು ದತ್ತು ಪಡೆಯಲು ಹೇಗ್ ಒಪ್ಪಂದದ ಪ್ರಕಾರ ಅಂತಾರಾಷ್ಟ್ರೀಯ ದತ್ತು ಸ್ವೀಕಾರ ನಿಯಮ ಗಳ ಕಾರ್ಯವಿಧಾನಗಳಿಗೆ ಅನುಗುಣ ವಾಗಿ ತಾವು ನೆಲೆಸುವ ದೇಶದಿಂದ ದೃಢೀ ಕರಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿ ಮುಂದಿನ ಕ್ರಮ ಜರುಗಿಸಲು ಅರ್ಜಿದಾರ ದಂಪತಿ ಸ್ವತಂತ್ರವಾಗಿದೆ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.

ಬೆಂಗಳೂರು: ಏರ್‌ಪೋರ್ಟ್‌ ಬಳಿಯ 9 ಎಕ್ರೆಗೆ ಕೋರ್ಟ್‌ ರಕ್ಷಣೆ

ಪ್ರಕರಣದ ವಿವರ: 

ಬೆಂಗಳೂರು ಮೂಲದ ಯು.ಅಜಯ್ ಕುಮಾರ್ ಮತ್ತು ಅವರ ಪತ್ನಿ ಟಿ.ವಿ.ಮೈತ್ರಾ ದಂಪತಿ ಚಿಕ್ಕಬಳ್ಳಾಪುರದ ರಶ್ಮಿ ಎಂಬವರಿಂದ ಐದು ತಿಂಗಳ ಹೆಣ್ಣು ಮಗು ದತ್ತು ಪಡೆದಿದ್ದರು. ಚಿಕ್ಕಬಳ್ಳಾಪುರದ ಸಬ್ ರಿಜಿಸ್ಟ್ರಾರ್‌ಕಚೇರಿಯಲ್ಲಿ 2023ರ ಮಾ.29ರಂದು ದತ್ತು ಸ್ವೀಕಾರವನ್ನು ನೋಂದಾಯಿಸಿದ್ದರು. ನಂತರ ಮಗು ದತ್ತು ಪಡೆದಿರುವ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡುವಂತೆ ಕೋರಿ ದಂಪತಿ ಹಲವು ಬಾರಿ ಸಲ್ಲಿಸಿದ್ದ ಮನವಿಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದರಿಂದ ದಂಪತಿ ಹೈಕೋರ್ಟ್ ಮೆಟ್ಟಿಲೇರಿ, ನಿರಾಕ್ಷೇಣಾ ಪತ್ರ ನೀಡಲು ಆದೇಶಿಸುವಂತೆ ಕೋರಿದ್ದರು.

Follow Us:
Download App:
  • android
  • ios