Asianet Suvarna News Asianet Suvarna News

ಅಯೋಧ್ಯೆಯಲ್ಲಿ ಪೇಜಾವರ ಶ್ರೀಗಳಿಂದ ಮಂಡಲೋತ್ಸವ

ಅಯೋಧ್ಯೆಯಲ್ಲಿ ಸೋಮವಾರ ವೈಭವದ ರಾಮದೇವರ ಪ್ರತಿಷ್ಠೆಯು ನಡೆದಿದ್ದು, ಮಂಗಳವಾರದಿಂದ 48 ದಿನಗಳ ಮಂಡಲೋತ್ಸವ ಆರಂಭವಾಗಿದೆ. ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಈ ಮಂಡಲೋತ್ಸವದ ನೇತೃತ್ವ ವಹಿಸಿದ್ದಾರೆ.

Mandalotsava at Ayodhya by Pejavarashree rav
Author
First Published Jan 24, 2024, 5:58 AM IST

 ಉಡುಪಿ (ಜ.24) : ಅಯೋಧ್ಯೆಯಲ್ಲಿ ಸೋಮವಾರ ವೈಭವದ ರಾಮದೇವರ ಪ್ರತಿಷ್ಠೆಯು ನಡೆದಿದ್ದು, ಮಂಗಳವಾರದಿಂದ 48 ದಿನಗಳ ಮಂಡಲೋತ್ಸವ ಆರಂಭವಾಗಿದೆ. ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಈ ಮಂಡಲೋತ್ಸವದ ನೇತೃತ್ವ ವಹಿಸಿದ್ದಾರೆ.

ಶ್ರೀಗಳು ಮೊದಲು ಮಂತ್ರಗಳಿಂದ ಪ್ರತಿಮೆಗೆ ತತ್ವನ್ಯಾಸಾದಿಗಳನ್ನು ನೆರವೇರಿಸಿ ಕಲಶಪೂಜೆ, ಚಾಮರಸೇವೆ, ಮಂಗಳಾರತಿಗಳನ್ನು ನೆರವೇರಿಸಿ ಪೂಜೆ ಸಲ್ಲಿಸಿದರು .

ಇದಕ್ಕೂ ಮೊದಲು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ವಿದ್ವಾನ್ ಸತ್ಯನಾರಾಯಣಾಚಾರ್ಯ, ವಿಷ್ಣುಮೂರ್ತಿ ಆಚಾರ್ಯ, ಶಶಾಂಖ ಭಟ್, ಲಕ್ಷ್ಮೀನಾರಾಯಣ ಭಟ್ ಮೊದಲಾದವರ ನೇತೃತ್ವದಲ್ಲಿ ವಿವಿಧ ಹೋಮ, ಹವನ, ಕಲಶಾರಾಧನೆ ಇತ್ಯಾದಿಗಳು ನೆರವೇರಿದವು.

ರಾಮಮಂದಿರ ನಿರ್ಮಾಣದಲ್ಲಿ ಪೇಜಾವರ ಶ್ರೀಗಳ ಪ್ರಯತ್ನ ಬಹಳ ಇದೆ: ಕಾಣಿಯೂರು ಶ್ರೀ

Follow Us:
Download App:
  • android
  • ios