Asianet Suvarna News Asianet Suvarna News

Bank Strike: ಖಾಸಗೀಕರಣಕ್ಕೆ ವಿರೋಧ: ಇಂದೂ ಕೂಡ ಬ್ಯಾಂಕ್‌ ಬಂದ್‌

*  ಕೇಂದ್ರ ಸರ್ಕಾರದ ನಡೆಗೆ ಆಕ್ರೋಶ, ಪ್ರತಿಭಟನೆ
*  ಬೀದಿಗಿಳಿದು ಬ್ಯಾಂಕ್‌ ಸಿಬ್ಬಂದಿ ಹೋರಾಟ
*  2 ದಿನ ಬ್ಯಾಂಕ್‌ ಸ್ಥಗಿತ
 

Employees Protest Against Bank Privatisation in Bengaluru grg
Author
Bengaluru, First Published Dec 17, 2021, 8:24 AM IST
  • Facebook
  • Twitter
  • Whatsapp

ಬೆಂಗಳೂರು(ಡಿ.17):  ಲಾಭದಲ್ಲಿರುವ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಕ್ಕೆ(Bank Privatisation) ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಸಾವಿರಾರು ಮಂದಿ ಬ್ಯಾಂಕ್‌ ಅಧಿಕಾರಿಗಳು ಪ್ರತಿಭಟನೆ(Protest) ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಗುರುವಾರ ಬೆಳಗ್ಗೆ ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಬ್ಯಾಂಕ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಿದ್ದರು. ಬ್ಯಾಂಕಿಗಳನ್ನು ರಾಷ್ಟ್ರೀಕರಣ ಮಾಡಿರುವುದೇ ರೈತರು(Farmers) ಮತ್ತು ಬಡ ವರ್ಗಕ್ಕೆ ನೆರವಾಗುವುದಕ್ಕಾಗಿ, ಇದೀಗ ಖಾಸಗೀಕರಣ(Privatisation) ಮಾಡಿದರೆ ಬಡ ವರ್ಗ ಸಂಕಷ್ಟಕ್ಕೆ ಸಿಗಲಿದೆ. ಆದ್ದರಿಂದ ಯಾವುದೇ ರಾಷ್ಟ್ರೀಕೃತ ಬ್ಯಾಂಕನ್ನು(Nationalized Bank) ಖಾಸಗೀಕರಣ ಮಾಡುವುದಕ್ಕೆ ಮುಂದಾಗಬಾರದು ಎಂದು ಆಗ್ರಹಿಸಿದರು.

Bank Strike : ಇನ್ನೆರಡು ದಿನ ಸರ್ಕಾರಿ ಬ್ಯಾಂಕ್ ಗಳಲ್ಲಿ ಕೆಲಸ ನಿಧಾನವಾಗಬಹುದು ಎಚ್ಚರ!

ಈ ವೇಳೆ ಮಾತನಾಡಿದ ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆ ಸಂಚಾಲಕ ಎಚ್‌.ವಿ.ವಸಂತ ರೈ, ಸ್ವಾತಂತ್ರ್ಯ ಪೂರ್ವದಲ್ಲಿ ಖಾಸಗಿ ಒಡೆತನದಲ್ಲಿದ್ದ ಬ್ಯಾಂಕಗಳಿಂದ ಸಾಮಾನ್ಯ ಜನಕ್ಕೆ ನೆರವಾಗುತ್ತಿರಲಿಲ್ಲ. ಇದೇ ಕಾರಣದಿಂದ ಬಡವರ್ಗದ ಜನರಿಗೆ ನೆರವಾಗುವ ಉದ್ದೇಶದಿಂದ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಲಾಗಿತ್ತು. ಇದೀಗ ಮತ್ತೆ ಖಾಸಗಿಯವರಿಗೆ ನೀಡಿದರೆ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ದೊಡ್ಡ ಮಟ್ಟದ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.

ಬ್ಯಾಂಕ್‌ ಸಂಘಟನೆಗಳ ಐಕ್ಯವೇದಿಕೆ ರಾಜ್ಯ ಸಂಚಾಲಕ ಶ್ರೀನಿವಾಸ್‌ ಮಾತನಾಡಿ, ಬ್ಯಾಂಕುಗಳನ್ನು ಖಾಸಗೀಕರಣ ಮಾಡಿದಲ್ಲಿ ರೈತರಿಗೆ, ಸಣ್ಣ ಉದ್ದಿಮೆದಾರರಿಗೆ ಸಾಲ(Loan) ಸೌಲಭ್ಯಗಳು ಸಭ್ಯವಾಗುವುದಿಲ್ಲ. ಇದರಿಂದ ಪ್ರಸ್ತುತ ಸಂಕಷ್ಟದಲ್ಲಿ ಸಿಲುಕಿರುವ ರೈತ ವರ್ಗಕ್ಕೆ ತೀವ್ರ ತೊಂದರೆಯಾಗಲಿದೆ. ಬ್ಯಾಂಕುಗಳು ದೇಶದ ಆರ್ಥಿಕತೆಯ ನರನಾಡಿಗಳಂತಿವೆ. ಅಂತಹ ಸಂಸ್ಥೆಗಳನ್ನು ಖಾಸಗಿಯವರ ಕೈಗೆ ಕೊಟ್ಟಲ್ಲಿ ದೇಶದ ಆರ್ಥಿಕತೆಯ ಮೇಲೆ ಪ್ರಭಾವ ಬೀರಲಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಬ್ಯಾಂಕುಗಳ ಖಾಸಗೀಕರಣಕ್ಕೆ ಅವಕಾಶ ನೀಡಬಾರದು ಎಂದರು.

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣ, ಜೀವ ವಿಮಾ ನಿಗಮದಲ್ಲಿನ ಬಂಡವಾಳ ಹಿಂತೆಗೆತ, ವಿಮಾ ಕಂಪನಿಯ ಖಾಸಗೀಕರಣ, ವಿಮಾ ಕ್ಷೇತ್ರದಲ್ಲಿ ಶೇ.74 ವಿದೇಶಿ ಬಂಡವಾಳ ಹೂಡಿಕೆ ಮುಂತಾದ ಕೇಂದ್ರ ಸರ್ಕಾರದ(Central Government) ಕ್ರಮಗಳಿಂದ ಬ್ಯಾಂಕಿಂಗ್‌ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ. ಸರ್ಕಾರ ದೊಡ್ಡ ಸಾಲಗಾರರ ಬಾಕಿ ವಸೂಲಿಗೆ ದಿಟ್ಟ ಪ್ರಯತ್ನ ನಡೆಸುವುದರ ಬದಲಾಗಿ ಬ್ಯಾಂಕ್‌ಗಳನ್ನೇ ಇಂತಹವರಿಗೆ ಮಾರಾಟ ಮಾಡಿ ಸಾರ್ವಜನಿಕ ಆಸ್ತಿಗಳ ಲೂಟಿಗೆ ಅವಕಾಶ ನೀಡುತ್ತಿದೆ. ಬ್ಯಾಂಕ್‌ಗಳ ಖಾಸಗೀಕರಣದಿಂದ ದೇಶದ ಜನರ ಉಳಿತಾಯ ಲೂಟಿ ಆಗಲಿದೆ. ಠೇವಣಿದಾರರ ಹಿತಾಸಕ್ತಿಗೆ ಧಕ್ಕೆ ಆಗಲಿದೆ. ಇದರ ಜೊತೆಗೆ ಉದ್ಯೋಗವಕಾಶ ಮತ್ತು ಮೀಸಲಾತಿಯ ಅವಕಾಶ ಕಡಿಮೆ ಆಗಲಿದೆ. ಬ್ಯಾಂಕ್‌ಗಳ ಶಾಖೆಗಳು ಕಡಿಮೆ ಆಗಲಿದ್ದು ಇದರಿಂದ ಜನಸಾಮಾನ್ಯರು ಬ್ಯಾಂಕಿಂಗ್‌ ಸೇವೆಗಳಿಂದ ವಂಚಿತರಾಗಲಿದ್ದಾರೆ ಎಂದು ಹೇಳಿದರು.

Depositors First: ಗುರು ರಾಘವೇಂದ್ರ ಬ್ಯಾಂಕ್‌ ಠೇವಣಿದಾರರಿಗೆ ಹಣ

ಸಾರ್ವಜನಿಕರ ಪರದಾಟ

ಖಾಸಗೀಕರಣ ವಿರೋಧಿಸಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಗುರುವಾರ ನಡೆಸಿದ ಮುಷ್ಕರದಿಂದ ನಗದು ಮೂಲಕ ಬ್ಯಾಂಕಿಂಗ್‌ ವ್ಯವಹಾರ ನಡೆಸುವ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು. ಇಂದೂ ಕೂಡ ಬ್ಯಾಂಕ್‌ಗಳು ಬಂದ್‌ ಘೋಷಿಸಿವೆ.

ಹಲವು ಶಾಲಾ-ಕಾಲೇಜುಗಳಲ್ಲಿ ಪರೀಕ್ಷೆ ಸೇರಿದಂತೆ ವಿವಿಧ ಶುಲ್ಕಗಳನ್ನು ಬ್ಯಾಂಕ್‌ ಮೂಲಕವೇ ಪಾವತಿ ಮಾಡಬೇಕು ಎಂಬ ಷರತ್ತುಗಳಿದ್ದು, ಶುಲ್ಕ ಪಾವತಿ ಮಾಡಲಾಗದೆ ಹಲವು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಅಲ್ಲದೆ, ಡಿಡಿ ಮತ್ತು ಚಲನ್‌ಗಳ ಮೂಲಕ ವ್ಯವಹಾರ ನಡೆಸುವವರಿಗೂ ಅಡ್ಡಿಯಾಯಿತು. ಇದರಿಂದ ಲಕ್ಷಾಂತರ ರು.ಗಳ ವಹಿವಾಟಿಕೆ ಅಡಚಣೆ ಉಂಟಾಗಿದೆ. ಜೊತೆಗೆ, ಪ್ರತಿ ದಿನ ಬ್ಯಾಂಕ್‌ಗಳಿಂದ ಸಾಲ ಪಡೆದ ಸಂಜೆ ಬ್ಯಾಂಕ್‌ಗೆ ಜಮಾಯಿಸುವ ಬೀದಿ ಬದಿಯ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಸ್ಥರು, ವ್ಯವಹಾರವಿಲ್ಲದೆ ದಿನ ಕಳೆಯುವಂತಾಗಿತ್ತು. ಆನ್ಲೈನ್‌ ವ್ಯವಹಾರದ ಅರಿವಿಲ್ಲದ ಜನತೆ ತಮ್ಮ ವ್ಯವಹಾರಗಳನ್ನು ನಡೆಸಲಾಗದೆ ಪರದಾಡಿದರು. ಆದರೆ, ಎಟಿಎಂಗಳು, ಮತ್ತು ಆನ್ಲೈನ್‌ ಹಣ ಸಂದಾಯ ಪ್ರಕ್ರಿಯೆ ಎಂದಿನಂತೆ ನಡೆದಿದ್ದು, ಸಾರ್ವಜನಿಕರಿಗೆ ದೊಡ್ಡ ಮಟ್ಟದ ತೊಂದರೆಯಾಗಲಿಲ್ಲ.
 

Follow Us:
Download App:
  • android
  • ios