ಹೆಚ್ಚಿದ ಪ್ರಯಾಣಿಕರ ಬೇಡಿಕೆ, ಯಶವಂತಪುರ-ಮುರ್ಡೇಶ್ವರ ವಿಶೇಷ ರೈಲು ಅವಧಿ ವಿಸ್ತರಣೆ
ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ವಾರಾಂತ್ಯದ ಯಶವಂತಪುರ-ಮುರ್ಡೇಶ್ವರ ನಡುವೆ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಬೆಂಗಳೂರು (ಜು.22): ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ವಾರಾಂತ್ಯದ ಯಶವಂತಪುರ-ಮುರ್ಡೇಶ್ವರ ನಡುವೆ ಸಂಚರಿಸುವ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ (06563/06564) ರೈಲುಗಳ ಸೇವೆಯ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಪ್ರತಿ ಶನಿವಾರ ಯಶವಂತಪುರ ನಿಲ್ದಾಣದಿಂದ ಹೊರಡುವ (06563) ಯಶವಂತಪುರ-ಮುರ್ಡೇಶ್ವರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆ. 5ರಿಂದ 26 ರವರೆಗೆ ವಿಸ್ತರಿಸಲಾಗುತ್ತಿದೆ. ಅದರಂತೆ ಪ್ರತಿ ಭಾನುವಾರ ಮುರ್ಡೇಶ್ವರದಿಂದ ಹಿಂದಿರುಗುವ ಹೊರಡುವ (06564) ಈ ರೈಲು ಆ.6ರಿಂದ 27ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಜು. 29 ಹಾಗೂ 30ರವರೆಗೆ ಸಂಚಾರಿಸುವ ಬಗ್ಗೆ ತಿಳಿಸಲಾಗಿತ್ತು.
ಕೇವಲ 35 ಪಾಸ್ ಅಂಕ ಗಳಿಸಿದ ತುಷಾರ್ ಸುಮೇರಾ ಐಎಎಸ್ ಅಧಿಕಾರಿ!
ರೈಲ್ವೆ ಪ್ರಯಾಣ ವಿನಾಯಿತಿ ಮುಂದುವರೆಸಲು ಒತ್ತಾಯ
ಬಾಗಲಕೋಟೆ: ಈ ಹಿಂದೆ ದೇಶದ ರೈಲುಗಳಲ್ಲಿ ಹಿರಿಯ ನಾಗಕರಿಗೆ ಹಾಗೂ ಅಂಗವಿಕಲರಿಗೆ ರೈಲುಪ್ರಯಾಣ ದರದಲ್ಲಿ ವಿನಾಯತಿ ನೀಡಲಾಗಿತ್ತು. ಆದರೆ ಇತ್ತೀಚೆಗೆ ರೈಲು ಇಲಾಖೆ ಈ ವಿನಾಯತಿಗಳನ್ನು ರದ್ದುಗೊಳಿಸಿದೆ. ಇದರಿಂದ ವಯೋವದ್ಧರು, ಅಂಗವಿಕಲರು ತುಂಬಾ ತೊಂದರೊಳಗಾಗಿದ್ದಾರೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ಎ.ಎ.ದಂಡಿಯಾ ತಿಳಿಸಿದ್ದಾರೆ. ಈ ಕುರಿತು ವಯೋವದ್ಧರು, ಅಂಗವಿಕಲರು ರೈಲು ಇಲಾಖೆಗೆ ಹಾಗೂ ರೈಲು ಮಂಡಳಿಯವರಿಗೆ ಮನವಿಯನ್ನು ಸಲ್ಲಿಸಿದ್ದರು. ರೈಲು ಮಂಡಳಿ ಇದನ್ನು ಗಂಭೀರವಾಗಿ ಪರಿಗಣಿಸಿ ರೈಲು ಮಂತ್ರಿಗಳಿಗೆ ಸವಿಸ್ತಾರವಾದ ವರದಿಯನ್ನು ಸಲ್ಲಿಸಿ ವಿನಾಯತಿ ನೀಡಲು ವಿನಂತಿಸಿಕೊಂಡಿತ್ತು. ಇದೇ ವರ್ಷ ಮಾಚ್‌ರ್ ತಿಂಗಳಲ್ಲಿ ಈ ಕುರಿತು ಕ್ರಮ ತೆಗೆದುಕೊಳ್ಳುಲಾಗುವುದೆಂದು ರೈಲು ಇಲಾಖೆ ಘೋಷಣೆ ಮಾಡಿತ್ತು. ಆದರೆ ಜುಲೈ ತಿಂಗಳು ಕೊನೆಗೊಳ್ಳುತ್ತಿದ್ದರೂ ಈ ಕುರಿತು ಈ ವಿನಾಯತಿ ನೀಡಲು ಕೇಂದ್ರ ರೈಲು ಇಲಾಖೆ ಘೋಷಣೆ ಮಾಡಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರದ ರೈಲು ಮಂತ್ರಿಗಳು ಬೇಗನೇ ಈ ಹಿಂದೆ ನೀಡಲಾಗುತ್ತಿದ್ದ ಎಲ್ಲ ವಿನಾಯತಿಗಳನ್ನು ಘೋಷಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.
ದೇಶದ ಅತ್ಯಂತ ಶ್ರೀಮಂತ ಮಹಿಳಾ ಯೂಟ್ಯೂಬರ್ ದಕ್ಷಿಣ ಭಾರತದ ಪ್ರತಿಭೆ, ವಾರ್ಷಿಕ ಗಳಿಕೆ
ಸಾಮಾನ್ಯ ಬೋಗಿ ರೈಲ್ವೆ ಪ್ರಯಾಣಿಕರಿಗೆ ಅಗ್ಗದ ದರದಲ್ಲಿ ಊಟ
ಬೆಂಗಳೂರು: ನಗರದ ಕೆಎಸ್‌ಆರ್ ಬೆಂಗಳೂರು ನಿಲ್ದಾಣದ ಪ್ಲಾಟ್‌ಫಾಮ್‌ರ್‍ಗಳಲ್ಲಿ ರೈಲುಗಳ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ . 20 ರೂ ಹಾಗೂ . 50 ರೂ ಅಗ್ಗದ ದರದಲ್ಲಿ ಊಟ, ತಿಂಡಿ ಒದಗಿಸುವ ಕೌಂಟರ್ ಆರಂಭವಾಗಿದೆ.
ಗುರುವಾರ ನಿಲ್ದಾಣದ ಐದನೇ ಪ್ಲಾಟ್‌ಫಾಮ್‌ರ್‍ನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಸಾಮಾನ್ಯ ಬೋಗಿಗಳು ನಿಲ್ಲುವ ಸ್ಥಳದಲ್ಲಿಯೇ ಈ ಕೌಂಟರ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಸೇವಾ ಕೌಂಟರ್ 6 ತಿಂಗಳ ಕಾಲ ಪ್ರಾಯೋಗಿಕವಾಗಿ ನಡೆಸಲಾಗುವುದು.
ಎರಡು ಪ್ಯಾಕೇಜ್: 1ನೇ ಪ್ಯಾಕೇಜ್‌ನಲ್ಲಿ - ಎಕಾನಮಿ ಮೀಲ್ - 7 ಪೂರಿ (175 ಗ್ರಾಂ), ಒಣ ಆಲೂ ವೆಜ್ (150 ಗ್ರಾಂ) ಮತ್ತು ಉಪ್ಪಿನಕಾಯಿ (12 ಗ್ರಾಂ) ಒಳಗೊಂಡಿರುತ್ತದೆ. ಇದಕ್ಕೆ . 20 ರೂ ದರ ನಿಗದಿ ಮಾಡಲಾಗಿದೆ. 2ನೇ ಪ್ಯಾಕೇಜ್‌ನಲ್ಲಿ - ತಿಂಡಿ ಊಟ (350 ಗ್ರಾಂ) - ಅನ್ನ, ರಾಜ್ಮಾ/ ಚೋಲೆ ಅನ್ನ/ ಖಿಚಡಿ/ಕುಲ್ಚಾ/ ಭತುರಾ/ ಪಾವ್-ಬಾಜಿ/ ಮಸಾಲಾ ದೋಸೆ ಸೇರಿ ದಕ್ಷಿಣ ಭಾರತದ ಆಹಾರದ ಪೊಟ್ಟಣ ಇರಲಿದೆ. ಇದಕ್ಕೆ 50 ರೂ ನಿಗದಿಸಲಾಗಿದೆ. ಜತೆಗೆ ಪ್ರಯಾಣಿಕರ ಅನುಕೂಲಕ್ಕಾಗಿ 200 ಎಂಎಲ್ ಗ್ಲಾಸ್ ಮತ್ತು 1ಲೀ. ಕುಡಿವ ನೀರಿನ ಬಾಟಲಿ ನೀಡಲಾಗುತ್ತಿದೆ.