Asianet Suvarna News Asianet Suvarna News

ಭಯೋತ್ಪಾದನೆ ನಿಗ್ರಹಕ್ಕೆ ಪ್ರತ್ಯೇಕ ಇಲಾಖೆ ಸ್ಥಾಪಿಸಿ : ಪ್ರಭಾಕರ್ ಭಟ್‌ ಆಗ್ರಹ

ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆಗೆ ಮಂಗಳೂರು ಕೇಂದ್ರವಾಗುತ್ತಿದೆ. ನಿರ್ಮೂಲನೆ ಮಾಡದಿದ್ದರೆ ಸಮಾಜದಲ್ಲಿ ಜನರು ಬದುಕುವುದು ಕಷ್ಟವಾಗುತ್ತಿದೆ. ಸರ್ಕಾರ ಎಚ್ಚತ್ತುಕೊಂಡು ಉಗ್ರ ಕೃತ್ಯ ನಿಯಂತ್ರಣ ಮಾಡಬೇಕು. ಭಯೋತ್ಪಾದನಾ ಚಟುವಟಿಕೆಗಳ ನಿಯಂತ್ರಣಕ್ಕೆ ಒಂದು ಪ್ರತ್ಯೇಕವಾದ ಇಲಾಖೆ ಸ್ಥಾಪಿಸಬೇಕು ಎಂದು ಆರ್‍‌ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

Establish a separate department for counter-terrorism Prabhakar Bhatt
Author
First Published Nov 23, 2022, 4:30 PM IST

ರಾಮನಗರ (ನ.23) : ಇಡೀ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆಗೆ ಮಂಗಳೂರು ಕೇಂದ್ರವಾಗುತ್ತಿದೆ. ನಿರ್ಮೂಲನೆ ಮಾಡದಿದ್ದರೆ ಸಮಾಜದಲ್ಲಿ ಜನರು ಬದುಕುವುದು ಕಷ್ಟವಾಗುತ್ತಿದೆ. ಸರ್ಕಾರ ಎಚ್ಚತ್ತುಕೊಂಡು ಉಗ್ರ ಕೃತ್ಯ ನಿಯಂತ್ರಣ ಮಾಡಬೇಕು. ಭಯೋತ್ಪಾದನಾ ಚಟುವಟಿಕೆಗಳ ನಿಯಂತ್ರಣಕ್ಕೆ ಒಂದು ಪ್ರತ್ಯೇಕವಾದ ಇಲಾಖೆ ಸ್ಥಾಪಿಸಬೇಕು. ಇದು ಯಾವಾಗಲೂ ಉಗ್ರ ಕೃತ್ಯಗಳ ಮೇಲೆ ನಿಗಾವಹಿಸಿ ಸಮಾಜ ಸಂರಕ್ಷಣೆ ಕಾರ್ಯ ಮಾಡಬೇಕು ಎಂದು ಆರ್‍‌ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ಚನ್ನಪಟ್ಟಣ (Channapattana) ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಂಗಳೂರು ಬಾಂಬ್‌ ಬ್ಲಾಸ್ಟ್‌ (Mangaluru bomb blast) ಕುರಿತು ಮಾತನಾಡಿದ ಪ್ರಭಾಕರ್ ಭಟ್ (Prabhakar Bhat), ಮಂಗಳೂರು ದೇಶದಲ್ಲಿ ಭಯೋತ್ಪಾದನಾ (Terrorist) ಕೇಂದ್ರವಾಗುತ್ತಿದೆ. ಆಟೋ ರಿಕ್ಷಾ ಚಾಲಕನಿಗೆ ಪಾಪ ಏನೂ ಗೊತ್ತಿಲ್ಲ. ಯಾರು ಬರುತ್ತಾರೆ, ಯಾರು ಹೋಗುತ್ತಾರೆ ಎಂಬುದು ಗೊತ್ತೇ ಆಗುವುದಿಲ್ಲ. ಯಾರಿಗೆ ಅನುಮಾನ ಬಂದರೂ ಕೂಡ ತಕ್ಷಣ ಪೋಲಿಸರಿಗೆ ಮಾಹಿತಿ ನೀಡಬೇಕು. ಶಾರೀಕ್ (Shareeq) ನಡೆಸುತ್ತಿದ್ದ ಉಗ್ರ ಚಟುವಟಿಕೆ (Terrorist Activity) ಕಾರ್ಯಗಳ ಬಗ್ಗೆ ಅವರ ಕುಟುಂಬಕ್ಕೂ ಮೊದಲೇ ಗೊತ್ತಿತ್ತು. ಮನೆಯವರು ಈ ಎಲ್ಲ ಕಾರ್ಯಗಳನ್ನು ಬಿಟ್ಟು ಸರಿಯಾಗಿ ನಡೆದುಕೊಳ್ಳುವಂತೆ ಹೇಳಿದರೂ ಅವನು ಸರಿಯಾಗಿರಲಿಲ್ಲ. ನಂತರ ಅವನ ಕಾರ್ಯವನ್ನು ಲೆಕ್ಕಿಸದೇ ಕೈಬಿಡುವ ಮೂಲಕ ಉಗ್ರ ಕೃತ್ಯಕ್ಕೆ ಕುಟುಂಬವೇ ಬೆಂಬಲ (Family support) ನೀಡಿದೆ ಎಂದು ಆರೋಪಿಸಿದ್ದಾರೆ.

Mangaluru Blast Case: ಕರಾವಳಿಯಲ್ಲಿ ಎನ್ಐಎ ಘಟಕ ಸ್ಥಾಪಿಸಬೇಕಾಗಿದೆ: ತೇಜಸ್ವಿ ಸೂರ್ಯ

ಪೊಲೀಸರಿಗೆ ದೂರು ಕೊಡಬೇಕಿತ್ತು: ಶಾರೀಕ್‌ನಿಂದ ಉಗ್ರ ಕೃತ್ಯಗಳು ಕಂಡುಬಂದ ಕೂಡಲೇ ಅವರ ಕುಟುಂಬದವರು ಪೋಲಿಸರಿಗೆ ಕಂಪ್ಲೇಂಟ್ (Police case) ಕೊಡಬೇಕಿತ್ತು. ಅಬ್ದುಲ್ ಕಲಾಂ, ಅಬ್ದುಲ್ ನಜೀರ್, ಕೆ.ಕೆ. ಮಹಮ್ಮದ್ ಇಂತಹವು ಮಾತ್ರ ಸಮಾಜ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅನುಕೂಲಕರವಾಗಿದೆ. ಆದರೆ, ಭಯೋತ್ಪಾದಕರೆಲ್ಲಾ ಮುಸಲ್ಮಾನವರೇ (Muslim) ಆಗಿದ್ದಾರೆ. ಭಯೋತ್ಪಾದೆನ ಕೃತ್ಯದ ವಿರುದ್ಧ ಹೋರಾಟ ಮಾಡುವವರೆಲ್ಲ ಎಚ್ಚರ ವಹಿಸಬೇಕು. ಆಗ ಮಾತ್ರ ಇಡೀ ದೇಶ ಮತ್ತು ಸಮಾಜ ಉಳಿಯುತ್ತದೆ ಎಂದು ತಿಳಿಸಿದರು.

ಭಯೋತ್ಪಾದನೆ ತಡೆಗೆ ಎಚ್ಚರವಹಿಸಬೇಕು: ದೇಶ ಮತ್ತು ರಾಜ್ಯದಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಇಲಾಖೆಗಳ ಅಧಿಕಾರಿಗಳು (Officers) ತುಂಬಾ ಎಚ್ಚರಿಕೆ ವಹಿಸಬೇಕು. ಒಂದು ಸಲ ಉಗ್ರ ಕೃತ್ಯಗಳು ಗೊತ್ತಾದ ಮೇಲೆ ಅವರ ಬೆನ್ನು ಬೀಳಬೇಕು. ಈಗ ಒಂದು ಸಲ ಲೋಪ ಆಗಿದ್ದರಿಂದ ಪುನಃ ದೊಡ್ಡ ಸ್ಪೋಟಕ್ಕೆ ಕೈ ಹಾಕಲಾಗಿದೆ. ಒಂದು ಬಾರಿ ಮಾಡಿದ ತಪ್ಪನ್ನು ಮರುಕಳಿಸದಂತೆ ಈಗ ಸರಿ ಪಡಿಸಿಕೊಳ್ಳಬೇಕು. ಒಂದು ಸಂಸ್ಥೆ ಇದಕ್ಕಾಗಿಯೇ ಕೆಲಸ ಮಾಡಬೇಕು (Fall back). ಇದೊಂದು ದೊಡ್ಡ ಜಾಲವಾಗಿದ್ದು, ದೇಶದಾದ್ಯಂತ ಹರಡಿಕೊಂಡಿದೆ.

ಭಾರತದಲ್ಲಿ ಮುಸ್ಲಿಂ ಭಯೋತ್ಪಾದಕರ ಹಾವಳಿ ನಿಂತಿಲ್ಲ: ಕಲ್ಲಡ್ಕ ಪ್ರಭಾಕರ್ ಭಟ್

ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಆರಂಭಿಸಿ: ರಾಜ್ಯದಲ್ಲಿ ಪ್ರವೀಣ್ ನೆಟ್ಟಾರು (Praveen Nettaru), ಶರತ್ ಮಡಿವಾಳ (sharath Madivala), ದೀಪಕ್ (Deepak)ರಂತಹ ಸರಣಿ ಹತ್ಯೆಗಳು ಆಗಿವೆ. ಪೊಲೀಸರು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ದುಷ್ಕೃತ್ಯ ಮಾಡುವಂತಹವರು ನಮ್ಮ ಮಧ್ಯೆಯೇ ಇದ್ದಾರೆ. ಇನ್ನು ಮಂಗಳೂರು ಭಾಗದಲ್ಲಿ ಆದಷ್ಟು ಶೀಘ್ರವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಛೇರಿ ಆರಂಭಿಸಬೇಕು. ರಾಜ್ಯದಲ್ಲಿ ಎಸ್‌ಡಿಪಿಐ (SDPI) ಸಂಘಟನೆ ಒಂದು ರಾಜಕೀಯ ಸಂಘಟನೆ ಆಗಿದೆ. ಆದರೆ, ಪಿಎಫ್‌ಐ (PFI) ಸಂಘಟನೆ ಬ್ಯಾನ್‌ ಆದ ನಂತರ ಎಲ್ಲರೂ ಎಸ್‌ಡಿಪಿಐ ಸೇರಿಕೊಂಡಿದ್ದಾರೆ. ಇದರ ವಿರುದ್ಧವೂ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆರ್‍‌ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಆಗ್ರಹಿಸಿದ್ದಾರೆ.

Follow Us:
Download App:
  • android
  • ios