ಇಷ್ಟೊತ್ತಿಗೆ ಬರಗಾಲ ಘೋಷಣೆ ಆಗಬೇಕಿತ್ತು, ಸೆಪ್ಟೆಂಬರ್ ಬಂದ್ರೂ ಆಗಿಲ್ಲ: ಬೊಮ್ಮಾಯಿ ಕಿಡಿ

 ರಾಜ್ಯ ಸರ್ಕಾರ ಕಳೆದ ನಾಲ್ಕು ತಿಂಗಳಿಂದ ಜನ ವಿರೋಧಿ‌ ಆಡಳಿತ ಮಾಡಿದೆ. ಜನರಿಗೆ ಸುಳ್ಳು ಹೇಳಿದೆ, ಮೋಸ ಮಾಡಿದೆ, ವರ್ಗಾವಣೆ ದಂಧೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿದೆ. ಈ‌ ನಿಟ್ಟಿನಲ್ಲಿ ಜಿಲ್ಲಾವಾರು ಪ್ರವಾಸ ಮಾಡಿ ಹೋರಾಟದ ರೂಪರೇಷೆ ಸಿದ್ದಪಡಿಸಬೇಕಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Ex CM basvaaraj bommai outraged agains congress govt in BJP core committee meeting at hubballi rav

ಹುಬ್ಬಳ್ಳಿ (ಸೆ.12): ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಲೋಕಸಭಾ ಚುನಾವಣೆ ಎದುರಿಸುತ್ತೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯಲ್ಲಿ ನಡೆದ ಜಿಲ್ಲಾ ಕೋರ್ಟ್ ಸಭೆ ಬಳಿಕ ಮಾತನಾಡಿದ ಅವರು, ಯಾರು ಇವತ್ತು ಪಕ್ಷದಲ್ಲಿನ ಅಸಮಾಧಾನವನ್ನ ಹೊರ ಹಾಕಿದ್ದಾರೆ, ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕೆಂದು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಕೆಲವರು ಭಾವನೆಗಳನ್ನು ವ್ಯಕ್ತ ಮಾಡಿದ್ದಾರೆ, ಲಿಂಗಾಯತರಿಗೆ ಅನ್ಯಾಯ ಆಗುತ್ತಿದೆ ಎಂದು ಹೇಳಿದ್ದಾರೆ. ಅವು ಬಗೆಹರೆಯಲಾಗದ ಸಮಸ್ಯೆಗಳೆನೆಲ್ಲ, ವಿಶ್ವಾಸಕ್ಕೆ ತೆಗೆದುಕೊಂಡು ಹೋದ್ರೆ ಎಲ್ಲವೂ ‌ಸರಿ ಹೋಗುತ್ತದೆ. ಪ್ರದೀಪ್ ಶೆಟ್ಟರ್ ಮತ್ತು ಶಂಕರ ಪಾಟೀಲ ಮುನೇನಕೊಪ್ಪರಿಂದ ಹಿಡಿದು ಎಲ್ಲರ ಜೊತೆಗೆ ಮಾತನಾಡಲಾಗಿದೆ ಎಂದರು.

 

ಕಾಂಗ್ರೆಸ್‌ ಆಡಳಿತ ವೈಖರಿ ವಿರುದ್ಧ ಬಿಜೆಪಿ ಪ್ರತಿಭಟನೆ; ಬಿಎಸ್‌ವೈ ನೇತೃತ್ವದಲ್ಲಿ ಹೋರಾಟ!

ಲೋಕಸಭಾ ಚುನಾವಣೆ ಸಮೀಪಸುತ್ತಿದೆ. ಈಗಾಗಿ ಬೂತ್ ಮಟ್ಟದದಿಂದ ಪಕ್ಷ ಸಂಘಟನೆ ಮಾಡಬೇಕಿದೆ. ಬಿಎಲ್‌ಎ 1, ಬಿಎಲ್‌ಎ 2 ಮಟ್ಟದಲ್ಲಿ ಪಕ್ಷ ಪುನರ್ ಸಂಘಟನೆ ಆಗಬೇಕಿದೆ ಎಂದರು.

 ರಾಜ್ಯ ಸರ್ಕಾರ ಕಳೆದ ನಾಲ್ಕು ತಿಂಗಳಿಂದ ಜನ ವಿರೋಧಿ‌ ಆಡಳಿತ ಮಾಡಿದೆ. ಜನರಿಗೆ ಸುಳ್ಳು ಹೇಳಿದೆ, ಮೋಸ ಮಾಡಿದೆ, ವರ್ಗಾವಣೆ ದಂಧೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿದೆ. ಈ‌ ನಿಟ್ಟಿನಲ್ಲಿ ಜಿಲ್ಲಾವಾರು ಪ್ರವಾಸ ಮಾಡಿ ಹೋರಾಟದ ರೂಪರೇಷೆ ಸಿದ್ದಪಡಿಸಬೇಕಿದೆ.ಇಷ್ಟೊತ್ತಿಗಾಗಲೇ ಬರಗಾಲ ಘೋಷಣೆ ಆಗಬೇಕಿತ್ತು. ಜೂನ್‌ನಲ್ಲಿ ಕೇಳಿದ್ರೆ ಜುಲೈ ಅಂತಾರೆ, ಜುಲೈ ನಲ್ಲಿ ಕೇಳಿದ್ರೆ ಆಗಷ್ಟ್ ಅಂತಾರೆ. ಈಗ ಆಗಷ್ಟ್ ಕಳೆದು ಸಪ್ಟಂಬರ್ ಬಂದಿದೆ ಆದ್ರೂ ಬರಗಾಲ ಘೋಷಣೆ ಮಾಡುತ್ತಿಲ್ಲ. ಎಲ್ಲಾ ವಿಚಾರಗಳಲ್ಲು ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ.

ಒಕ್ಕೂಟ ಸರ್ಕಾರದಿಂದ ಜನವಿರೋಧಿ ನಡೆ: ಸಿಪಿಐ(ಎಂ)

ಸಾಮಾನ್ಯವಾಗಿ ರಾಜ್ಯ ತನ್ನ ಕರ್ತವ್ಯವನ್ನ ಮಾಡದೆ ಕೇಂದ್ರದ ಮೇಲೆ ಗೂಬೆ ಕುಳಿಸುತ್ತಿದೆ. ಅಕ್ಕಿ ಕೊಡುವ ವಿಚಾರದಲ್ಲಿ ದಿನಾಂಕ ಘೋಷಣೆ ಮಾಡಿ ಯೋಜನೆ ಕಾರ್ಯ ರೂಪಕ್ಕೆ ತರದೇ ಅದನ್ನ ಕೇಂದ್ರದ ಮೇಲೆ ಆರೋಪ ಮಾಡಿದ್ದರು. ಈಗ ರಾಜ್ಯ ಸರ್ಕಾರದ ಬಣ್ಣ ಬಯಲಾಗಿದೆ. ಗೃಹ ಲಕ್ಷ್ಮಿ ಯೋಜನೆ ಕೆಲವು ಮಹಿಳೆರಿಗೆ ಮಾತ್ರ ಸಿಕ್ಕಿದೆ. ರಾಜ್ಯ ಸರ್ಕಾರ ಲೋಡ್ ಶೆಡ್ಡಿಂಗ್ ಮಾಡಲು ಆರಂಭ ಮಾಡಿದೆ. ನಿಮ್ಮ ಕಚೇರಿಯಲ್ಲೂ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದಾರೆ. ಈಗ ವಿದ್ಯುತ್ ಬಿಲ್‌ನ್ನ ಮತ್ತೆ ಹೆಚ್ಚಿಗೆ ಮಾಡಿ ರಾಜ್ಯದ ಜನರಿಗೆ ಹೊರೆ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಹಲವು ವಿಷಯಗಳ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಕೋರ್ ಕಮಿಟಿಯಲ್ಲಿ ಚರ್ಚೆ‌ ಆಗಿದೆ ಎಂದರು.

Latest Videos
Follow Us:
Download App:
  • android
  • ios