Asianet Suvarna News Asianet Suvarna News

Chamarajanagar: ಜಮೀನಿಗೆ ಹಾಕಿದ್ದ ವಿದ್ಯುತ್ ತಂತಿ ತಗುಲಿ ಹೆಣ್ಣಾನೆ ಸಾವು

ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ವಿದ್ಯುತ್‌ ಶಾಕ್‌ನಿಂದ ಹೆಣ್ಣಾನೆ ಜಮೀನೊಂದರಲ್ಲಿ ಮಂಗಳವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. 

elephant died after being hit electric wire at chamarajanagar gvd
Author
First Published Feb 1, 2023, 12:09 PM IST

ಹನೂರು (ಫೆ.01): ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ವಿದ್ಯುತ್‌ ಶಾಕ್‌ನಿಂದ ಹೆಣ್ಣಾನೆ ಜಮೀನೊಂದರಲ್ಲಿ ಮಂಗಳವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೈಲೂರು ವ್ಯನ್ಯಜೀವಿ ವಲಯದ ಗುಂಡಿಮಾಳದಲ್ಲಿರುವ ಪ್ರಭಾಕರ್‌ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳ ರಕ್ಷಣೆಗೆ ಹಾಕಲಾಗಿದ್ದ ವಿದ್ಯುತ್‌ ತಂತಿಯನ್ನು ಸೋಮವಾರ ರಾತ್ರಿ ಕಾಡಿನಿಂದ ಬಂದ ಕಾಡಾನೆಗಳ ಹಿಂಡು ಮುಸುಕಿನ ಜೋಳದ ಜಮೀನಿಗೆ ನುಗ್ಗಲು ಯತ್ನಿಸಿವೆ. 

ಈ ಸಂದರ್ಭದಲ್ಲಿ ಬೆಳೆ ರಕ್ಷಣೆಗೆ ಬಿಟ್ಟಿದ್ದ ತಂತಿ ತಗುಲಿ ಹೆಣ್ಣಾನೆ ವಿದ್ಯುತ್‌ ಶಾಕ್‌ನಿಂದ ಸ್ಥಳದಲ್ಲೇ ಮೃತಪಟ್ಟಿದೆ. ಅರಣ್ಯ ಅಧಿಕಾರಿಗಳು ಭೇಟಿ: ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿ ಈ ಸಂಬಂಧ ಅಧಿಕಾರಿಗಳು ಜಮೀನು ಮಾಲೀಕ ಪ್ರಭಾಕರ್‌ ವಿರುದ್ಧ ಹನೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತಪಟ್ಟಿರುವ ಆನೆಯ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಕಾಯ್ದೆ ವಾಪಸ್‌ ಪಡೆಯದಿದ್ರೆ ಬಿಜೆಪಿಗೆ ಮತವಿಲ್ಲ: ಕೋಡಿಹಳ್ಳಿ ಚಂದ್ರಶೇಖರ್‌

ಲಾರಿ ಡಿಕ್ಕಿ, ಹೆಣ್ಣಾನೆ ಸಾವು: ಬಂಡೀಪುರ ಅರಣ್ಯದೊಳಗಿನ ಕೇರಳ ಹೆದ್ದಾರಿಯಲ್ಲಿ ಲಾರಿಯೊಂದು ಡಿಕ್ಕಿ ಹೊಡೆದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಹೆಣ್ಣಾನೆ ಸಾವನ್ನಪ್ಪಿರುವ ದುರ್ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಐರನ್‌ ಬ್ರಿಡ್ಜ್‌ ಬಳಿಯ ಕೊಂಡಯ್ಯನಪಾಲ ತಿರುವಿನಲ್ಲಿ ಮಂಗಳವಾರ ರಾತ್ರಿ ಟಿ.ಎನ್‌ 99 ಸಿ 7677 ನಂಬರಿನ ಲಾರಿ ಡಿಕ್ಕಿ ಹೊಡೆದಿದೆ. ಆನೆ ಸಾವಿಗೆ ಕಾರಣವಾದ ಲಾರಿ(ಟಿ.ಎನ್‌ 99 ಸಿ 7677) ಹಾಗೂ ತಮಿಳುನಾಡಿನ ಕೊಯಮತ್ತೂರು ಮೂಲದ ಚಾಲಕ ಅಯ್ಯಸ್ವಾಮಿ, ಕ್ಲೀನರ್‌ ಆನಂದಕುಮಾರ್‌ ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ.

ಘಟನೆ: ಆನೆ ಸಾವಿಗೆ ಕಾರಣವಾದ ಲಾರಿ ಕೇರಳ ಕಡೆಯಿಂದ ಗುಂಡ್ಲುಪೇಟೆಯತ್ತ ಬರುವಾಗ 20 ವರ್ಷದ ಹೆಣ್ಣಾನೆ ರಸ್ತೆ ದಾಟುತ್ತಿದ್ದಾಗ, ಡಿಕ್ಕಿ ಹೊಡೆದಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ ತಿಳಿಸಿದ್ದಾರೆ. ಆನೆ, ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ವಿಷಯ ತಿಳಿದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶಕುಮಾರ್‌, ಎಸಿಎಫ್‌ ಜಿ.ರವೀಂದ್ರ, ಮದ್ದೂರು ವಲಯ ಅರಣ್ಯಾಧಿಕಾರಿ ಮಲ್ಲೇಶ ಎಂ.ಬಿ ಸ್ಥಳಕ್ಕೆ ಭೇಟಿ ನೀಡಿದ್ದರು. ಬಂಡೀಪುರ ಪಶು ವೈದ್ಯಾಧಿಕಾರಿ ಡಾ. ವಾಸೀಂ ಮಿರ್ಜಾ ಆನೆ ಸಾವಿಗೀಡಾದ ಸ್ಥಳಕ್ಕಾಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕ್ರೆತ್ರೖನ್‌ ಮೂಲಕ ಆನೆಯ ಮೃತ ದೇಹವನ್ನು ಕಾಡಿನೊಳಗೆ ರವಾನಿಸಿದ್ದಾರೆ.

Tumakuru: ಆಸ್ತಿ ಆಸೆಗಾಗಿ ಅಜ್ಜಿಯನ್ನೇ ಮನೆಯಿಂದ ಹೊರದಬ್ಬಿದ ಮೊಮ್ಮಗ

ಕೇಸು ದಾಖಲು: ಆನೆಯ ಸಾವಿಗೆ ಕಾರಣನಾದ ಚಾಲಕ, ಕ್ಲೀನರ್‌ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ರ ಪ್ರಕಾರ ಅರಣ್ಯ ಪ್ರಕರಣ ದಾಖಲಿಸಿಕೊಂಡು ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಬಂಧಿತ ಇಬ್ಬರು ಆರೋಪಿಗಳನ್ನು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಒಪ್ಪಿಸಿದ್ದಾರೆ.

Follow Us:
Download App:
  • android
  • ios