ದಾಂಪತ್ಯಕ್ಕೆ ಕಾಲಿರಿಸಿದ ತೇಜಸ್ವಿ ಸೂರ್ಯ ಮೊದಲ ಪೋಸ್ಟ್; ಮದುವೆ ಸಂಪ್ರದಾಯ ಬಿಚ್ಚಿಟ್ಟ ಸಂಸದ!
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರನ್ನು ವೈದಿಕ ಸಂಪ್ರದಾಯಗಳ ಪ್ರಕಾರ ವಿವಾಹವಾಗಿದ್ದಾರೆ. ಕುಟುಂಬ ಸದಸ್ಯರು, ಸಚಿವರು, ಮತ್ತು ಗಣ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ತಮಿಳುನಾಡು ಮೂಲದ ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರನ್ನು ವಿವಾಹವಾಗಿದ್ದಾರೆ. ವಿವಾಹದ ನಂತರ ಅವರು ಹಂಚಿಕೊಂಡ ಮೊದಲ ಪೋಸ್ಟ್ ಇಲ್ಲಿದೆ ನೋಡಿ..
ಸಂಸದ ತೇಜಸ್ವಿ ಸೂರ್ಯ ಅವರು ಎರಡು ಬಾರಿ ಸಂಸದರಾಗಿ ಆಯ್ಕೆ ಆಗಿದ್ದು, ಮದುವೆಯ ಬಗ್ಗೆ ಹಲವು ಬಾರಿ ಗಾಸಿಪ್‌ಗಳು ಬರುತ್ತಿದ್ದವು. ಆದರೆ, ಈ ಬಗ್ಗೆ ಎಂದಿಗೂ ತುಟಿಬಿಚ್ಚದ ತೇಜಸ್ವಿ ಅವರು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಗಾಯಕಿ ಶಿವಶ್ರೀ ಅವರನ್ನು ಮದುವೆ ಮಾಡಿಕೊಂಡು ಸಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ತೇಜಸ್ವಿ-ಶಿವಶ್ರೀ ಮದುವೆಗೆ ಅವರ ಕುಟುಂಬ ಸದಸ್ಯರು, ಆತ್ಮೀಯ ಬಂಧು-ಬಳಗದ ಜೊತೆಗೆ ಕೇಂದ್ರ ಸರ್ಕಾರದ ಸಚಿವರು, ರಾಜ್ಯ ಸರ್ಕಾರದ ಸಚಿವರು, ರಾಜ್ಯ ಬಿಜೆಪಿ ನಾಯಕರು, ಸಿನಿಮಾ ಕ್ಷೇತ್ರದ ಸೆಲೆಬ್ರಿಟಿಗಳು ಕೂಡ ಆಗಮಿಸಿದ್ದರು.
ತಮ್ಮ ಮದುವೆ ಬಗ್ಗೆ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಪೋಸ್ಟ್ ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ 'ಗುರುಗಳು, ಹಿರಿಯರು ಮತ್ತು ಹಿತೈಷಿಗಳ ಆಶೀರ್ವಾದದೊಂದಿಗೆ ಇಂದು ವೈದಿಕ ಸಂಪ್ರದಾಯಗಳ ಪ್ರಕಾರ ಶಿವಶ್ರೀ ಸ್ಕಂದಪ್ರಸಾದ್ ಅವರನ್ನು ವಿವಾಹವಾಗಿದ್ದೇನೆ. ಈ ಹೊಸ ಅಧ್ಯಾಯವನ್ನು ಪ್ರಾರಂಭಿಸುವಾಗ ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳನ್ನು ನಾವು ಬಯಸುತ್ತೇವೆ' ಎಂದು ತಿಳಿಸಿದ್ದಾರೆ.