Asianet Suvarna News Asianet Suvarna News

ಸುಳ್ಳುಸುದ್ದಿ ತಡೆಗೆ Fact check unit: ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್

ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳ ಪತ್ತೆ, ನಿಯಂತ್ರಣಕ್ಕೆ ಫ್ಯಾಕ್ಟ್ಚೆಕ್‌ (ಸತ್ಯ ತಪಾಸಣೆ) ಘಟಕ ರಚಿಸಲು ಹಾಗೂ ಸುಳ್ಳು ಸುದ್ದಿ ಸೃಷ್ಟಿಸುವ ಸಿಂಡಿಕೇಟ್‌ಗಳಿಗೆ ಕಠಿಣ ಶಿಕ್ಷೆ ವಿಧಿಸುವುದಕ್ಕೆ ಕಾನೂನು ರೂಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮತಿ ನೀಡಿದ್ದಾರೆ.

Factcheck unit to prevent fake news CM Siddaramaiah green signal at bengaluru rav
Author
First Published Aug 22, 2023, 4:28 AM IST

ಬೆಂಗಳೂರು (ಆ.22) :  ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳ ಪತ್ತೆ, ನಿಯಂತ್ರಣಕ್ಕೆ ಫ್ಯಾಕ್ಟ್ಚೆಕ್‌ (ಸತ್ಯ ತಪಾಸಣೆ) ಘಟಕ ರಚಿಸಲು ಹಾಗೂ ಸುಳ್ಳು ಸುದ್ದಿ ಸೃಷ್ಟಿಸುವ ಸಿಂಡಿಕೇಟ್‌ಗಳಿಗೆ ಕಠಿಣ ಶಿಕ್ಷೆ ವಿಧಿಸುವುದಕ್ಕೆ ಕಾನೂನು ರೂಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮತಿ ನೀಡಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಸೈಬರ್‌ ಸುರಕ್ಷತೆ(Cyber ​​security) ವಿಚಾರವಾಗಿ ನಡೆದ ಸಭೆಯಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವುದು ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ. ಅದರ ನಿಯಂತ್ರಣ ಅತ್ಯಗತ್ಯವಾಗಿದೆ. ಹೀಗಾಗಿ ರಾಜ್ಯದಲ್ಲಿ ಫ್ಯಾಕ್ಟ್ಚೆಕ್‌ ಘಟಕ(Fact check unit) ಸ್ಥಾಪನೆ ಅಗತ್ಯವಾಗಿದೆ. ಅದಕ್ಕೆ ಬೇಕಿರುವ ಎಲ್ಲ ನಿಯಮ ಮತ್ತು ಕಾನೂನು ರೂಪಿಸಿ ಎಂದು ಗೃಹ ಇಲಾಖೆ ಹಾಗೂ ಐಟಿ-ಬಿಟಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸುಳ್ಳುಸುದ್ದಿ ತಡೆಗೆ ತಲೆಯೆತ್ತಲಿದೆ ಸಿಐಡಿ ಘಟಕ: ಫೇಕ್‌ ನ್ಯೂಸ್‌ ಹಾವಳಿಗೆ ಕಡಿವಾಣ ಹಾಕಲು ಸಿಎಂ ಸೂಚನೆ

ಸಭೆಯಲ್ಲಿ ಫ್ಯಾಕ್ಟ್ಚೆಕ್‌ ಘಟಕದ ಮೇಲುಸ್ತುವಾರಿ ಸಮಿತಿ, ನೋಡಲ್‌ ಅಧಿಕಾರಿಗಳ ನೇಮಕ, ವಿಶ್ಲೇಷಣಾ ತಂಡ, ಸಾಮರ್ಥ್ಯ ವರ್ಧನೆ ತಂಡಗಳ ರಚನೆಯ ಜತೆಗೆ ವ್ಯವಸ್ಥಿತವಾಗಿ ತಂತ್ರಜ್ಞಾನ ಬಳಕೆ ಮಾಡುವ ಕುರಿತು ಸಭೆಯಲ್ಲಿ ವಿವರಿಸಲಾಯಿತು.

ಈ ವೇಳೆ ಮಾತನಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ಬೆಂಗಳೂರು ಪೊಲೀಸರು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಫ್ಯಾಕ್ಟ್ಚೆಕ್‌ ಘಟಕದ ಅವಶ್ಯಕತೆಯಿದೆ. ಕೃತಕ ಬುದ್ಧಿಮತ್ತೆ ಬಳಕೆ ಮಾಡಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದರು.

ಸುಳ್ಳು ಸುದ್ದಿ ಗುರುತಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡಲು ಈ ಘಟಕದ ಅವಶ್ಯಕತೆಯಿದೆ. ಆರಂಭಿಕ ಹಂತದಲ್ಲಿ ಐಟಿ-ಬಿಟಿ ಇಲಾಖೆ ಎಲ್ಲ ರೀತಿಯ ಸಹಕಾರ ನೀಡುತ್ತದೆ. ಘಟಕವನ್ನು ಕಾನೂನಿನ ವ್ಯಾಪ್ತಿಯಲ್ಲಿ ತರಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ಕ್ರಮೇಣ ಘಟಕವು ಗೃಹ ಇಲಾಖೆಯ ವ್ಯಾಪ್ತಿಯಲ್ಲಿಯೇ ಇರುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಸುಳ್ಳು ಸುದ್ದಿ ಹರಡುವ ಜಾಲ ಸದ್ಯ ಆರಂಭಿಕ ಹಂತದಲ್ಲಿದ್ದರೂ ಮುಂದಿನ ದಿನಗಳಲ್ಲಿ ಅದು ವ್ಯಾಪಕವಾಗಿ ಬಳಕೆಯಾಗುವ ಸಾಧ್ಯತೆಗಳಿವೆ. ಸುಳ್ಳು ಸುದ್ದಿ ಹರಡುವವರಿಗೆ ಕಠಿಣ ಶಿಕ್ಷೆ ಕೂಡ ಆಗಬೇಕು. ಈ ಸಮಿತಿಯನ್ನು ಕೂಡಲೇ ರಚಿಸುವ ಕೆಲಸವಾಗಬೇಕು. ಅಲ್ಲದೆ ಸುಳ್ಳು ಸುದ್ದಿ ಹರಡುವುದು ಶಿಕ್ಷಾರ್ಹ ಅಪರಾಧ ಎಂಬುದು ಜನರಿಗೆ ಮನವರಿಕೆಯಾಗಬೇಕು ಎಂದು ಹೇಳಿದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌, ಅಪರ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್‌ ಗೋಯಲ್‌, ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಇತರರಿದ್ದರು. 

ಸರ್ಕಾರ 'ಸುಳ್ಳುಸುದ್ದಿ' ಎಂದಿದ್ದನ್ನು ಆನ್ಲೈನಿಂದ ತೆಗೆಯಬೇಕು: ಕೇಂದ್ರ

ಪೊಲೀಸರೂ ಫೇಸ್ಬುಕ್ಕಲ್ಲಿಇದ್ದಾರೆ, ಹುಷಾರಾಗಿರಿ!

ರಾಜ್ಯದ ಪೊಲೀಸರು ಕೂಡ ಈಗ ಸೋಷಿಯಲ್‌ ಮೀಡಿಯಾಗಳಲ್ಲಿ ಸಕ್ರಿಯರಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಫ್ಯಾಕ್ಟ್ಚೆಕ್‌ ಘಟಕದ ಅವಶ್ಯಕತೆಯಿದೆ. ಕೃತಕ ಬುದ್ಧಿಮತ್ತೆ ಬಳಕೆ ಮಾಡಿ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಅದನ್ನು ತಡೆಯಲು ಪ್ರತ್ಯೇಕ ಘಟಕ ಸ್ಥಾಪಿಸಲಾಗುತ್ತದೆ. ಗೃಹ ಇಲಾಖೆಗೆ ಐಟಿ-ಬಿಟಿ ಇಲಾಖೆ ಎಲ್ಲ ಸಹಕಾರ ನೀಡಲಿದೆ.

- ಪ್ರಿಯಾಂಕ್‌ ಖರ್ಗೆಐಟಿ-ಬಿಟಿ ಸಚಿವ

Follow Us:
Download App:
  • android
  • ios