Asianet Suvarna News Asianet Suvarna News

ದೇವಾನುದೇವತೆಗೆ ಮೂರ್ತ ಸ್ವರೂಪದ ಜೀವ ತುಂಬಿದ ಮಾಂತ್ರಿಕ, ಚಿತ್ರ ಬ್ರಹ್ಮ BKS ವರ್ಮಾ ಇನ್ನಿಲ್ಲ

ಕನ್ನಡಾಂಬೆ ಹಾಗೂ ರಾಘವೇಂದ್ರ ಸ್ವಾಮಿ ಅವರ ಚಿತ್ರ ಸೇರಿದಂತೆ ಅನೇಕ ಉತ್ತಮ ಚಿತ್ರಗಳನ್ನು ರಚಿಸಿರುವ ಖ್ಯಾತ ಕಾಲವಿದ ಬಿ.ಕೆ. ಎಸ್‌. ವರ್ಮಾ ನಿಧನರಾಗಿದ್ದಾರೆ. 

famous bengaluru based painter bks varma dies at 73 due to heart attack ash
Author
First Published Feb 6, 2023, 10:29 AM IST

ಬೆಂಗಳೂರು (ಫೆ 6, 2023):  ಬೆಂಗಳೂರು ಮೂಲದ ಖ್ಯಾತ ಕಲಾವಿದ ಬಿ.ಕೆ.ಎಸ್‌. ವರ್ಮಾ ನಿಧನರಾಗಿದ್ದಾರೆ. ಹೃದಯಾಘಾತದಿಂದ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಕನ್ನಡಾಂಬೆ ಹಾಗೂ ರಾಘವೇಂದ್ರ ಸ್ವಾಮಿ ಅವರ ಚಿತ್ರ ಸೇರಿದಂತೆ ಅನೇಕ ಉತ್ತಮ ಚಿತ್ರಗಳನ್ನು ಇವರು ರಚಿಸಿದ್ದಾರೆ. ಪರಿಸರ ಆಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಪೇಂಟಿಂಗ್‌ ಮೂಲಕ ಜನರು ಮೆಚ್ಚುವಂತೆ ಅತ್ಯುತ್ತಮವಾಗಿ ಚಿತ್ರವನ್ನು ರಚಿಸುತ್ತಿದ್ದರು. ಇವರು ಪತ್ನಿ ಶಾಂತ ವರ್ಮಾ ಹಾಗೂ ಮೂರು ಮಕ್ಕಳನ್ನು ಅಗಲಿದ್ದಾರೆ. 

ಪತ್ನಿ ಶಾಂತಾ, ಒಬ್ಬ ಮಗ, ಇಬ್ಬರು ಹೆಣ್ಣು ಮಕ್ಕಳನ್ನು ವರ್ಮಾ ಅವರು ಅಗಲಿದ್ದಾರೆ. ಅಪಾರ ವಿದ್ಯಾರ್ಥಿಸ್ತೋಮ ಹಾಗೂ ಅಭಿಮಾನಿಗಳು ಈ ಕಲಾವಿದನ ಪ್ರಸಿದ್ಧಿಯನ್ನು ತೋರಿಸುತ್ತದೆ. ವರ್ಮಾ ಅವರು ಡಾ.ರಾಜ್‌ಕುಮಾರ್, ಕನ್ನಡಾಂಬೆ ಹಾಗೂ ರಾಘವೇಂದ್ರ ಸ್ವಾಮಿ ಅವರ ಕಲಾಕೃತಿಗಳು ಕನ್ನಡಿಗರ ಹೃದಯಲ್ಲ ಸದಾ ನೆಲೆಸಲಿದ್ದು. ಈ ಬಗ್ಗೆ ಸಾಕಷ್ಟು ಚರ್ಚಗಳೂ ಆಗಿದ್ದವು. ಮೈಸೂರಿನ ರಾಜಾ ರವಿವರ್ಮಾ ಅವರ ಕಾಲಕೃತಿಗಳನ್ನು ಮೈಸೂರಿನ ಅರಮನೆಯಲ್ಲಿ ವೀಕ್ಷಿಸುತ್ತಿದ್ದ ವರ್ಮಾ ಅವರು ವಿಪರೀತ ಪ್ರಭಾವಿತರಾಗಿ, ತಮ್ಮ ಮೂಲ ಹೆಸರಾದ ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ್ ಜೊತೆ ವರ್ಮಾ ಎಂಬ ಹೆಸರನ್ನೂ ಸೇರಿಸಿಕೊಂಡಿದ್ದರು. 

ಮೊದ ಮೊದಲ ತಮ್ಮ ಬೆರಳುಗಳನ್ನೇ ಬಳಸಿ ಚಿತ್ತಾರ ಸೃಷ್ಟಿಸುತ್ತಿದ್ದ ಈ ಕರ್ನಾಟಕದ ಮೇರು ಕಲಾವಿದ ಎಂಬೋಸಿಂಗ್, ಥ್ರೆಡ್ ಪೇಂಟಿಂಗ್ ಮೂಲಕ  ಕಲಾಕೃತಿಗಳನ್ನು ರಚಿಸುತ್ತಿದ್ದರು. ಕೆಲವೇ ನಿಮಿಷಗಳಲ್ಲಿ ಅತ್ಯುತ್ತಮವಾದ ಕಲಾಕೃತಿ ಸೃಷ್ಟಿಸಿಬಲ್ಲವರಾಗಿದ್ದ ಡಾ.ವರ್ಮಾ ಅವರು ಸಿನಿ ತಾರೆಗಳಾದ ಡಾ.ರಾಜ್‌ಕುಮಾರ್, ಸೂಪರ್ ಸ್ಟಾರ್ ರಜನಿಕಾಂತ್, ಅಂತಾರಾಷ್ಟ್ರಿಯ ಸುಪ್ರಸಿದ್ದ ಕಲಾವಿದರಾದ ಡಾ.ರೋರಿಕ್-ದೇವಿಕಾರಾಣಿ ದಂಪತಿ ಹಾಗೂ ಗಣೇಶ ಮತ್ತಿತ್ತರ ಹಿಂದೂ ದೇವಾನುದೇವತೆಗಳು ಚಿತ್ರಗಳು ಕಲಾ ಲೋಕದಲ್ಲಿ ಅದ್ಭುತವೆನಿಸಿಕೊಂಡಿವೆ.

ಕನ್ನಡಿಗ ರಿಕ್ಕಿಗೆ ಮತ್ತೊಂದು ಗ್ರಾಮಿ ಗರಿ

ನನ್ನ ಆರಾಧ್ಯ ದೇವರು ಪ್ರಕೃತಿ. ಅದುವೇ ದೇವರು ಎನ್ನುವುದಕ್ಕೆ ಸಾಕ್ಷಿ ನಮ್ಮಲ್ಲೂ ಇರುವ ಪಂಚಭೂತಗಳು. ಎಡಪಂಥೀಯರ ಪದ್ಧತಿ ಬಂದ ಮೇಲೆ ಮಣ್ಣು ಅಂದರೆ ಬರೀ ಮಣ್ಣು, ಸೂರ್ಯ ಅಂದರೆ ಒಂದು ನಕ್ಷತ್ರ ಎನ್ನುವುದನ್ನು ಕೇಳಿದಿಕೊಳ್ಳಬೇಕಾಯಿತು. ಹೀಗಾಗಿ ದೇವರು ಇಲ್ಲ, ಎಲ್ಲಾ ಸುಳ್ಳು ಎಂದು ದಿಕ್ಕು ತಪ್ಪಿಸುವ ವರ್ಗವೂ ಇದೆ. 

ಕನ್ನಡಾಂಬೆ ಕಲಾಕೃತಿಗೆ ಮನ್ನಣೆ ಸಿಗದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದ ಕಲಾವಿದ:
ಇವರ ಕನ್ನಡಾಂಬೆಯ ಕಲಾಕೃತಿಯನ್ನು ನೋಡಲು ಎರಡು ಕಣ್ಣುಗಳು ಸಾಲದು. ಆದರೆ, ಇದಕ್ಕ ಸೂಕ್ತ ಮನ್ನಣೆ ಸಿಗದಿದ್ದಾಗತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಸಾಲುಗಳನ್ನು ಬರೆದು, ಬೇಸರ ವ್ಯಕ್ತಪಡಿಸಿದ್ದರು. 'ಪ್ರತಿಯೊಬ್ಬ ಕಲಾವಿದನಿಗೆ ತಾನು ಮಾಡಿದ ಕೃತಿ ಎಲ್ಲರ ಗಮನಕ್ಕೆ ಬರಬೇಕು, ಎಲ್ಲರೂ ಅದನ್ನು ಕಂಡು ಹರ್ಷಿಸಬೇಕು ಎಂಬ ಮಹಾದಾಸೆಯಲ್ಲಿ, ತನ್ನ ಜೀವನದ ಪ್ರತಿಯೊಂದು ಕಲಿಕೆಯನ್ನ ಆತನ ಕಲಾಕೃತಿಯಲ್ಲಿ ಧಾರೆಯೆರೆಯುತ್ತ, ತಪಸ್ಸಿನಂತೆ ತೊಡಗಿಸಿಕೊಂಡು ಮಾಡಿದಂತ ಕಲಾಕೃತಿಯೇ ತಾಯಿ ಭುವನೇಶ್ವರಿ. ಮುಗಿದ ನಂತರ ಜನರಿಗೆ ತಲುಪುವಂತ ಕೆಲಸವನ್ನ ಹೆಗಲಿಗೇರಿಸಿಕೊಂಡ ಸಂಸ್ಥೆ, ಚಿತ್ರಕಲೆ ಮುಗಿಯುವ ಮುನ್ನವೇ ಅನಾವರ್ಣದ ಸಮಯಕ್ಕೆ ತೆಗೆದುಕೊಂಡು ಹೋಗಿ ಮತ್ತೆ ಕೊಡುವುದಾಗಿ ಹೇಳಿದ ಸಾ ಸಿ ಮರುಳಯ್ಯನವರು ಕಾರಣಾಂತರಗಳಿಂದ ಹಿಂದಿರುಗಿಸಲು ಆಗಲಿಲ್ಲ. .ವರ್ಷಗಳು ಉರುಳಿದವು, ಮರುಳಯ್ಯನವರು ಪದವಿಯಲ್ಲಿ ಇರಲಿಲ್ಲ ನಂತರ ಕಾಲವಾಗಿ ಹೋದರು. ಹೀಗೆ ಕೃತಿ ಬಾರದ್ದನ್ನು ಪ್ರಶ್ನಿಸಿದಾಗ ಪ್ರೆಶ್ನಿಸಿದಾಗ ಕಲೆಗಾರನನ್ನ ಕಡೆಗಣಿಸಿ, ಕೊನೆ ಪಕ್ಷ ಅದರ ಕರ್ತೃವಿನ ಹೆಸರನ್ನು ನಮೂದಿಸದೇ, ಹೆಸರನ್ನು ನಮೂದಿಸುವುದರ ಬಗ್ಗೆ ಕೇಳಿದಾಗ “ನೀವೇ ಇದನ್ನು ರಚಿಸಿದೀರಾ ಎನ್ನುವುದಕ್ಕೆ ಪುರಾವೆ ಏನು ?” ಎಂದು ಸಾಹಿತ್ಯ ಪರಿಷತ್ತಿನ ಅವಮಾನಿಸುವಂತ ಪ್ರಶ್ನೆಗೆ ನಾನು ಏನು ಹೇಳಲಿ? 
ಕರ್ನಾಟಕದ ಎಲ್ಲೆಡೆ ರಾರಾಜಿಸುವ ತಾಯಿ ಭುವನೇಶ್ವರಿಯನ್ನು ನನಗೆ ಉಡುಗೊರೆಯಾಗಿ ಬಂದು ಅದರ ಇತಿಹಾಸ ರಾಜ ರವಿವರ್ಮರ ಕೃತಿಯೆಂದು,ನಾನು ಮಾಡಿದ ಕಲಾಕೃತಿಯ ಬಗ್ಗೆ ನನಗೆ ಹೇಳಿದಾಗ,ಆಗುವಂತಹ ನೋವು ಮತ್ತ್ಯಾರಿಗೂ ಆಗದಿರಲಿ ಗೀತೆ ಬರೆದವರು -ರವೀಂದ್ರನಾಥ್ ಟಾಗೋರ್
ನಾಡ ಗೀತೆ ಬರೆದವರು - ಕುವೆಂಪು
ನಾಡ ದೇವಿಯ ಚಿತ್ರ ಬರೆದವನು - ? ವಿಪರ್ಮಯಾಸವೇ ಸರಿ, ಎಂದು ಬೇಸರ ವ್ಯಕ್ತಪಡಿಸಿದ್ದರು. 

ಮೂರು ವರ್ಷದ ಈ ಪಾಪು ಅಜ್ಜಿ ತಾತಂಗೆ ಟೀಚರ್: ಆರ್ಯ ಸಿಂಚನಾಗೆ ಸಪ್ತಮಿ ಗೌಡನೂ ಫಿದಾ

ಸುವರ್ಣಗೆ ಸಂದರ್ಶನ ನೀಡಿದ ಕುಂಚಬ್ರಹ್ಮ:
ವಿಶಿಷ್ಟ, ವಿಶೇಷ ಕಲಾಕೃತಿಗಳ ಮೂಲಕ ಕಲಾ ಪ್ರಪಂಚದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಕಲವಾದಿ ವರ್ಮಾ ಈ ಹಿಂದೆ ಏಷ್ಯಾನಟ್ ಸುವರ್ಣ ನ್ಯೂಸ್‌ಗೆ ನೀಡಿದ ಸಂದರ್ಶನವಿದು. 

 

Follow Us:
Download App:
  • android
  • ios