*  ಚಿತ್ರದುರ್ಗ ನಗರ ಸುತ್ತಮುತ್ತ ಆಲಿಕಲ್ಲು ಮಳೆ*  ಬೆಳಗಾವಿಯಲ್ಲಿ ಅಬ್ಬರಿಸಿದ ಮಳೆ*  ಅಬ್ಬರಿಸಿದ ಗುಡುಗು ಮಿಂಚು, ಅಲ್ಪ ಮಳೆ

ಬೆಂಗಳೂರು(ಏ.26): ರಾಜ್ಯದ(Karnataka) 11 ಜಿಲ್ಲೆಗಳ ವಿವಿಧೆಡೆ ಭಾನುವಾರ ಬೇಸಿಗೆ ಮಳೆ(Rain) ಸುರಿದಿದ್ದು ಸಿಡಿಲಿಗೆ ಐವರು ಮೃತಪಟ್ಟಿರುವ(Death) ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಬೆಳಗಾವಿ, ವಿಜಯಪುರ, ಧಾರವಾಡ, ಹಾವೇರಿ, ಗದಗ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳ ಕೆಲಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಚಿತ್ರದುರ್ಗ ನಗರ ಸುತ್ತಮುತ್ತ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ.

ಹೆಚ್ಚಿನ ಕಡೆಗಳಲ್ಲಿ ಮಳೆಗಿಂತಲೂ ಗುಡುಗು, ಸಿಡಿಲುಗಳ(Lightning Strike) ಆರ್ಭಟ ಜೋರಾಗಿದ್ದು ಐವರು ಸಿಡಿಲಿಗೆ ಮೃತಪಟ್ಟಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ವೆಂಕಟಾಪೂರ ಗ್ರಾಮದ ಮಲ್ಲಮ್ಮ ಕಲ್ಮೇಶ ವಟವಟಿ (40), ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ಜಗದೀಶ ಹನುಮಂತ ಸತ್ತಿಗೇರಿ (34), ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಇಂಡುವಳ್ಳಿ ಗ್ರಾಮದ ಗೌತಮ್‌ ನಾಗರಾಜ್‌(23) ಸಿಡಿಲಿಗೆ ಬಲಿಯಾಗಿದ್ದಾರೆ. 

Karnataka Rains: ಕರ್ನಾಟಕದ ಹಲವೆಡೆ ವರುಣನ ಅಬ್ಬರ: ನಾಲ್ಕು ಮಂದಿ ಬಲಿ

ಇನ್ನು ಮನೆಯ ಮುಂದೆ ನಿಂತಿದ್ದ ಬಳ್ಳಾರಿ(Ballari) ಜಿಲ್ಲೆಯ ಸಂಡೂರಿನ ನಂದಿಹಳ್ಳಿಯ ಯುವಕ ಮಂಜುನಾಥ (23), ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಈದು ನೂರಾಲ್‌ ಬೆಟ್ಟು ಸಮೀಪದ ಜಿಗೀಶ್‌ ಜೈನ್‌(41) ಸಹ ಸಿಡಿಲಿಗೆ ಬಲಿಯಾಗಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದೊಡ್ಡಗೋಳ ಗ್ರಾಮದಲ್ಲಿ 20 ಕುರಿಗಳು ಸಿಡಿಲಿಗೆ ಬಲಿಯಾಗಿವೆ.

ಅಬ್ಬರಿಸಿದ ಗುಡುಗು ಮಿಂಚು, ಅಲ್ಪ ಮಳೆ

ಗದಗ: ಗದಗ ಬೆಟಗೇರಿ(Gadag-Betageri) ಅವಳಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ, ಮುಂಡರಗಿ ತಾಲೂಕಿನ ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಗುಡುಗು ಮಿಂಚು, ರಭಸದ ಗಾಳಿಯೊಂದಿಗೆ ಕೆಲ ಕಾಲ ಮಳೆಯಾಯಿತು.

ಮಳೆಗಿಂತಲೂ ಹೆಚ್ಚಾಗಿ ಮಿಂಚು, ಗುಡುಗು, ಸಿಡಿಲಿನ ಆರ್ಭಟ ಜೋರಾಗಿತ್ತು. ಜನರು ಮನೆಯಲ್ಲಿಯೇ ಕುಳಿತರೂ ಭಯ ಪಡುವಂತಾಗಿತ್ತು. ಮಳೆಗಿಂತಲೂ ಜೋರಾಗಿ ಬೀಸಿದ ಗಾಳಿಯಿಂದಾಗಿ ಹಲವೆಡೆ ವಿದ್ಯುತ್‌(Electricity) ವ್ಯತ್ಯಯವಾಗಿತ್ತು.

Karnataka Rains: ಕರ್ನಾಟಕದಲ್ಲಿ ಮುಂದಿನ 4 ದಿನ ಗುಡುಗು, ಸಿಡಿಲು ಸಹಿತ ಭಾರೀ ಮಳೆ..!

ಅತಿಯಾದ ಬಿಸಿಲಿನ ತಾಪದಿಂದ ತತ್ತರಿಸಿದ್ದ ಜನರಿಗೆ ಅಲ್ಪ ಮಳೆ ಕೆಲಕಾಲ ತಂಪಿನ ವಾತಾವರಣ ನಿರ್ಮಿಸಿದ್ದರೂ ನಂತರ ಜನ ಸೆಖೆಯಿಂದ ತತ್ತರಿಸುವಂತಾಯಿತು. ರೋಣ, ನರಗುಂದ ತಾಲೂಕಿನ ಕೆಲ ಗ್ರಾಮಗಳಲ್ಲಿಯೂ ಉತ್ತಮ ಮಳೆಯಾಗಿದೆ.

ಬೆಳಗಾವಿಯಲ್ಲಿ ಅಬ್ಬರಿಸಿದ ಮಳೆ

ಬೆಳಗಾವಿ: ಬೆಳಗಾವಿ(Belagavi) ನಗರದಲ್ಲಿ ಸೋಮವಾರ ರಾತ್ರಿ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಳೆ ಅಬ್ಬರಿಸಿದೆ. ಬೆಳಗ್ಗೆಯಿಂದಲೇ ತೀವ್ರ ಸೆಖೆ ಉಂಟಾಗಿತ್ತು. ಮಧ್ಯಾಹ್ನವೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ರಾತ್ರಿ 8 ಗಂಟೆ ಸುಮಾರಿಗೆ ಭಾರೀ ಗಾಳಿ ಮಳೆ ಸುರಿದಿದ್ದು, ರಾತ್ರಿಯೂ ಮುಂದುವರೆದಿತ್ತು. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ ಉಂಟಾಯಿತು. 

ಮಳೆಯಿಂದಾಗಿ ದ್ವಿಚಕ್ರವಾಹನ ಸವಾರರು ಪರದಾಡಬೇಕಾಯಿತು. ಬೀದಿ ಬದಿಯಲ್ಲಿ ತರಕಾರಿ ಮಾರಾಟ ಮಾಡುವ ವ್ಯಾಪಾರಸ್ಥರು ತೊಂದರೆ ಅನುಭವಿಸಬೇಕಾಯಿತು.ಕೆಲ ವ್ಯಾಪಾರಸ್ಥರ ತರಕಾರಿ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು. ರಸ್ತೆಯ ಇಕ್ಕೆಲಗಳಲ್ಲಿ ನೀರು ತುಂಬಿ ಹರಿಯಿತು.