ಶಿಕ್ಷಣ ಸಚಿವ ಮಧು ಬಂಗಾರಪ್ಪ ಚೆಕ್‌ಬೌನ್ಸ್‌ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಕಾನೂನಾತ್ಮಕವಾಗಿ ದಂಡ ಹಾಕಿದ್ದಾರೆ. ಮಧು ಬಂಗಾರಪ್ಪ ಆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯವರು ಯಾರ ಯಾರ ರಾಜೀನಾಮೆ ಯಾವಾಗ ತಗೊಂಡ್ರು ಅಂತಾ ಗೊತ್ತಿದೆ. ಎಂದು ಪ್ರಶ್ನಿಸುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಮಧು ಬಮಗಾರಪ್ಪರನ್ನು ಸಮರ್ಥಿಸಿಕೊಂಡರು.

ಬೆಂಗಳೂರು (ಡಿ.30): ಶಿಕ್ಷಣ ಸಚಿವ ಮಧು ಬಂಗಾರಪ್ಪ ಚೆಕ್‌ಬೌನ್ಸ್‌ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಕಾನೂನಾತ್ಮಕವಾಗಿ ದಂಡ ಹಾಕಿದ್ದಾರೆ. ಮಧು ಬಂಗಾರಪ್ಪ ಆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯವರು ಯಾರ ಯಾರ ರಾಜೀನಾಮೆ ಯಾವಾಗ ತಗೊಂಡ್ರು ಅಂತಾ ಗೊತ್ತಿದೆ. ಮಾಡಳ್ ವಿರೂಪಾಕ್ಷ, ಈಶ್ವರಪ್ಪ ರಾಜೀನಾಮೆ ತಗೊಂಡ್ರಾ? ಪಿಐಎಸ್ ಹಗರಣ ಮಾಡಿದಾಗ ಆರಗ ಜ್ಞಾನೇಂದ್ರ ಅವರ ರಾಜೀನಾಮೆ ತಗೊಂಡ್ರಾ? ಎಂದು ಪ್ರಶ್ನಿಸುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಮಧು ಬಂಗಾರಪ್ಪನವರನ್ನ ಸಮರ್ಥಿಸಿಕೊಂಡರು.

ಸಚಿವ ಮಧುಬಂಗಾರಪ್ಪ ರಾಜೀನಾಮೆಗೆ ಬಿಜೆಪಿ ನಾಯಕರು ಒತ್ತಾಯಿಸುತ್ತಿರುವ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮಧು ಬಂಗಾರಪ್ಪ ಅವರದ್ದು ವೈಯಕ್ತಿಕ ಕೇಸ್. ಆದರೆ ಬಿಜೆಪಿಯವರು ಸಾರ್ವಜನಿಕರ ಹಣ ಲೂಟಿ‌ ಮಾಡಿದ್ರಲ್ಲ, ಯುವಕರ ಭವಿಷ್ಯ ಹಾಳು ಮಾಡಿದ್ರಲ್ಲ ಆಗ ಎಲ್ಲಿ ಹೋಗಿತ್ತು ನೈತಿಕತೆ? ಈಗ ಅವರದ್ದೇ ಶಾಸಕ ಯತ್ನಾಳ್, ಬಿಎಸ್ ವೈ ಕಾಲದಲ್ಲಿ 40 ಸಾವಿರ ಕೋಟಿ ಹಗರಣ ಆಗಿದೆ ಎಂದು ಆರೋಪ ಮಾಡಿದ್ದಾರೆ. ಹಾಗಾದ್ರೆ ವಿಜಯೇಂದ್ರ ರಾಜೀನಾಮೆ ಕೊಡ್ತಾರಾ? ಅದರ ಬಗ್ಗೆ ಇನ್ನೂ ಪ್ರತಿಕ್ರಿಯೆನೇ ನೀಡಿಲ್ಲ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಚೆಕ್‌ಬೌನ್ಸ್‌ ಕೇಸ್: 6.96 ಕೋಟಿ ರೂ. ದಂಡ ಅಥವಾ 6 ತಿಂಗಳು ಜೈಲು ವಿಧಿಸಿದ ಕೋರ್ಟ್

ಬಹಿರಂಗವಾಗಿ ಆರೋಪ ಮಾಡ್ತಿದ್ರೂ ಮೌನವಾಗಿದ್ದಾರೆ, ಮೌನ ಅಂದರೆ ಎಸ್ ಅಂತನಾ? ಯತ್ನಾಳ್ ಆರೋಪ ಸುಳ್ಳು ಎಂದಾದರೆ ಅವರನ್ನ ಉಚ್ಚಾಟನೆ ಮಾಡಲಿ. ಕನಿಷ್ಟಪಕ್ಷ ನೋಟಿಸ್‌ ಸಹ ಕೊಡಲು ಆಗಿಲ್ಲ ಎಂದರೆ ಭ್ರಷ್ಟಾಚಾರ ನಡೆದಿದೆ ಎಂದೇ ಸಾಬೀತಾಯ್ತಲ್ವಾ? ಕಾಂಗ್ರೆಸ್ ಜೊತೆಗೆ ಮ್ಯಾಚ್ ಫಿಕ್ಸ್ ಎನ್ನುವುದಾದರೆ ಯತ್ನಾಳ್ ವಿರುದ್ಧ ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.

ಇನ್ನು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಪಾರ್ಲಿಮೆಂಟ್ ಪ್ರವೇಶಕ್ಕೆ ಪಾಸ್ ಕೊಟ್ಟಿರೋ ಬಗ್ಗೆ, ಅವರ ಸಹೋದರ ಅಕ್ರಮವಾಗಿ ಮರಗಳ್ಳತನ ಮಾಡಿರೋ ಬಗ್ಗೆ ಯಾಕೆ ಮೌನವಾಗಿದ್ದಾರೆ. ನಾನು ಈ ಹಿಂದೆ ಸತ್ಯ ಹೇಳಿದ್ದಕ್ಕೆ ನೋಟೀಸ್ ಕೊಟ್ಟಿದ್ದರು. ಪ್ರಕರಣದ ಬಗ್ಗೆ ಯಾರು ಹೇಳಿದ್ದಾರೋ ಅವರನ್ನು ಕರೆಸುವ ಕೆಲಸ ಆಯೋಗ ಮಾಡಿದೆ‌. ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ ಹಾಗೆ ಮಾಡುತ್ತಿರುವುದು ಬಿಜೆಪಿ ನಾಯಕರೇ ಎಂದು ತಿರುಗೇಟು ನೀಡಿದರು.

ಯತ್ನಾಳ್‌ ಹೇಳಿಕೆಯಿಂದ ತನಿಖೆಗೆ ಬಲ, ದಾಖಲೆ ಬಿಡುಗಡೆ ಮಾಡಲಿ: ಪ್ರಿಯಾಂಕ್‌ ಖರ್ಗೆ

ಮೊದಲು ಪಕ್ಷ ಗೆಲ್ಲಿಸೋಣ ಆಮೇಲೆ ಪಿಎಂ:

ರಾಹುಲ್ ಗಾಂಧಿ ಪಿಎಂ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಬಹಿರಂಗವಾಗಿ ಹೇಳಿದ್ದಾರೆ. ಆದರೆ ಇಂಡಿ ಮೈತ್ರಿಕೂಟದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿತವಾಗಿದ್ದಾರೆ. ಇಬ್ಬರ ನಡುವೆ ಯಾರು ಪಿಎಂ ಅಗ್ತಾರೆ ಎಂಬುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಮೈತ್ರಿಕೂಟದಿಂದ ಅಧಿಕೃತವಾಗಿ ಯಾರ ಹೆಸರು ಪ್ರಕಟವಾಗಿಲ್ಲ. ಅವರವರ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಮೊದಲು ಪಕ್ಷವನ್ನು ಗೆಲ್ಲಿಸೋಣ ಎಂದು ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಹೇಳಿದ್ದಾರೆ. ರಾಹುಲ್ ಗಾಂಧಿ ಅವರ ಪಿಎಂ ಆಗಲಿ ಎಂದು ಬಯಸುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.