ಮೈಸೂರು (ಡಿ.09): ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗವು 99000 ಅಳಿಸಲಾಗದ ಶಾಯಿಯ ಬಾಟಲ್‌ಗೆ ಬೇಡಿಕೆ ಇರಿಸಿದೆ ಎಂದು ಮೈಲ್ಯಾಕ್‌ ಅಧ್ಯಕ್ಷ ಎನ್‌.ವಿ.ಫಣೀಶ್‌ ತಿಳಿಸಿದರು.

ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ಎಂಎಲ್‌ ಅಳತೆಯ 99 ಸಾವಿರ ಬಾಟಲಿಗಳಿಗೆ ಚುನಾವಣಾ ಆಯೋಗ ಬೇಡಿಕೆ ಸಲ್ಲಿಸಿದೆ. ಗ್ರಾಪಂ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ. ಜೊತೆಗೆ ಒಟ್ಟು 6,580 ಪ್ಯಾಕೆಟ್‌ ಸೀಲಿಂಗ್‌ ವ್ಯಾಕ್ಸ್‌ಗೂ ಆಯೋಗ ಬೇಡಿಕೆ ಸಲ್ಲಿಸಿದೆ. ಗ್ರಾಪಂ ಚುನಾವಣೆ ಪ್ರಯುಕ್ತ ಮೈಲ್ಯಾಕ್‌ನಲ್ಲಿ ಒಟ್ಟಾರೆ .1.15 ಕೋಟಿ ವಹಿವಾಟನ್ನು ರಾಜ್ಯ ಚುನಾವಣಾ ಆಯೋಗ ನಡೆಸುತ್ತಿದೆ ಎಂದರು.

ಬೆಳಗಾವಿ ಬೈ ಎಲೆಕ್ಷನ್: ಕೊನೆಗೂ ಪ್ರಬಲವಾಗಿ ಕೇಳಿಬಂತು ಒಬ್ಬರ ಹೆಸರು ..!

2019-20ನೇ ಸಾಲಿನಲ್ಲಿ ಕಂಪನಿಯು ಒಟ್ಟು .21.52 ಕೋಟಿಯಷ್ಟುವಹಿವಾಟು ನಡೆಸಿದ್ದು, ಈ ಪೈಕಿ .4.59 ಕೋಟಿ ಪೇಯಿಂಟ್ಸ್‌ ವಹಿವಾಟು ನಡೆದಿದೆ. .16.93 ಕೋಟಿಯಷ್ಟುವಹಿವಾಟು ಅಳಿಸಲಾಗದ ಇಂಕ್‌ನಿಂದ ಆಗಿದೆ. ಈ ಹಣಕಾಸು ವರ್ಷದಲ್ಲಿ ಒಟ್ಟು .4.70 ಕೋಟಿ ಲಾಭಗಳಿಸಿದೆ ಎಂದರು.

2020-21ನೇ ಸಾಲಿಗೆ . 20 ಕೋಟಿ ವಹಿವಾಟಿನ ಗುರಿ ಹೊಂದಲಾಗಿದೆ. ಈ ಪೈಕಿ ನವೆಂಬರ್‌ 2020ರ ಅಂತ್ಯಕ್ಕೆ .12.25 ಕೋಟಿ ವಹಿವಾಟು ನಡೆಸಲಾಗಿದೆ. 2020-21ನೇ ಸಾಲಿನಲ್ಲಿ ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆ ಹಾಗೂ ರಾಷ್ಟ್ರದಾದ್ಯಂತ ನಡೆದ ಲೋಕಸಭೆ, ವಿಧಾನಸಭೆ ಉಪ ಚುನಾವಣೆಗೂ ಅಳಿಸಲಾಗದ ಶಾಯಿ ಪೂರೈಸಲಾಗಿದೆ ಎಂದು ಮಾಹಿತಿ ನೀಡಿದರು.