ದಾವಣಗೆರೆಯಲ್ಲಿ ಶಾಂತಿಯುತವಾಗಿ ಜರುಗಿದ ಸಂಭ್ರಮದ ಈದ್ ಮಿಲಾದ್
ನಗರದಲ್ಲಿಂದು ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು. ಪ್ರವಾದಿ ಮುಹಮ್ಮದ್ ರವರ ಜನ್ಮ ದಿನ ಹಿನ್ನಲೆಯಲ್ಲಿ ಈ ಹಬ್ಬವನ್ನು ಆಚರಿಸಲಾಯಿತು.
ವರದಿ: ವರದರಾಜ್
ದಾವಣಗೆರೆ (ಸೆ.28): ನಗರದಲ್ಲಿಂದು ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು. ಪ್ರವಾದಿ ಮುಹಮ್ಮದ್ ರವರ ಜನ್ಮ ದಿನ ಹಿನ್ನಲೆಯಲ್ಲಿ ಈ ಹಬ್ಬವನ್ನು ಆಚರಿಸಲಾಯಿತು.
ಇಂದು ದಾವಣಗೆರೆ ನಗರದ ಆಝಾದ್ ನಗರದಿಂದ ಆರಂಭವಾದ ಮೆರವಣಿಗೆಯಲ್ಲಿ ಸಾಕಷ್ಟು ಮುಸ್ಲಿಂ ಬಾಂಧವರು ಭಾಗಿಯಾಗಿ ಮೆಕ್ಕಾ ಮದೀನಾ ಮಾದರಿಗಳೊಂದಿಗೆ ನಾತ್ ಗಳು, ಸಲಾಂಗಳನ್ನು ಹಾಡುತ್ತ ಮುನ್ನಡೆದರು. ಇನ್ನು ಈ ಮೆರವಣಿಗೆಯಲ್ಲಿ ಮುಸ್ಲಿಂ ಬಾಂಧವರ ಇಸ್ಲಾಂ ಧ್ವಜಗಳ ಮಧ್ಯೆ ಕೇಸರಿ ಬಿಳಿ ಹಸಿರು ಬಣ್ಣದ ತ್ರಿವರ್ಣ ಧ್ವಜ ಕಂಡು ಬಂದಿದ್ದು ವಿಶೇಷವಾಗಿತ್ತು. ಹಸಿರು ಧ್ವಜಗಳ ಮಧ್ಯೆ ನಮ್ಮ ರಾಷ್ಟ್ರೀಯ ಧ್ವಜ ಮೆರವಣಿಗೆಯುದ್ದಕ್ಕೂ ಮುಸ್ಲಿಂಬಾಂಧವರು ಪ್ರದರ್ಶಿಸಿ ದೇಶ ಪ್ರೇಮ ಮೆರೆದರು.
ಇಂದು ಈದ್ ಮಿಲಾದ್: ಸಮ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್, ನವಾಝ್ ಅಬ್ಬೆಟ್ಟು
ಮೆರವಣಿಗೆ ಆಝಾದ್ ನಗರದಿಂದ ಆರಂಭವಾಗಿ ಅಹ್ಮದ್ ನಗರ, ಮದೀನ್ ಆಟೋ ನಿಲ್ಧಾಣ ವೃತ್ತ, ಎನ್ ಆರ್ ರಸ್ತೆ, ಕೆಆರ್ ಮಾರುಕಟ್ಟೆ ತಲುಪಿ ಇಸ್ಲಾಂ ಪೇಟೆ, ಗಡಿಯಾರ ಕಂಬ ವೃತ್ತ, ವಸಂತ ರಸ್ತೆ, ಅರುಣ್ ಟಾಕೀಸ್ ಬಳಿ ಬಂದು ಪಿಬಿ ರಸ್ತೆ ಸೇರಿತು ಬಳಿಕ ಗಾಂಧಿ ವೃತ್ತ, ಆಶೋಕ ರಸ್ತೆ, ಮಾಗನಹಳ್ಳಿ ರಸ್ತೆ ಮುಖಾಂತರ ಮಿಲಾದ್ ಮೈದಾನಕ್ಕೆ ಮೆರವಣಿಗೆ ಕೊನೆ ಗೊಂಡಿತ್ತು.
ಆಝಾದ್ ನಗರದಿಂದ ಮೆರವಣಿಗೆ ಆರಂಭದಿಂದ ಹಿಡಿದು ಕೊನೆಯ ವರೆಗೂ ಈ ವೇಳೆ ಪುಟ್ಟ ಬಾಲಕನೋರ್ವ ರಾಷ್ಟ್ರ ಧ್ವಜವನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಮತ್ತೊಂದೆಡೆ ಬಾಷಾ ನಗರ ಮುಖಾಂತರ ಮೆರವಣಿಗೆ ಸಾಗುವ ವೇಳೆಯೂ ಹಸಿರು ಧ್ವಜಗಳ ಮಧ್ಯೆ ರಾಷ್ಟ್ರ ಧ್ವಜ ಪ್ರದರ್ಶನ ಮಾಡಲಾಯಿತು.
Mangaluru: ಮೀನುಗಾರಿಕಾ ಬಂದರಿನಲ್ಲಿ 'Eid' ಬ್ಯಾನರ್ ವಿವಾದ: ವ್ಯಾಪಾರ ಬಹಿಷ್ಕಾರದ ಎಚ್ಚರಿಕೆ!