ದೇಶದ ಅತ್ಯಂತ ಶ್ರೀಮಂತ ಮಹಿಳಾ ಯೂಟ್ಯೂಬರ್ ದಕ್ಷಿಣ ಭಾರತದ ಪ್ರತಿಭೆ, ವಾರ್ಷಿಕ ಗಳಿಕೆ ಎಷ್ಟು?

ಭಾರತೀಯ ಮೂಲದ ಯೂಟ್ಯೂಬರ್ ಮತ್ತು ಗಾಯಕಿ ವಿದ್ಯಾ ವೋಕ್ಸ್ ಅಕಾ ವಿದ್ಯಾ ಅಯ್ಯರ್, ದೇಶದ ಶ್ರೀಮಂತ ಮಹಿಳಾ  ಯೂಟ್ಯೂಬರ್ ಆಗಿದ್ದಾರೆ.

one of India's richest female YouTubers Vidya Vox gow

ವಿಶ್ವದಾದ್ಯಂತ ಬಹುತೇಕ ಎಲ್ಲಾ ಜನರು ಇಂದು ಇಂಟರ್ನೆಟ್ ಮತ್ತು ವಿವಿಧ ಸಾಮಾಜಿಕ ಜಾಲತಾಣದ ಮೂಲಕ  ಸಮಯ ಕಳೆಯುತ್ತಾರೆ. ಕೆಲವರು ವೈವಿಧ್ಯಮಯ ವಿಷಯವನ್ನು ಇದರಲ್ಲಿ ಆನಂದಿಸುತ್ತಾರೆ. ಕೆಲವರು ಟೈಂ ಪಾಸ್ ಮಾಡುತ್ತಾರೆ. ಕೆಲವರು ರೀಲ್ಸ್, ಯೂಟ್ಯೂಬ್ ಮಾಡುತ್ತಾರೆ. ಇಂದು ಸಾಮಾಜಿಕ ಜಾಲತಾಣ ಹಲವಾರು ಜನರಿಗೆ ಆದಾಯದ ಮೂಲವಾಗಿದೆ. ಅದರಂತೆ ಭಾರತದಲ್ಲೂ  ಅನೇಕರು ಯೂಟ್ಯೂಬ್ , ರೀಲ್ಸ್ ಮೂಲಕ ಆದಾಯ ಗಳಿಸುತ್ತಿದ್ದಾರೆ.

ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಭಾರತೀಯ ಮೂಲದ ಯೂಟ್ಯೂಬರ್ ಮತ್ತು ಗಾಯಕಿ ವಿದ್ಯಾ ವೋಕ್ಸ್ ಅಕಾ ವಿದ್ಯಾ ಅಯ್ಯರ್.   2015 ರಲ್ಲಿ ವಿದ್ಯಾ ಅಯ್ಯರ್ ತನ್ನ ಚಾನಲ್ ಅನ್ನು ಪ್ರಾರಂಭಿಸಿದಳು. ಇಂದು ಇವಳ ಒಂದು ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸುತ್ತಿದೆ. ಈಕೆಯ ಚಾನೆಲ್ 7 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಈಕೆ ತನ್ನ ಸಂಗೀತದ ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಜನಪ್ರಿಯತೆ ಮತ್ತು ಮನ್ನಣೆಯನ್ನು ಗಳಿಸಿದ್ದಾಳೆ. ಆಕೆಯ ಸಂಗೀತವು ಪಾಶ್ಚಿಮಾತ್ಯ ಪಾಪ್, ಎಲೆಕ್ಟ್ರಾನಿಕ್ ನೃತ್ಯ ಸಂಗೀತ, ಬಾಲಿವುಡ್ ಹಿಟ್‌ಗಳು ಮತ್ತು ಭಾರತೀಯ ಶಾಸ್ತ್ರೀಯ ಸಂಗೀತದ ಮಿಶ್ರಣವಾಗಿದೆ.

ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳೆ ಕೊಡಗಿನ ಮಗಳು, 10 ವರ್ಷದಲ್ಲಿ

ತಮಿಳುನಾಡಿನಲ್ಲಿ ಜನಿಸಿದ ವಿದ್ಯಾಳ ಕುಟುಂಬ ಅಮೆರಿಕಕ್ಕೆ ತೆರಳಿದಾಗ ಆಕೆಗೆ ಎಂಟು ವರ್ಷ. ಅವಳು ತನ್ನ ಅಜ್ಜಿಯಿಂದ ಕರ್ನಾಟಕ ಸಂಗೀತಕ್ಕೆ ಪ್ರೇರಣೆಗೊಂಡು ಮತ್ತು ಚಿಕ್ಕ ವಯಸ್ಸಿನಿಂದಲೇ ಅದನ್ನು ಕಲಿತಳು. ಅದು ಕೊನೆಗೆ ಆಕೆಗೆ  ಅವಳ ವೃತ್ತಿಯಾಗಿ ಮಾರ್ಪಾಡು ಆಯ್ತು.

ಅಯ್ಯರ್ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಜೈವಿಕ ವಿಜ್ಞಾನದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದಿದ್ದಾಳೆ. ಕಾಲೇಜು ನಂತರ ಆಕೆ ಭಾರತಕ್ಕೆ ಬಂದು  ಎರಡು ವರ್ಷಗಳ ಕಾಲ ಸಂಗೀತವನ್ನು ಕಲಿತಳು.

ಇವರೇ ನೋಡಿ ಭಾರತದ ಅತ್ಯಂತ ಶ್ರೀಮಂತ ಶಾಸಕರು, ಟಾಪ್‌ 10ರಲ್ಲಿ ಕರ್ನಾಟಕದವರೇ ಹೆಚ್ಚು

2015 ರಲ್ಲಿ ಅಯ್ಯರ್ ತನ್ನ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದಳು ಆದರೆ ಅವಳು 2017 ರಲ್ಲಿ ತನ್ನ ಆಲ್ಬಮ್ ಕುತು ರೇ ಮೂಲಕ ಪ್ರಸಿದ್ಧಿ ಪಡೆದಳು. ಝೀ ನ್ಯೂಸ್ ಪ್ರಕಾರ ಆಕೆ ವರ್ಷಕ್ಕೆ ಸುಮಾರು 76 ಲಕ್ಷ ರೂಪಾಯಿ ಗಳಿಸುತ್ತಾಳೆ. 2018ರಲ್ಲಿ ವಿದ್ಯಾ ವೋಕ್ಸ್ ಚಾನೆಲ್ ಸುಮಾರು 1.3 ಮಿಲಿಯನ್ (Rs 10 ಕೋಟಿ) ನಿವ್ವಳ ಮೌಲ್ಯವನ್ನು ಹೊಂದಿದೆ.

ಭುವನ್ ಬಾಮ್, ಸನಮ್, ಆಶಿಶ್ ಚಲ್ಚಲಾನಿ ಮತ್ತು ಇತರ ಜನಪ್ರಿಯ ಟಾಪ್ 10 ಭಾರತೀಯ ಯೂಟ್ಯೂಬರ್‌ಗಳಲ್ಲಿ  4.9 ಮಿಲಿಯನ್ ವೀಕ್ಷಣೆಯ ಗಳಿಸುವ ಅತ್ಯಂತ ಜನಪ್ರಿಯ ವೀಡಿಯೊಗಳೊಂದಿಗೆ ಈಕೆ 10 ನೇ ಸ್ಥಾನವನ್ನು ಪಡೆದಿದ್ದಾಳೆ. 

Latest Videos
Follow Us:
Download App:
  • android
  • ios