ಮಾಜಿ ಸಚಿವರ ಮಗ, ಪತ್ರಕರ್ತರ ಮಗನ ಹೊಡೆದಾಟ: ಯಾರು ಗೆದ್ದೋರು?
ಒಬ್ಬ ಮಾಜಿ ಸಚಿವ ಮಗ.. ಮತ್ತೊಬ್ಬ ಹಿರಿಯ ಪತ್ರಕರ್ತರ ಮಗ. ಇಬ್ಬರೂ ಹೋಟೆಲ್‌ನಲ್ಲಿ ತಮ್ಮ ತಮ್ಮ ಗೆಳೆಯರ ಜೊತೆ ಊಟ ಮಾಡಿಕೊಂಡು ಹೊರಗೆ ಬಂದವರು ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ.
ವರದಿ- ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಮೈಸೂರು (ಜೂ.26): ಒಬ್ಬ ಮಾಜಿ ಸಚಿವ ಮಗ.. ಮತ್ತೊಬ್ಬ ಹಿರಿಯ ಪತ್ರಕರ್ತರ ಮಗ. ರಾತ್ರಿ ಮನೆಲಿ ಊಟ ಮಾಡಲು ಆಗಲ್ಲ ಅಂತಲೋ ಏನೋ ಹೋಟೆಲ್‌ಗೆ ಊಟಕ್ಕೆ ಹೋಗಿದ್ರು. ಇಬ್ಬರೂ ತಮ್ಮ ತಮ್ಮ ಗೆಳೆಯರ ಜೊತೆ ಊಟ ಮಾಡಿಕೊಂಡು ಹೊರಗೆ ಬಂದವರು ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ.
ಮಾತಿನ ಚಕಮಕಿ, ಕೈ ಕೈ ಮೀಲಾಯಿಸಿದ ಯುವಕರು. ಬಿಡಿಸಲು ಬಂದು ಪೊಲೀಸರು. ಠಾಣೆಯಲ್ಲಿ ಮುಚ್ಚಳಿಕೆ ಪತ್ರ.. ಇದೆಲ್ಲ ನಡೆದಿದ್ದು ಮೈಸೂರಿನ ಕುವೆಂಪುನಗರದ ಕೆಫೆ ಬಿರಿಯಾನಿಯಲ್ಲಿ. ನಿನ್ನೆ ಭಾನುವಾರ ರಾತ್ರಿ 9 ಗಂಟೆಯಲ್ಲಿ ನಡೆದ ಘಟನೆಗೆ ಕಾರಣವಾಗಿದ್ದು ಮಾಜಿ ಶಾಸಕ ಸಾರಾ.ಮಹೇಶ್ ಪುತ್ರ ಜಯಂತ್ ಹಾಗೂ ಹಿರಿಯ ಪತ್ರಕರ್ತ ಟಿ.ಗುರುರಾಜ್ ಪುತ್ರ ಶಮಂತ್. ಅಂದಾಗೇ ಇಲ್ಲಿ ಹೊಡೆದಾಡುತ್ತಿರುವವರು ಮೈಸೂರು ಜಿಲ್ಲೆ ಕೆ.ಆರ್ ನಗರದ ಮಾಜಿ ಶಾಸಕ ಸಾ.ರಾ ಮಹೇಶ್ ಅವರ ಪುತ್ರ ಸಾ.ರಾ ಜಯಂತ್ ಹಾಗೂ ಮೈಸೂರಿನ ಹಿರಿಯ ಪತ್ರಕರ್ತ ಟಿ.ಗುರುರಾಜ್ ಪುತ್ರ ಶಮಂತ್. ಇವರಿಬ್ಬರು ನಿನ್ನೆ ಭಾನುವಾರ ಪ್ರತ್ಯೇಕವಾಗಿ ಮೈಸೂರಿನ ಕುವೆಂಪುನಗರದ ಕೆಫೆ ಬಿರಿಯಾನಿಗೆ ಊಟಕ್ಕೆ ಸ್ನೇಹಿತರ ಜೊತೆ ತೆರೆಳಿದ್ದಾರೆ.
Bengaluru: ಪೀಣ್ಯ- ಹೊಸೂರು ಸುರಂಗ ರಸ್ತೆ ನಿರ್ಮಾಣ: ಕೇಂದ್ರಕ್ಕೆ ರಾಜ್ಯದ ಮನವಿ
ಘಟನೆಯ ವಿವರವೇನು?: ಶಾಸಕ ಸಾರಾ ಮಹೇಶ್ ಪುತ್ರ ಸಾರಾ ಜಯಂತ್ ಮತ್ತು ಸ್ನೇಹಿತರು ಹೋಟೆಲ್ ಮೇಲ್ ಮಹಡಿಯಲ್ಲಿ ಕುಳಿತಿದ್ರು. ಇಬ್ಬರು ಊಟ ಮುಗಿದಿ ಬೀಡಾ ತೆಗೆದುಕೊಳ್ಳುವ ಸಂಧರ್ಭದಲ್ಲಿ ಬೀಡಾದವರಿಗೆ ಹಣ ಕೊಡೊದಿಕ್ಕೆ ಸ್ಕ್ಯಾನ್ ಮಾಡುವ ವಿಚಾರಕ್ಕೆ ಮಾಜಿ ಶಾಸಕ ಸಾರಾ ಮಹೇಶ್ ಪುತ್ರನ ಸ್ನೇಹಿತನ ಜೊತೆ ಪತ್ರಕರ್ತನ ಪುತ್ರ ಶಮಂತ್ ನಡುವೆ ಗಲಾಟೆಯಾಗಿದೆ. ಈ ವೇಳೆ ಮಾತಿನ ಚಕಮಕಿ ನಡೆದು ಹೊಡೆದಾಟ ನಡೆದಿದೆ. ಗಲಾಟೆ ನಡೆವುದನ್ನ ನೋಡಿ ಓಡಿ ಬಂದ ಸಾರಾ ಜಯಂತ್ ಈ ಬಗ್ಗೆ ವಿಚಾರಿಸುತ್ತಿರುವಾಗಲೇ ಸಾರಾ ಮಹೇಶ್ ಮಗನಿಗೂ ಏಟು ಬಿದಿದ್ದೆ. ಕ್ಷಣ ಸಾ.ರಾ. ಮಹೇಶ್ ಪುತ್ರನ ಸಹ ತಿರುಗಿಸಿ ಹೊಡೆದಿದ್ದಾನೆ. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.
ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ ಪೊಲೀಸರು: ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ತಕ್ಷಣ ಸ್ಥಳಕ್ಕೆ ಆಗಮಿಸಿದ ಕುವೆಂಪುನಗರ ಪೊಲೀಸರು ಪರಿಸ್ಥಿತಿಯನ್ನ ತಿಳಿಗೊಳಿಸಿ ಎರೆಡು ಗುಂಪನ್ನ ಸಮಾಧಾನಗೊಳಿಸಿದರು. ಈ ವೇಳೆ ಸಹ ಎರೆಡು ಗುಂಪುಗಳ ಕೈ ಕೈ ಮೀಲಾಯಿಸಲು ಹೊರಟಿದ್ದರು. ಹೇಗೋ ಎರೆಡು ಗುಂಪನ್ನ ಸಮಾಧಾನ ಪಡಿಸಿದ ಪೊಲೀಸರು ಎಲ್ಲರನ್ನೂ ಠಾಣೆಗೆ ಕರೆದುಕೊಂಡು ಹೋದರು. ಠಾಣೆಯಲ್ಲಿ ಎರೆಡು ಗುಂಪುನವರಿಗೆ ಬುದ್ಧಿ ಮಾತು ಹೇಳಿ ಮುಚ್ಚಳಿಕೆ ಪತ್ರ ಬರೆದು ಮನೆಗೆ ಕಳುಹಿಸಿದ್ದಾರೆ. ಈ ಸಂಬಂಧ ಎರೆಡು ಗುಂಪುಗಳಿಂದ ದೂರು ದಾಖಲಾಗಿಲ್ಲ. ಹೀಗಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ಸಂಬಂಧ ಎರೆಡು ಗುಂಪುಗಳಲ್ಲಿ ಯಾರೊಬ್ಬರು ಸಹ ಪ್ರತಿಕ್ರಿಯೆ ನೀಡಲು ಮುಂದಾಗಲಿಲ್ಲ.
300 ಹಾಸ್ಟೆಲ್ ಮಕ್ಕಳ ಫುಡ್, ಬೆಡ್‌ಗಾಗಿ ಶಾಸಕರ ಬಳಿ ಮನವಿಗೆ ಬಂದ ಪ್ರಿನ್ಸಿಪಾಲ್ ಸಸ್ಪೆಂಡ್! ಕಾರಣವೇನು?
ಒಟ್ಟಾರೆ ಕೇವಲ ಮಾತುಕತೆಯಲ್ಲಿ ಮುಗಿಯಬೇಕಾದ ಗಲಾಟೆ ಈ ರೀತಿ ಕೈ ಕೈ ಮೀಲಾಯಿಸುವ ಹಂತಕ್ಕೆ ಬಂದಿದ್ದು ಮಾತ್ರ ದುರಂತವಾಗಿದೆ.