Asianet Suvarna News Asianet Suvarna News

ಹೀಗೆ ಮಾಡಿದ್ರೆ ಪೆಟ್ರೋ​ಲ್‌ 75 ರು.ಗೆ ಲಭ್ಯ

ದೇಶದಲ್ಲಿ ಪೆಟ್ರೋಲ್ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಜನ ತೈಲ ದರ ಏರಿಕೆಯಿಂದ ತತ್ತರಿಸಿದ್ದು ಹೀಗ್ ಮಾಡಿದಲ್ಲಿ 75 ರು.ಗೆ ಗ್ರಾಹಕರಿಗೆ ಪೆಟ್ರೋಲ್ ಸಿಗಲಿದೆ. 

If brought under GST petrol price can come down to Rs 75 snr
Author
Bengaluru, First Published Mar 5, 2021, 7:25 AM IST

ಮುಂಬೈ (ಮಾ.05): ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಸರಕು ಮತ್ತು ಸೇವಾ ತೆರಿಗೆ(ಜಿಎ​ಸ್‌​ಟಿ) ವ್ಯಾಪ್ತಿಗೆ ತಂದಲ್ಲಿ ದೇಶಾ​ದ್ಯಂತ ಹೆಚ್ಚು ಕಡಿಮೆ 100 ರು.ಗೆ ಮಾರಾ​ಟ​ವಾ​ಗು​ತ್ತಿ​ರುವ ಲೀ. ಪೆಟ್ರೋಲ್‌ ಬೆಲೆ 75 ರು.ಗೆ ಇಳಿ​ಕೆ​ಯಾ​ಗ​ಲಿದೆ. ಜೊತೆಗೆ ಡೀಸೆಲ್‌ ದರವು 68 ರು.ಗೆ ಸೀಮಿ​ತ​ವಾ​ಗ​ಲಿದೆ ಎಂದು ಎಸ್‌​ಬಿ​ಐನ ಆರ್ಥಿಕ ತಜ್ಞರು ಪ್ರತಿ​ಪಾ​ದಿ​ಸಿ​ದ್ದಾರೆ. ಆದರೆ ವಿಶ್ವ​ದಲ್ಲೇ ಅತಿ​ಹೆಚ್ಚು ಬೆಲೆಗೆ ಮಾರಾ​ಟ​ವಾ​ಗು​ತ್ತಿ​ರುವ ತೈಲವನ್ನು ಜಿಎ​ಸ್‌​ಟಿ ವ್ಯಾಪ್ತಿಗೆ ತರುವ ವಿಚಾ​ರ​ದಲ್ಲಿ ರಾಜ​ಕೀಯ ಇಚ್ಛಾ​ಶ​ಕ್ತಿಯ ಕೊರತೆ ಎದ್ದು ಕಾಣು​ತ್ತಿದೆ ಎಂದು ಅವರು ಅಭಿ​ಪ್ರಾ​ಯ​ಪ​ಟ್ಟಿ​ದ್ದಾರೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಜಿಎ​ಸ್‌ಟಿ ವ್ಯಾಪ್ತಿಗೆ ತಂದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾ​ರ​ಗ​ಳಿಗೆ ಒಟ್ಟಾರೆ ಜಿಡಿ​ಪಿಯ ಶೇ.0.4ರಷ್ಟುಅಥವಾ ಕೇವಲ 1 ಲಕ್ಷ ಕೋಟಿ ರು. ಆದಾ​ಯ ನಷ್ಟ​ವಾ​ಗ​ಲಿದೆ ಎಂದು ಎಸ್‌​ಬಿ​ಐನ ಆರ್ಥಿಕ ತಜ್ಞರ ಲೆಕ್ಕಾ​ಚಾ​ರ​.

ಪೆಟ್ರೋಲ್‌ ಬೆಲೆ 8.5 ರು. ಇಳಿಸಿದರೂ ಸರ್ಕಾರಕ್ಕೆ ನಷ್ಟವಿಲ್ಲ, ನಿರೀಕ್ಷೆಗೂ ಮೀರಿ ಆದಾಯ! ..

ಪ್ರಸ್ತುತ ಒಂದು ಬ್ಯಾರೆಲ್‌ ಕಚ್ಚಾ​ತೈ​ಲದ ಬೆಲೆ 60 ಡಾಲರ್‌ ಇದೆ. ಇದ​ನ್ನು ರು. ಮೌಲ್ಯಕ್ಕೆ ಲೆಕ್ಕಾ​ಚಾರ ಹಾಕಿ ಆರ್ಥಿಕ ತಜ್ಞರು ಈ ಅಭಿ​ಪ್ರಾ​ಯ​ಗ​ಳನ್ನು ಮಂಡಿ​ಸಿ​ದ್ದಾರೆ.

ಪೆಟ್ರೋ​ಲಿಯಂ ಉತ್ಪ​ನ್ನ​ಗಳ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾ​ರ​ಗಳು ಸಹ ಮಾರಾಟ ತೆರಿಗೆ, ಮೌಲ್ಯಾ​ಧಾ​ರಿತ ತೆರಿಗೆ ಸೇರಿ​ದಂತೆ ಇನ್ನಿ​ತರ ತೆರಿ​ಗೆ​ಗ​ಳನ್ನು ವಿಧಿ​ಸು​ತ್ತಿದ್ದು, ಸರ್ಕಾ​ರ​ಗ​ಳಿಗೆ ಇವು ಆದಾ​ಯದ ಮುಖ್ಯ ಮೂಲ​ಗ​ಳಾ​ಗಿವೆ. ಈ ಹಿನ್ನೆ​ಲೆ​ಯಲ್ಲಿ ಇವು​ಗ​ಳನ್ನು ಜಿಎ​ಸ್‌​ಟಿ ವ್ಯಾಪ್ತಿಗೆ ತಂದರೆ ತಮ್ಮ ಆದಾ​ಯ ಖೋತಾ ಆಗ​ಲಿದೆ ಎಂಬ ಆತಂಕ​ವಿದೆ ಎಂದು ತಜ್ಞರು ತಿಳಿ​ಸಿ​ದ್ದಾರೆ.

Follow Us:
Download App:
  • android
  • ios