Asianet Suvarna News Asianet Suvarna News

ಶಿವಮೊಗ್ಗದಿಂದ ಹೈದರಾಬಾದ್‌, ತಿರುಪತಿ, ಗೋವಾಕ್ಕೂ ವಿಮಾನ: ಇಲ್ಲಿದೆ ಸಮಯಗಳ ವಿವರ!

ಜಿಲ್ಲೆಯಿಂದ ಮತ್ತೊಂದು ವಿಮಾನ ಹಾರಾಟಕ್ಕೆ ಮುಹೂರ್ತ ಫಿಕ್ಸ್‌ ಆಗಿದ್ದು, ನವೆಂಬರ್‌ 17ರಿಂದ ಸ್ಟಾರ್‌ ಏರ್‌ ತನ್ನ ಸೇವೆ ಆರಂಭಿಸಲಿದ್ದು, ಇನ್ಮುಂದೆ ಶಿವಮೊಗ್ಗದಿಂದ ತಿರುಪತಿ, ಗೋವಾ, ಹೈದರಾಬಾದ್‌ಗೆ ಅತ್ಯಂತ ವೇಗವಾಗಿ ತಲುಪಬಹುದಾಗಿದೆ. 

flight service from shivamogga to hyderabad goa tirupati gvd
Author
First Published Oct 18, 2023, 8:02 AM IST

ಶಿವಮೊಗ್ಗ (ಅ.18): ಜಿಲ್ಲೆಯಿಂದ ಮತ್ತೊಂದು ವಿಮಾನ ಹಾರಾಟಕ್ಕೆ ಮುಹೂರ್ತ ಫಿಕ್ಸ್‌ ಆಗಿದ್ದು, ನವೆಂಬರ್‌ 17ರಿಂದ ಸ್ಟಾರ್‌ ಏರ್‌ ತನ್ನ ಸೇವೆ ಆರಂಭಿಸಲಿದ್ದು, ಇನ್ಮುಂದೆ ಶಿವಮೊಗ್ಗದಿಂದ ತಿರುಪತಿ, ಗೋವಾ, ಹೈದರಾಬಾದ್‌ಗೆ ಅತ್ಯಂತ ವೇಗವಾಗಿ ತಲುಪಬಹುದಾಗಿದೆ. ಈಗಾಗಲೆ ಟಿಕೆಟ್‌ ಬುಕಿಂಗ್‌ ಪ್ರಕ್ರಿಯೆ ಕೂಡ ಶುರುವಾಗಿದ್ದು, ಸ್ಟಾರ್‌ ಏರ್‌ಲೈನ್ಸ್‌ ವಿಮಾನಯಾನ ಸಂಸ್ಥೆ ಶಿವಮೊಗ್ಗದಿಂದ ತನ್ನ ಕಾರ್ಯಾಚರಣೆ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದೆ. ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್‌ಗೆ ವಾರದಲ್ಲಿ ಆರು ದಿನ ವಿಮಾನಯಾನ ಸೇವೆ ಆರಂಭಿಸುತ್ತಿದೆ.

ಸಮಯ ನಿಗದಿ: ಸ್ಟಾರ್‌ ಏರ್‌ ವಿಮಾನವು ಬೆಳಗ್ಗೆ 9.30ಕ್ಕೆ ಹೈದರಾಬಾದ್‌ನಿಂದ ಹೊರಡಲಿದೆ. ಬೆಳಗ್ಗೆ 10.35ಕ್ಕೆ ಶಿವಮೊಗ್ಗ ತಲುಪಲಿದೆ. ಬೆಳಗ್ಗೆ 11ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12ಕ್ಕೆ ತಿರುಪತಿ ತಲುಪಲಿದೆ. ತಿರುಪತಿಯಿಂದ ಮಧ್ಯಾಹ್ನ 12.35ಕ್ಕೆ ಹೊರಟು ಮಧ್ಯಾಹ್ನ 1.40ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ. ಮಧ್ಯಾಹ್ನ 1.55ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 2.45ಕ್ಕೆ ಗೋವಾ ತಲುಪಲಿದೆ. ಗೋವಾದಿಂದ ಮಧ್ಯಾಹ್ನ 3.15ಕ್ಕೆ ಹೊರಟು ಸಂಜೆ 4.05ಕ್ಕೆ ಶಿವಮೊಗ್ಗ ತಲುಪಲಿದೆ. ಸಂಜೆ 4.30ಕ್ಕೆ ಶಿವಮೊಗ್ಗದಿಂದ ಹೊರಟು ಸಂಜೆ 5.30ಕ್ಕೆ ಹೈದರಾಬಾದ್‌ ತಲುಪಲಿದೆ.

ಕೋಟಿ ನಗದು ಪತ್ತೆ ಬಗ್ಗೆ ಸಿಬಿಐ ತನಿಖೆ ನಡೆಸಿ: ಬಿ.ಎಸ್‌.ಯಡಿಯೂರಪ್ಪ

ಬುಕಿಂಗ್‌ ಆರಂಭ: ಸ್ಟಾರ್‌ ಏರ್‌ಲೈನ್ಸ್‌ ಸಂಸ್ಥೆ ವಿಮಾನಯಾನ ಸೇವೆ ಆರಂಭಕ್ಕೆ ದಿನಾಂಕ ಪ್ರಕಟಿಸುತ್ತಿದ್ದಂತೆ ಟಿಕೆಟ್‌ ಬುಕಿಂಗ್‌ ಪ್ರಕ್ರಿಯೆ ಕೂಡ ಆರಂಭವಾಗಿದೆ. ಶುಭಂ ಹೊಟೇಲ್‌ ಸಮೀಪ ಇರುವ ಬ್ಲೂಬೆಲ್‌ ಹಾಲಿಡೇಸ್‌ನಲ್ಲಿ ಸ್ಟಾರ್‌ ಏರ್‌ ಟಿಕೆಟ್‌ ಬುಕಿಂಗ್‌ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ 8123002917, 9449502917 ಸಂಪರ್ಕಿಸಬಹುದು.

Follow Us:
Download App:
  • android
  • ios