ಬೆಂಗಳೂರು-ಧಾರವಾಡ ‘ವಂದೇ ಭಾರತ್‌’ ರೈಲಿನ ದರ ಪರಿಷ್ಕರಣೆ, ಹೊಸ ರೇಟ್‌ ಹೀಗಿದೆ

ಕೆಎಸ್‌ಆರ್‌-ಯಶವಂತಪುರ ದರ 410 ರು.ನಿಂದ 365ಕ್ಕೆ ಇಳಿಕೆ, ಧಾರವಾಡ-ಹುಬ್ಬಳ್ಳಿ ದರ ಕೂಡ 365 ರು.ಗೆ ಇಳಿಕೆ, ಆದರೆ ಎಕ್ಸಿಕ್ಯೂಟಿವ್‌ ದರ 545ರಿಂದ 690 ರು.ಗೆ ಹೆಚ್ಚಳ, ಪ್ರತಿ ನಿಲ್ದಾಣದ ನಡುವಿನ ಎಕ್ಸಿಕ್ಯೂಟಿವ್‌ ದರ 20 ಹೆಚ್ಚಳ

Fare Revision of Bengaluru-Dharwad Vande Bharat Train grg

ಬೆಂಗಳೂರು(ಜೂ.28): ನೈಋುತ್ಯ ರೈಲ್ವೆಯು ಬೆಂಗಳೂರು-ಧಾರವಾಡ-ಬೆಂಗಳೂರು ವಂದೇ ಭಾರತ್‌ ರೈಲು ದರವನ್ನು ಉದ್ಘಾಟನೆಯಾದ ದಿನವೇ ಪರಿಷ್ಕರಣೆ ಮಾಡಿದ್ದು, ಹೊಸ ದರವನ್ನು ಪ್ರಕಟಿಸಿದೆ.

ಈ ಮೊದಲು ಕೆಎಸ್‌ಆರ್‌ ರೈಲು ನಿಲ್ದಾಣದಿಂದ ಯಶವಂತಪುರ ನಿಲ್ದಾಣಕ್ಕೆ 410 ರು. ನಿಗದಿ ಮಾಡಲಾಗಿತ್ತು. ಈಗ 365ಕ್ಕೆ ಇಳಿಕೆ ಮಾಡಲಾಗಿದೆ. ಅದೇ ರೀತಿ ಧಾರವಾಡದಿಂದ ಹುಬ್ಬಳ್ಳಿಗೆ ಇದೇ ರೀತಿ ಕಡಿಮೆ ಮಾಡಲಾಗಿದೆ. ಆದರೆ ಎಕ್ಸಿಕ್ಯೂಟಿವ್‌ ಕ್ಲಾಸ್‌ನಲ್ಲಿ ಇದೇ ನಿಲ್ದಾಣಗಳ ನಡುವೆ ಸಂಚರಿಸಲು ಈ ಮೊದಲು ನಿಗದಿ ಮಾಡಿದ್ದ 545ರು. ಬದಲು 690 ರು.ಗೆ ಹೆಚ್ಚಿಸಲಾಗಿದೆ. ಜತೆಗೆ ಪ್ರತಿ ನಿಲ್ದಾಣಗಳ ನಡುವಿನ ಪ್ರಯಾಣದ ದರವನ್ನು 20 ರು. ಹೆಚ್ಚಿಸಲಾಗಿದೆ.

ಧಾರವಾಡ- ಬೆಂಗಳೂರು ವಂದೇ ಭಾರತ್‌ ರೈಲು ಟಿಕೆಟ್ ದರದ ಸಂಪೂರ್ಣ ಮಾಹಿತಿ ಇಲ್ಲಿದೆ

*ಬೆಂಗಳೂರಿಂದ ಧಾರವಾಡ (ರೈ.ಸಂ. 20661) ಎಸಿ ಚೇರ್‌ಕಾರ್‌:

ಬೆಂಗಳೂರು ಕೆಎಸ್‌ಆರ್‌-ಯಶವಂತಪುರ . 365, ಬೆಂಗಳೂರು- ದಾವಣಗೆರೆ .935, ಕೆಎಸ್‌ಆರ್‌ ಬೆಂಗಳೂರು- ಹುಬ್ಬಳ್ಳಿ .1155, ಬೆಂಗಳೂರು-ಧಾರವಾಡ .1185. ಯಶವಂತಪುರದಿಂದ ದಾವಣಗೆರೆ .920, ಯಶವಂತಪುರ-ಹುಬ್ಬಳ್ಳಿ .1155, ಯಶವಂತಪುರ-ಧಾರವಾಡ .1185, ದಾವಣಗೆರೆ-ಹುಬ್ಬಳ್ಳಿ .520, ದಾವಣಗೆರೆ-ಧಾರವಾಡ .555, ಹುಬ್ಬಳ್ಳಿ -ಧಾರವಾಡ .365.

ಎಕ್ಸಿಕ್ಯೂಟಿವ್‌ ಕ್ಲಾಸ್‌:

ಬೆಂಗಳೂರು ಕೆಎಸ್‌ಆರ್‌-ಯಶವಂತಪುರ . 690, ಬೆಂಗಳೂರು-ದಾವಣಗೆರೆ .1760, ಬೆಂಗಳೂರು- ಹುಬ್ಬಳ್ಳಿ .2200, ಬೆಂಗಳೂರು- ಧಾರವಾಡ .2265 ಇದೆ. ಯಶವಂತಪುರ-ದಾವಣಗೆರೆ .1730, ಯಶವಂತಪುರ-ಹುಬ್ಬಳ್ಳಿ .2200, ಯಶವಂತಪುರ-ಧಾರವಾಡ .2265, ದಾವಣಗೆರೆ-ಹುಬ್ಬಳ್ಳಿ .1005, ದಾವಣಗೆರೆ-ಧಾರವಾಡ .1075, ಹುಬ್ಬಳ್ಳಿ -ಧಾರವಾಡ .690.

ಬೆಂಗಳೂರು-ಧಾರವಾಡ ವಂದೇ ಭಾರತ್‌ ರೈಲಿಗೆ ಪ್ರಧಾನಿ ಮೋದಿ ಚಾಲನೆ, ಕರ್ನಾಟಕದ 2ನೇ ಎಕ್ಸ್‌ಪ್ರೆಸ್ ರೈಲು ಹೆಗ್ಗಳಿಕೆ!

ಧಾರವಾಡದಿಂದ ಬೆಂಗಳೂರು (ರೈ.ಸಂ. 20662)
ಎಸಿ ಚೇರ್‌ಕಾರ್‌:

ಧಾರವಾಡ-ಕೆಎಸ್‌ಆರ್‌ ಬೆಂಗಳೂರು .1350, ಹುಬ್ಬಳ್ಳಿ- ಬೆಂಗಳೂರು .1320, ದಾವಣಗೆರೆ-ಬೆಂಗಳೂರು .880, ಯಶವಂತಪುರ-ಕೆಎಸ್‌ಆರ್‌ ಬೆಂಗಳೂರು .365, ದಾವಣಗೆರೆ-ಯಶವಂತಪುರ .865, ಹುಬ್ಬಳ್ಳಿ-ಯಶವಂತಪುರ .1320, ಧಾರವಾಡ- ಯಶವಂತಪುರ .1350, ಹುಬ್ಬಳ್ಳಿ- ದಾವಣಗೆರೆ . 725, ಧಾರವಾಡ- ದಾವಣಗೆರೆ . 765, ಧಾರವಾಡ-ಹುಬ್ಬಳ್ಳಿ .365

ಎಕ್ಸಿಕ್ಯೂಟಿವ್‌ ಕ್ಲಾಸ್‌:

ಧಾರವಾಡ-ಕೆಎಸ್‌ಆರ್‌ ಬೆಂಗಳೂರು . 2460, ಹುಬ್ಬಳ್ಳಿ- ಬೆಂಗಳೂರು .2395, ದಾವಣಗೆರೆ-ಬೆಂಗಳೂರು .1710, ಯಶವಂತಪುರ-ಕೆಎಸ್‌ಆರ್‌ ಬೆಂಗಳೂರು .690, ದಾವಣಗೆರೆ-ಯಶವಂತಪುರ .1680, ಹುಬ್ಬಳ್ಳಿ-ಯಶವಂತಪುರ 2395, ಧಾರವಾಡ- ಯಶವಂತಪುರ .2460, ಹುಬ್ಬಳ್ಳಿ- ದಾವಣಗೆರೆ . 1235, ಧಾರವಾಡ-ದಾವಣಗೆರೆ .1305, ಧಾರವಾಡ-ಹುಬ್ಬಳ್ಳಿ .690.

Latest Videos
Follow Us:
Download App:
  • android
  • ios