ಬೆಂಗಳೂರು (ಮಾ.05):  ಡಿಸೇಲ್ ದರ ಏರಿಕೆ, ಗುಜರಿ ನೀತಿ ಖಂಡಿಸಿ ಲಾರಿ ಮಾಲಿಕ ಸಂಘ ಮುಷ್ಕರಕ್ಕೆ ತೀರ್ಮಾನ ಮಾಡಿದೆ. ಏಪ್ರಿಲ್ 5 ರಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ತೀರ್ಮಾನ ಮಾಡಿದೆ.  

ಕೂಡಲೇ ಕೇಂದ್ರ ಡಿಸೇಲ್ ದರ ಏರಿಕೆಗೆ ಕಡಿವಾಣ ಹಾಕಬೇಕು. ಗುಜರಿ ನೀತಿ ತಕ್ಷಣವೇ ವಾಪಾಸ್ ಪಡೆಯಬೇಕು ಎಂದು ಒತ್ತಾಯ ಮಾಡಿದೆ.  ಬೇಡಿಕೆ ಈಡೇರಿಸದಿದ್ದರೆ ಅಗತ್ಯ ವಸ್ತುಗಳ ಸೇವೆಯನ್ನೂ ಸ್ಥಗಿತಗೊಳಿಸಲು ನಿರ್ಧಾರ ಮಾಡಿದೆ.  

ಪೆಟ್ರೋಲ್‌ ಬೆಲೆ 8.5 ರು. ಇಳಿಸಿದರೂ ಸರ್ಕಾರಕ್ಕೆ ನಷ್ಟವಿಲ್ಲ, ನಿರೀಕ್ಷೆಗೂ ಮೀರಿ ಆದಾಯ!

ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಚನ್ನಾರೆಡ್ಡಿ ಈ ಬಗ್ಗೆ ಮಾತನಾಡಿ ಲಾಕ್ ಡೌನ್ ಸಮಯದಲ್ಲಿ ಸರಕು ಸಾಗಾಣಿಕೆ ವಲಯ ಸಂಕಷ್ಟದಲ್ಲಿದೆ.  ಇಂಥ ಸಮಯದಲ್ಲಿ ಇಂಧನ ಏರಿಕೆ ದಿನಂಪ್ರತಿ ಮಾಡುತ್ತಿರುವುದು ಸರಿಯಲ್ಲ.  ಕಳೆದ 6 ತಿಂಗಳಿನಿಂದ ಪ್ರತಿ ಲೀಟರ್ ಡಿಸೇಲ್ ಗೆ 20.42 ರು. ಏರುಕೆಯಾಗಿದೆ ಬೆಲೆ ಏರಿಕೆಗೆ ಕಡಿವಾಣ ಹಾಕಿ ಅಂತ ಪತ್ರ ಬರೆದಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಹೀಗೆ ಮಾಡಿದ್ರೆ ಪೆಟ್ರೋ​ಲ್‌ 75 ರು.ಗೆ ಲಭ್ಯ

15 ವರ್ಷ ಮೇಲ್ಪಟ್ಟ ವಾಹನಗಳನ್ನ ಗುಜರಿಗೆ ಹಾಕುವುದು ಸರಿಯಲ್ಲ. ರಸ್ತೆ ಮೇಲೆ ಓಡಾಡಲು ಯೋಗ್ಯವಿದ್ದರೆ ಓಡಿಸಲು ಅವಕಾಶ ನೀಡಬೇಕು. ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ದಂಡವನ್ನ ಕೇಂದ್ರ ಮನಸೋ ಇಚ್ಚೇ ಹೆಚ್ಚಳ ಮಾಡುತ್ತಿದೆ.  500ರು. ಇದ್ದ ದಂಡವನ್ನ 20000 ಕ್ಕೆ ಹೆಚ್ಚಳ ಮಾಡಿರುವುದು ಸರಿಯಲ್ಲ.  ದಂಡದ ಮೊತ್ತ ಹೆಚ್ಚಳ ದಿಂದ ಹೈವೇಗಳಲ್ಲಿ ಲಂಚದ ಪ್ರಮಾಣ ಹೆಚ್ಚಳವಾಗುತ್ತಿದೆ ಎಂದರು.

ಇನ್ನು ವಾಹನಗಳ ಥರ್ಡ್ ಪಾರ್ಟಿ ಇನ್ಸುರೆನ್ಸ್ ನ ಪ್ರೀಮಿಯಂ ಏರಿಕೆ ಮಾಡಲಾಗಿದೆ. 2001 ರಲ್ಲಿ 1250 ರು. ಇದ್ದ ಪ್ರೀಮಿಯಂ 2021ರಲ್ಲಿ 45 ಸಾವಿರಕ್ಕೆ ಹೆಚ್ಚಳವಾಗಿದೆ. ಇದ ಸರಿಯಲ್ಲ ಎಂದು ಅಸಮಾಧಾನ  ವ್ಯಕ್ತಪಡಿಸಿದರು.