ಮಕ್ಕಳು ದೇವರು ಸಮಾನ. ಶಿಕ್ಷಣ ಸಚಿವನಾಗಿ ದೇವರ ಸ್ಥಾನದಲ್ಲಿರುವ ಮಕ್ಕಳ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದೆ. ಒಬ್ಬ ಬಂಗಾರಪ್ಪನವರನ್ನ ಕಳೆದುಕೊಂಡರು ಲಕ್ಷಾಂತರ ಸಂಖ್ಯೆಯಲ್ಲಿ ಬಂಗಾರಪ್ಪನವರನ್ನ ನಿಮ್ಮ ರೂಪದಲ್ಲಿ ಕೊಟ್ಟಿದ್ದಾನೆ. ನನ್ನ ಕೊನೆ ಉಸಿರು ಇರೋವರೆಗೆ ನಿಮ್ಮ ಜೊತೆ ಇರುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾವುಕರಾಗಿ ನುಡಿದರು.
ಶಿವಮೊಗ್ಗ (ಮಾ.2): ಮಕ್ಕಳು ದೇವರು ಸಮಾನ. ಶಿಕ್ಷಣ ಸಚಿವನಾಗಿ ದೇವರ ಸ್ಥಾನದಲ್ಲಿರುವ ಮಕ್ಕಳ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದೆ. ಒಬ್ಬ ಬಂಗಾರಪ್ಪನವರನ್ನ ಕಳೆದುಕೊಂಡರು ಲಕ್ಷಾಂತರ ಸಂಖ್ಯೆಯಲ್ಲಿ ಬಂಗಾರಪ್ಪನವರನ್ನ ನಿಮ್ಮ ರೂಪದಲ್ಲಿ ಕೊಟ್ಟಿದ್ದಾನೆ. ನನ್ನ ಕೊನೆ ಉಸಿರು ಇರೋವರೆಗೆ ನಿಮ್ಮ ಜೊತೆ ಇರುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾವುಕರಾಗಿ ನುಡಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿದ ಸಚಿವರು, ಕರ್ನಾಟಕದಲ್ಲಿ ಬಿಜೆಪಿಯವರು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಲು ಆಗಿಲ್ಲ. ಕಾಂಗ್ರೆಸ್ ಸರ್ಕಾರ ಚುನಾವಣೆ ಗೆದ್ದಿಲ್ಲ, ಈ ರಾಜ್ಯದ ತಾಯಂದಿರು ಹೆತ್ತಿರುವ ಸರ್ಕಾರ. ಕಾಂಗ್ರೆಸ್ ಸರ್ಕಾರವನ್ನು ಬಿಳಿಸುವ ಯಾವ ಪ್ರಯತ್ನವೂ ಸಫಲವಾಗುವುದಿಲ್ಲ. ನಮ್ಮ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ. 2010 ರಲ್ಲಿ ತಂದೆ ಬಂಗಾರಪ್ಪನವರು ಸೋಲನ್ನು ಅನುಭವಿಸಿದ್ದರು. ಆದರೆ ಅದೇ ಕಾಂಗ್ರೆಸ್ ಪಕ್ಷ 2024ರ ಲೋಕಸಭಾ ಚುನಾವಣೆಯಲ್ಲಿ ಪುನಃ ಗೆಲುವು ಸಾಧಿಸಲಿದೆ ನೋಡುತ್ತಿರಿ.
ರಾಜ್ಯದಲ್ಲಿ 500 ಕೆಪಿಎಸ್ ಶಾಲೆಗಳು: ಸಚಿವ ಮಧು ಬಂಗಾರಪ್ಪ
ಮುಂಬರುವ ಲೋಕಸಭಾ ಚುನಾವಣೆಗೆ ಶಿವರಾಜಕುಮಾರ ಸೇರಿದಂತೆ ಕೇಂದ್ರಕ್ಕೆ ಹಲವರ ಹೆಸರನ್ನು ಕಳಿಸಲಾಗಿದೆ. ಬಳ್ಳಾರಿಯಲ್ಲಿ ಶಕ್ತಿ ಯೋಜನೆಗೆ ಆ ಶಕ್ತಿ ಕೊಟ್ಟಿದ್ದೇ ಗೀತಾ ಶಿವರಾಜಕುಮಾರ ಎವರು. ಹೀಗಾಗಿ ಗೀತಾ ಶಿವರಾಜ ಕುಮಾರ ಅವರ ಅವಶ್ಯಕತೆ ನನಗೆ ಮತ್ತು ನಮ್ಮ ಪಕ್ಷಕ್ಕೆ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಶಿವರಾಜಕುಮಾರ್ ಪ್ರಚಾರ ನಡೆಸಿದ್ದರು. ಈ ಬಾರಿ ಟಿಕೆಟ್ ಸಿಕ್ಕರೆ ಲೋಕಸಭಾ ಚುನಾವಣೆ ಟಿಕೆಟ್ ಸಿಕ್ಕರೆ ಸ್ಪರ್ಧಿಸಲಿದ್ದಾರೆ ಎಂಬ ಸುಳಿವು ನೀಡಿದರು.
ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಅಧಿಕಾರಕ್ಕೆ ಬಂದಿದೆ ಎನ್ನುತ್ತಾರೆ. ಹೌದು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಕಾರಣದಿಂದಲೇ ಅಧಿಕಾರಲ್ಲಿದೆ. ಬಿಜೆಪಿಯವರ ಮನೆಯಲ್ಲಿ ಕೂಡ ಗ್ಯಾರಂಟಿ ಯೋಜನೆಯ ಫಲಾನುಭವಿಗಳಿದ್ದಾರೆ. ಬಿಜೆಪಿಯವರು ಭಾವನಾತ್ಮಕ ಸೂಕ್ಷ್ಮ ವಿಷಯಗಳು ಡೂಪ್ಲಿಕೇಟ್ ಆಗಿವೆ. ಅವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಭಾವನಾತ್ಮಕ ವಿಷಯಗಳನ್ನು ತರುತ್ತಾರೆ. ಗ್ಯಾರಂಟಿ ಯೋಜನೆ ಜಾರಿಯಾದಾಗ ಟೀಕಿಸಿದ್ದ ಬಿಜೆಪಿಯವರು ಈಗ ಮೋದಿ ಗ್ಯಾರಂಟಿ ಮಾಡಿದ್ದಾರೆ. ಸಿದ್ದರಾಮಯ್ಯನವರ ಗ್ಯಾರಂಟಿ ಮುಂದೆ ಮೋದಿ ಗ್ಯಾರಂಟಿಯನ್ನು ಜನರು ಓಡಿಸುತ್ತಾರೆ ಎಂದರು.
ಕಳೆದ ಚುನಾವನೆಯಲ್ಲಿ ಜೈ ಆಂಜನೇಯ ಅಂದಿದ್ರು. ಆದರೂ ಸೋತರು ಏಕೆಂದರೆ ಮೋದಿ ಬಿಜೆಪಿಯವರ ಮೇಲೆ ಆಂಜನೇಯನಿಗೆ ವಿಶ್ವಾಸವಿರಲಿಲ್ಲ. ನಮ್ಮ ಮೇಲೆ ಇತ್ತು. ಮುಂದಿನ ಲೋಕಸಭಾ ಚುನಾವಣೆಗೆ ಕೂಡ ಕಾಂಗ್ರೆಸ್ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಸರ್ಕಾರ ಕಮಿಷನ್ ಸರ್ಕಾರವಲ್ಲ: ಮಧು ಬಂಗಾರಪ್ಪ
ಬೆಂಗಳೂರಿನ ಬಾಂಬ್ ಸ್ಪೋಟ ಪ್ರಕರಣ ವಿಚಾರ ಪ್ರಸ್ತಾಪಿಸಿದ ಸಚಿವರು, ಕರ್ನಾಟಕದಲ್ಲಿ ಯಾರೇ ತಪ್ಪು ಮಾಡಿದ್ರೂ ಕ್ರಮ ಕೈಗೊಳ್ಳುತ್ತೇವೆ. ವಿಧಾನಸೌಧ ಒಳಗೆ ಮತ್ತು ಹೊರಗೆ ಎಂಬುದು ಇಲ್ಲ. ಇಂಟೆಲಿಜೆನ್ಸ್ ಫೇಲಾಗಿತ್ತು ಎಂಬ ಬಿಜೆಪಿಯವರೇ ಪುಲ್ವಾಮಾ ದಾಳಿಯಾದಾಗ ಯಾವ ಫೇಲ್ಯೂರ್ ಇತ್ತು. ಸಾವಲ್ಲಿ ಮತ ಕೇಳುವ ವ್ಯವಸ್ಥೆ ಬಿಜೆಪಿಯರದು ಹರಿಹಾಯ್ದರು. ಇದೇ ವೇಳೆ ಮಾರ್ಚ್ 5 ರಂದು ನಡೆಯಲಿರುವ ಈಡಿಗರ ಸಮಾವೇಶಕ್ಕೆ ಆಹ್ವಾನ ಬಂದರೆ ಹೋಗುತ್ತೇನೆ ಎಂದರು.
