ಬೆಂಗಳೂರಿನ ಎಂಎಸ್‌ಐಎಲ್ ಚಿಟ್​ಫಂಡ್ ಕಚೇರಿಯಲ್ಲಿ, ಕಳೆದುಹೋದ ಚೆಕ್‌ಬುಕ್ ಹುಡುಕುವ ನೆಪದಲ್ಲಿ ಮಹಿಳಾ ಉದ್ಯೋಗಿಯ ಬಟ್ಟೆ ಬಿಚ್ಚಿಸಿ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ, ಜನರಲ್ ಮ್ಯಾನೇಜರ್ ಸೇರಿದಂತೆ ಮೂವರು ಹಿರಿಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ನಾಪತ್ತೆಯಾದ ಚೆಕ್‌ಬುಕ್ ಹುಡುಕುವ ನೆಪದಲ್ಲಿ ಮಹಿಳಾ ಉದ್ಯೋಗಿಗೆ ಕಿರುಕುಳ:

ಬೆಂಗಳೂರು: MSILಚಿಟ್​ಫಂಡ್ ಅಧಿಕಾರಿಗಳು ನಾಪತ್ತೆಯಾದ ಚೆಕ್‌ಬುಕ್ ಹುಡುಕುವ ನೆಪದಲ್ಲಿ ಕಚೇರಿಗೆ ಮಹಿಳಾ ಉದ್ಯೋಗಿಯನ್ನು ಕರೆಸಿಕೊಂಡು ಆಕೆಯ ಬಟ್ಟೆ ಬಿಚ್ಚಿಸಿ ಕಿರುಕುಳ ನೀಡಿ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸರ್ಕಾರಿ ಸಂಸ್ಥೆಯಲ್ಲಿಯೇ ಮಹಿಳಾ ಉದ್ಯೋಗಿ ಮೇಲೆ ದೌರ್ಜನ್ಯವೆಸಗಿದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಎಂಎಸ್‌ಐಎಲ್‌ನ ಜನರಲ್ ಮ್ಯಾನೇಜರ್ ಚಂದ್ರಶೇಖರ್, ಡೆಪ್ಯುಟಿ ಮ್ಯಾನೇಜರ್ ನಳಿನಿ, ವೀಣಾ ಎಂಬುವವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಚೇರಿಯಲ್ಲೆ ಮಹಿಳೆಯ ಬಟ್ಟೆ ಬಿಚ್ಚಿಸಿ ವಿಕೃತಿ: ಜಾತಿ ನಿಂದನೆ

ಮೆರೆದಿದ್ದಲ್ಲದೇ ​ಜಾತಿ ನಿಂದನೆ ಮಾಡಿ ಅವಮಾನ ಮಾಡಿರುವ ಆರೋಪವನ್ನು ಮಹಿಳೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಪಶ್ಚಿಮ ಡಿಸಿಆರ್​​ಇ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಗೆ ಜಾತಿ ಹೆಸರಲ್ಲಿ ಅವಾಚ್ಯವಾಗಿ ನಿಂದಿಸಿದ್ದು, ತಾವು ಹೇಳಿದ ಹಾಗೆ ಕೇಳಿದರೆ ಮಾತ್ರ ಕೆಲಸದಲ್ಲಿ ಮುಂದುವರಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿದ್ದಾರೆ

ಇದನ್ನೂ ಓದಿ: ಪಾಕ್ ಎಡವಟ್ಟಿನಿಂದ ಲೆಬನಾನ್ ಗೊಂದಲ: ಬೇರೆ ಬೇರೆ ಸಂಧಾನ ಪ್ರತಿ ಹಂಚಿ ಎಡವಟ್ಟು: ಇಸ್ರೇಲ್ ದಾಳಿಗೆ ಲೆಬನಾನ್‌ಲ್ಲಿ 300 ಬಲಿ

ಸಂತ್ರಸ್ತ ಮಹಿಳೆ ಎಂಎಸ್‌ಐಎಲ್ ಚಿಟ್ ಫಂಡ್ ಸಂಸ್ಥೆಯಲ್ಲಿ ಕಳೆದ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಚೆಕ್‌ ಬುಕ್ ಕಳೆದು ಹೋಗಿದೆ ಎಂದು ಮೂವರು ಅಧಿಕಾರಿಗಳು ಸಂತ್ರಸ್ತ ಮಹಿಳೆಯ ಮೇಲೆ ಕಳ್ಳತನದ ಆರೋಪ ಹೊರಿಸಿದ್ದಾರೆ. ಮಹಿಳೆಯೇ ಚೆಕ್ ಬುಕ್ ಕದ್ದಿದ್ದಾಳೆ ಎಂದು ಮೂವರು ಅಧಿಕಾರಿಗಳು ಆರೋಪಿಸಿದ್ದಾರೆ. ನಂತರ ವಿಚಾರಣೆ ಹೆಸರಲ್ಲಿ ಸಂಜೆ 6 ಗಂಟೆಯಿಂದ ಸಂತ್ರಸ್ತ ಮಹಿಳೆಗೆ ಮೂವರು ಅಧಿಕಾರಿಗಳು ನಿರಂತರ ಕಿರುಕುಳ ನೀಡಿದ್ದಾರೆ. ಸೆಕ್ಯೂರಿಟಿ ಕೊಠಡಿಗೆ ಕರೆದೊಯ್ದ ಅಧಿಕಾರಿಗಳು ಸಂತ್ರಸ್ತೆಯ ಇಚ್ಛೆಗೆ ವಿರುದ್ಧವಾಗಿ ಸಂತ್ರಸ್ತೆಯ ಬಟ್ಟೆ ತೆಗಿಸಿ ಅವಮಾನ ಮಾಡಿದ್ದಲ್ಲದೇ ​ರಾತ್ರಿ 8 ಗಂಟೆಯವರೆಗೆ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

ಇದನ್ನೂ ಓದಿ: ಹೋರ್ಮುಜ್ ಮೂಲಕ ನಿತ್ಯ 15 ಹಡಗು ಸಾಗಲು ಇರಾನ್ ಅಸ್ತು: ಹೋರ್ಮುಜ್‌ನಲ್ಲಿ ಜಲಸ್ಫೋಟಕ ಇಟ್ಟಿದ್ದ ಇರಾನ್

YouTube video player