ಬರಗಾಲದಲ್ಲೂ ಬೆಳೆದ ಜೋಳ ಮಾರಿ ರಾಮ ಮಂದಿರಕ್ಕೆ ₹91000 ದೇಣಿಗೆ ನೀಡಿದ ರೈತ!
ಸಿಂಧನೂರಿನ ಗೋಮರ್ಸಿ ಗ್ರಾಮದ ಸಣ್ಣ ಕರಿಯಪ್ಪ ಎಂಬ ರೈತ, ತೀವ್ರ ಬರಗಾಲದಲ್ಲೂ ಬೆಳೆದ ಜೋಳವನ್ನು ಮಾರಾಟ ಮಾಡಿ ಅದರಿಂದ ಬಂದ 91000 ರು. ಹಣವನ್ನು ಅಯೋಧ್ಯೆ ರಾಮಮಂದಿರಕ್ಕೆ ದೇಣಿಗೆ ನೀಡಿದ್ದಾರೆ.
ರಾಯಚೂರು (ಜ.24) : ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಕೋಟ್ಯಂತರ ರಾಮಭಕ್ತರ ಭಕ್ತಿಯ ಕಾಣಿಕೆ ಇದೆ. ದೇಶದ್ಯಾಂತ ಹಲವು ರೀತಿಯ ಕಾಣಿಕೆ ನೀಡಿರುವ ಭಕ್ತರು. ಹಣ ಇದ್ದವರು ಹಣ, ಹಣವಿಲ್ಲದ ಬಡವರು ಬೆಳೆದ ಬೆಳೆಯನ್ನೇ ಮಾರಾಟ ಮಾಡಿ ಹಣ ನೀಡಿದ್ದಾರೆ. ಅಯೋದ್ಯೆ ಮಂದಿರದ ಮುಂದೆ ಭಕ್ತರ ಪಾದರಕ್ಷೆ ಕಾಯುವ ವೃದ್ಧೆಯೊಬ್ಬಳು ಭಕ್ತರು ಕೊಟ್ಟ ಹಣವನ್ನು ಕೂಡಿಟ್ಟಿದ್ದ ಲಕ್ಷಾಂತರ ಹಣವನ್ನ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನೀಡಿ ಗಮನ ಸೆಳೆದಿದ್ದಳು. ಇಲ್ಲೊಬ್ಬ ರೈತನು ಅದೇ ರೀತಿಯಲ್ಲಿ ಗಮನ ಸೆಳೆದಿದ್ದಾನೆ.. ಉತ್ತರ ಕರ್ನಾಟಕ ಅದರಲ್ಲೂ ರಾಯಚೂರು ಈ ಬಾರಿ ತೀವ್ರ ಬರಗಾಲ ಬಂದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಬರದ ಪರಿಸ್ಥಿತಿಯಲ್ಲೂ ಬೆಳೆದ ಬೆಳೆ ಮಾರಾಟ ಮಾಡಿ ಅಯೋಧ್ಯೆ ರಾಮಮಂದಿರಕ್ಕೆ ದೇಣಿಗೆ ನೀಡಿ ಭಕ್ತ ಮೆರೆದಿದ್ದಾನೆ.
ಸಿಂಧನೂರಿನ ಗೋಮರ್ಸಿ ಗ್ರಾಮದ ಸಣ್ಣ ಕರಿಯಪ್ಪ ಎಂಬ ರೈತ, ತೀವ್ರ ಬರಗಾಲದಲ್ಲೂ ಬೆಳೆದ ಜೋಳವನ್ನು ಮಾರಾಟ ಮಾಡಿ ಅದರಿಂದ ಬಂದ 91000 ರು. ಹಣವನ್ನು ಅಯೋಧ್ಯೆ ರಾಮಮಂದಿರಕ್ಕೆ ದೇಣಿಗೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಪೇಜಾವರ ಶ್ರೀಗಳಿಂದ ಮಂಡಲೋತ್ಸವ
ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದ 120 ಚೀಲ ಬದಲಾಗಿ ಕೇವಲ 80 ಚೀಲ ಜೋಳ ಇಳುವರಿ ಬಂದಿತ್ತು. ತಮ್ಮ ಖರ್ಚಿಗಾಗಿ 30 ಚೀಲ ಉಳಿಸಿಕೊಂಡು, ಉಳಿದ 50 ಚೀಲ ಜೋಳವನ್ನು ಮಾರಾಟ ಮಾಡಿ, ಅದರಿಂದ ಬಂದ 91,870 ರು.ಗಳನ್ನು ಆರ್‌ಟಿಜಿಎಸ್ ಮೂಲಕ ಶ್ರೀರಾಮಜನ್ಮಭೂಮಿ ಟ್ರಸ್ಟ್‌ಗೆ ಮಂಗಳವಾರ ಪಾವತಿ ಮಾಡಿದ್ದಾರೆ.