ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ತಮಿಳುನಾಡು ಮೂಲದ ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರನ್ನು ವಿವಾಹವಾಗಿದ್ದಾರೆ. ವಿವಾಹದ ನಂತರ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. 

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ತಮಿಳುನಾಡು ಮೂಲದ ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರನ್ನು ವಿವಾಹವಾಗಿದ್ದಾರೆ. ವಿವಾಹದ ನಂತರ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನಮಸ್ಕಾರ.. ಕಳೆದ ಎರಡು ದಿನಗಳಿಂದಲೂ ನೀವೆಲ್ಲರೂ ನನ್ನ ಮತ್ತು ಶಿವಶ್ರೀ ಮದುವೆಗೆ ಸಾಕ್ಷಾತ್ ಶುಭಾಶಯಗಳು ಮತ್ತು ಆಶಿರ್ವಾದವನ್ನು ಕೋರಿದ್ದೀರಿ. ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಿಸೆಪ್ಶನ್ ಕಾರ್ಯಕ್ರಮಕ್ಕೆ ತಾವೆಲ್ಲರೂ ಬರಬೇಕು. ನಿಮ್ಮನ್ನ ಆಹ್ವಾನ ಮಾಡಿಕೊಳ್ಳೊಕೆ ನಾನು ನಮ್ಮ ಮನೆಯ ಸದಸ್ಯರು, ಕಾರ್ಯಕರ್ತರು ಹಾಗೂ ಎಲ್ಲರೂ ಸೇರಿದಂತೆ ಇಡೀ ಕಚೇರಿಯ ತಂಡ ಕಾಯುತ್ತಿರುತ್ತೇವೆ. 

ತುಂಬಾ ಜನ ನಾಳೆ ಅಲ್ಲಿ ಬಂದಾಗ ನೀವು ಮೀಟ್ ಮಾಡೋಕೆ ಬಂದಾಗ ವಿಐಪಿ ಪಾಸ್ ಬೇಕಾ, ಸ್ಪೆಷಲ್ ಪಾಸ್ ಬೇಕಾ, ಎಲ್ಲಿಂದ ಎಂಟ್ರಿ, ಎಕ್ಸಿಟ್ ಎಲ್ಲವನ್ನೂ ಕೇಳುತ್ತೀರಾ? ಆ ರೀತಿಯ ಯಾವುದೇ ಒಂದು ವಿಶೇಷ ವ್ಯವಸ್ಥೆ ಇಲ್ಲ. ನೀವೆಲ್ಲರೂ ಕೂಡಾ ಬರಬಹುದು. ಎಲ್ಲರೂ ಕೂಡಾ ಸುಲಭವಾಗಿ ಬಂದು ನಮ್ಮನ್ನ ಮಾತನಾಡಿಸಿ, ಆಶಿರ್ವಾದ ಮಾಡಿ ಸತ್ಯನಾರಾಯಣ ಪೂಜೆಯ ಪ್ರಸಾದವನ್ನು ತೆಗೆದುಕೊಂಡು, ಊಟ ಮಾಡಿ ಹೋಗುವಂತಹ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಯಸ್ಸಾದವರಿಗೆ, ಸೀನಿಯರ್ ಸಿಟಿಜನ್‌ಗಳಿಗೆ ಹಾಗೂ ಫಿಸಿಕಲ್ ಚಾಲೆಂಜ್ಡ್ ಅಂದರೆ ದಿವ್ಯಾಂಗರಿಗೆ ವೀಲ್ ಚೇರ್ ವ್ಯವಸ್ಥೆಯನ್ನು ಆಫೀಸ್‌ನ ತಂಡ ಮಾಡಿದೆ. 

View post on Instagram


ಹಾಗಾಗಿ ಎಲ್ಲರೂ ಕೂಡ ಬನ್ನಿ. ಆಶಿರ್ವಾದ ಮಾಡಿ. ಮುಖ್ಯವಾಗಿ ಒಂದು ಸಣ್ಣ ರಿಕ್ವೆಸ್ಟ್ ಏನೆಂದರೆ, ಪ್ರತಿಸಲನೂ ಬರ್ತಡೇ, ಬೇರೆ ಕಾರ್ಯಕ್ರಮ ಇರಬಹುದು. ವಿಧವೆ ಸಮಾರಂಭಗಳಾಗಬಹುದು. ಆ ಸಮಯದಲ್ಲಿ ಬೊಕ್ಕೆ, ಡ್ರೈಫ್ರೂಟ್ ಅಥವಾ ಬೇರೆ ಗಿಫ್ಟ್ ಬಾಕ್ಸ್ ಇರಬಹದು ಅದನ್ನಲ್ಲಾ ತಗೊಬಂದ್ರೆ ಅದೆಲ್ಲ ವೇಸ್ಟ್ ಆಗುತ್ತೆ. ಅದನ್ನೆಲ್ಲಾ ತರಬೇಡಿ. ಮುಖ್ಯವಾಗಿ ನೀವು ನನಗೆ ಆಶಿರ್ವಾದ ಮಾಡಿ. ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಊಟ ಮಾಡಿ ಎಂದು ತೇಜಸ್ವಿ ಸೂರ್ಯ ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ.

ದಾಂಪತ್ಯಕ್ಕೆ ಕಾಲಿರಿಸಿದ ತೇಜಸ್ವಿ ಸೂರ್ಯ ಮೊದಲ ಪೋಸ್ಟ್; ಮದುವೆ ಸಂಪ್ರದಾಯ ಬಿಚ್ಚಿಟ್ಟ ಸಂಸದ!

ಇನ್ನು ಸಂಸದ ತೇಜಸ್ವಿ ಸೂರ್ಯ ಅವರು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರೊಂದಿಗೆ ಇಂದು (ಮಾರ್ಚ್ 6) ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕನಕಪುರ ರಸ್ತೆಯ ರೆಸಾರ್ಟ್‌ನಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರು ಉಪಸ್ಥಿತಿಯಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ. ಬುಧವಾರ ಸಂಜೆಯಿಂದಲೇ ವರಪೂಜೆ ಸೇರಿದಂತೆ ಮದುವೆ ಶಾಸ್ತ್ರಗಳು ನಡೆದಿದ್ದವು. ಅಂದು ಬೆಳಗ್ಗೆ 10.45 ತುಲಾ ಲಗ್ನದಲ್ಲಿ ಶಿವಶ್ರಿ ಕೊರಳಿಗೆ ತೇಜಸ್ವಿ ಸೂರ್ಯ ಮಾಂಗಲ್ಯಧಾರಣೆ ಮಾಡಿದ್ದರು.