ಧಾರವಾಡ- ಬೆಂಗಳೂರು ವಂದೇ ಭಾರತ್‌ ರೈಲು ಟಿಕೆಟ್ ದರದ ಸಂಪೂರ್ಣ ಮಾಹಿತಿ ಇಲ್ಲಿದೆ

ಧಾರವಾಡ- ಬೆಂಗಳೂರು ಮಧ್ಯೆ ಸಂಚರಿಸಲಿರುವ ‘ವಂದೇ ಭಾರತ್‌’ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿದ್ದು, ಟಿಕೆಟ್ ದರ ಕೂಡ ನಿಗದಿಯಾಗಿದೆ. ಇಲ್ಲಿ ಟಿಕೆಟ್ ದರದ ಮಾಹಿತಿ ನೀಡಲಾಗಿದೆ.

bengaluru-dharwad vande bharat express train ticket price kannada news gow

ಹುಬ್ಬಳ್ಳಿ (ಜೂ.27): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಧಾರವಾಡ- ಬೆಂಗಳೂರು ಮಧ್ಯೆ ಸಂಚರಿಸಲಿರುವ ‘ವಂದೇ ಭಾರತ್‌’ ರೈಲು ಸಂಚಾರಕ್ಕೆ ಜೂ. 27ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಈ ರೈಲಿನಲ್ಲಿ ಬೆಂಗಳೂರು-ಧಾರವಾಡಕ್ಕೆ 6ಗಂಟೆಯಲ್ಲೇ ಪ್ರಯಾಣಿಸಬಹುದಾಗಿದೆ. ಇನ್ನು  ರೈಲ್ವೆ ಇಲಾಖೆಯು  ಬೆಂಗಳೂರು-ಧಾರವಾಡಕ್ಕೆ ಸಂಚರಿಸುವ ಅಧಿಕೃತ ದರಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಎಸಿ ಚೇರ್‌ ಕಾರ್‌ ಮತ್ತು ಎಕ್ಸಕ್ಯೂಟಿವ್‌ ಕ್ಲಾಸ್‌ಗೆ ಪ್ರತ್ಯೇಕ ದರ ನಿಗದಿಯಾಗಿದ್ದು, ಈ ಕೆಳಗೆ ನೀಡಲಾಗಿದೆ.  ಆದರೆ, ಈ ದರ ವಿಪರೀತವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಈ ರೈಲು ಜೂನ್ 28ರಿಂದ ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತವಾಗಲಿದೆ.

ವಂದೇ ಭಾರತ್‌ ರೈಲಲ್ಲಿ ಒಮ್ಮೆಯಾದ್ರೂ ಹೋಗ್ಬೆಕು ಅನ್ನೋ ಆಸೆಗೆ ತಣ್ಣೀರೆರಚಿದ ರೈಲ್ವೆ ಇಲಾಖೆ: ಪ್ರಯಾಣಿಕನ ಆಕ್ರೋಶ!

ಬೆಂಗಳೂರಿನಿಂದ ಬೆಳಗ್ಗೆ 5.45ಗಂಟೆಗೆ ಹೊರಡುವ 20661 ಸಂಖ್ಯೆಯ ವಂದೇ ಭಾರತ್‌ ರೈಲು ಬೆಂಗಳೂರಿನಿಂದ ಯಶವಂತಪುರಕ್ಕೆ ಎಸಿ ಚೇರ್‌ ಕಾರ್‌ .410ರೂ  ಎಕ್ಸಕ್ಯೂಟಿವ್‌ ಕ್ಲಾಸ್‌ಗೆ .545 ರೂ ದರ ನಿಗದಿಗೊಳಿಸಿದೆ. ಬೆಂಗಳೂರಿನಿಂದ ದಾವಣಗೆರೆಗೆ .915 ರೂ ,1740 ರೂ ಬೆಂಗಳೂರಿನಿಂದ ಹುಬ್ಬಳ್ಳಿಗೆ  1135ರೂ ಮತ್ತು 2180ರೂ, ಬೆಂಗಳೂರಿನಿಂದ ಧಾರವಾಡಕ್ಕೆ .1165 ರೂ ಮತ್ತು  2010ರೂ, ಯಶವಂತಪುರದಿಂದ ದಾವಣಗೆರೆಗೆ .900 ರೂ, .1710 ರೂ, ಯಶವಂತಪುರದಿಂದ ಹುಬ್ಬಳ್ಳಿಗೆ .1135 ರೂ, .2180 ರೂ, ಯಶವಂತಪುರದಿಂದ ಧಾರವಾಡಕ್ಕೆ .1165 ರೂ, .2245 ರೂ, ದಾವಣಗೆರೆಯಿಂದ ಹುಬ್ಬಳ್ಳಿಗೆ .500 ರೂ, .985 ರೂ, ದಾವಣಗೆರೆಯಿಂದ ಧಾರವಾಡಕ್ಕೆ .535 ರೂ, .1055 ರೂ, ಹುಬ್ಬಳ್ಳಿಯಿಂದ ಧಾರವಾಡಕ್ಕೆ .410 ರೂ, .545 ರೂ ದರ ನಿಗದಿಗೊಳಿಸಲಾಗಿದೆ. ಈ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಬೆಳಗಿನ ಉಪಹಾರದ ವೆಚ್ಚ ಸೇರಿ ಈ ದರ ನಿಗದಿಗೊಳಿಸಲಾಗಿದೆ.

ಬೆಂಗಳೂರು-ಧಾರವಾಡ ವಂದೇ ಭಾರತ್‌ ರೈಲಿಗೆ ಪ್ರಧಾನಿ ಮೋದಿ ಚಾಲನೆ, ಕರ್ನಾಟಕದ 2ನೇ ಎಕ್ಸ್‌ಪ್ರೆಸ್ ರೈಲು ಹೆಗ್ಗಳಿಕೆ!

ಮಧ್ಯಾಹ್ನ 1.15ಕ್ಕೆ ಧಾರವಾಡದಿಂದ ಬಿಡುವ 20662 ಸಂಖ್ಯೆಯ ವಂದೇ ಭಾರತ್‌ ರೈಲು ಧಾರವಾಡದಿಂದ ಹುಬ್ಬಳ್ಳಿಗೆ ಎಸಿ ಚೇರ್‌ ಕಾರ್‌ಗೆ .1300 ರೂ, ಎಕ್ಸಕ್ಯೂಟಿವ್‌ ಕಾರ್‌ಗೆ .2440 ರೂ ದರ ನಿಗದಿಗೊಳಿಸಲಾಗಿದೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ .1300 ರೂ, .2375 ರೂ, ದಾವಣಗೆರೆಯಿಂದ ಬೆಂಗಳೂರು .860 ರೂ, .1690 ರೂ, ಯಶವಂತಪುರದಿಂದ ಬೆಂಗಳೂರು .410 ರೂ, .545 ರೂ, ದಾವಣಗೆರೆಯಿಂದ ಯಶವಂತಪುರಕ್ಕೆ .845 ರೂ, .1660 ರೂ, ಹುಬ್ಬಳ್ಳಿಯಿಂದ ಯಶವಂತಪುರಕ್ಕೆ .1300 ರೂ, .2375 ರೂ, ಧಾರವಾಡದಿಂದ ಯಶವಂತಪುರಕ್ಕೆ .1340 ರೂ, 2440 ರೂ, ಹುಬ್ಬಳ್ಳಿಯಿಂದ ದಾವಣಗೆರೆಗೆ .705 ರೂ, .1215 ರೂ, ಧಾರವಾಡದಿಂದ ದಾವಣಗೆರೆಗೆ .754 ರೂ, 1285 ರೂ, ಧಾರವಾಡದಿಂದ ಹುಬ್ಬಳ್ಳಿಗೆ .410 ರೂ, .545 ರೂ ದರ ನಿಗದಿಗೊಳಿಸಲಾಗಿದೆ. ಈ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮಧ್ಯಾಹ್ನ ಊಟದ ವೆಚ್ಚ ಸೇರಿ ಈ ದರ ನಿಗದಿಗೊಳಿಸಲಾಗಿದೆ. ಹೀಗಾಗಿ  ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್‌ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಧ್ಯಾಹ್ನ ಹೊರಟ ವೇಳೆ ಧಾರವಾಡ-ದಾವಣಗೆರೆ ಮಧ್ಯೆ ಊಟ, ಸ್ನಾಕ್ಸ್‌ಗಳನ್ನು ನೀಡಲಾಗುತ್ತದೆ. ಹೀಗಾಗಿ ಟಿಕೆಟ್‌ ದರ (ಊಟ ಒಳಗೊಂಡು) ಹಿಂದಿರುಗುವಾಗ ಹೆಚ್ಚಾಗಿದೆ.

Latest Videos
Follow Us:
Download App:
  • android
  • ios