Asianet Suvarna News Asianet Suvarna News

ಯತ್ನಾಳ್‌ ಹೇಳಿಕೆಯಿಂದ ತನಿಖೆಗೆ ಬಲ, ದಾಖಲೆ ಬಿಡುಗಡೆ ಮಾಡಲಿ: ಪ್ರಿಯಾಂಕ್‌ ಖರ್ಗೆ

ಯತ್ನಾಳ್‌ ಅವರು ಕನ್ನಡಿಗರ ಹಿತಾಸಕ್ತಿ ಕಾಪಾಡಲು ತಮ್ಮ ಬಳಿ ಇರುವ ದಾಖಲೆಗಳನ್ನು ಮಾಧ್ಯಮದ ಎದುರು ಬಿಡುಗಡೆ ಮಾಡಬೇಕು ಅಥವಾ ರಾಜ್ಯ ಸರ್ಕಾರ ನೇಮಿಸಿರುವ ನ್ಯಾ. ಮೈಕಲ್‌ ಸಮಿತಿಗೆ ನೀಡಬೇಕು ಎಂದು ಆಗ್ರಹಿಸಿದ ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ 

Minister Priyank Kharge React to BJP MLA Basanagouda Patil Yatnal Statement grg
Author
First Published Dec 28, 2023, 7:02 AM IST

ಬಾಗಲಕೋಟೆ/ಕಲಬುರಗಿ(ಡಿ.28): ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಕೋವಿಡ್‌ ಹೆಸರಲ್ಲಿ 40 ಸಾವಿರ ಕೋಟಿ ರು. ಹಗರಣ ನಡೆದಿದೆ ಎಂಬ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಸಚಿವರಾದ ಪ್ರಿಯಾಂಕ್‌ ಖರ್ಗೆ ಹಾಗೂ ಡಾ.ಜಿ.ಪರಮೇಶ್ವರ್‌ ಅವರು ಬಿಜೆಪಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

ಯತ್ನಾಳ್‌ ಅವರು ಕನ್ನಡಿಗರ ಹಿತಾಸಕ್ತಿ ಕಾಪಾಡಲು ತಮ್ಮ ಬಳಿ ಇರುವ ದಾಖಲೆಗಳನ್ನು ಮಾಧ್ಯಮದ ಎದುರು ಬಿಡುಗಡೆ ಮಾಡಬೇಕು ಅಥವಾ ರಾಜ್ಯ ಸರ್ಕಾರ ನೇಮಿಸಿರುವ ನ್ಯಾ. ಮೈಕಲ್‌ ಸಮಿತಿಗೆ ನೀಡಬೇಕು ಎಂದು ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದರೆ, ಯತ್ನಾಳ್‌ರಿಂದ ಕೋವಿಡ್‌ ಹಗರಣದ ಮೊತ್ತದ ಕುರಿತ ತಪ್ಪು ಕಲ್ಪನೆ ಬದಲಾಗಿದೆ. ₹4000 ಕೋಟಿ ಭ್ರಷ್ಟಾಚಾರ ಎಂದು ಭಾವಿಸಿದ್ದೆವು. ಯತ್ನಾಳ ಅವರ ಹೇಳಿಕೆಯಿಂದ ಅದು ₹40000 ಕೋಟಿ ಹಗರಣ ಎಂಬುದು ಗೊತ್ತಾಗಿದೆ. ಅವರು ಇದೀಗ ನಮ್ಮ ಕೆಲಸವನ್ನು ಹಗುರ ಮಾಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಯಡಿಯೂರಪ್ಪ ಪಂಚಮಸಾಲಿಗೆ 2ಎ ಮೀಸಲಾತಿ ಕೊಡಲಿಲ್ಲ: ಯತ್ನಾಳ

ಈ ಕುರಿತು ಬಾಗಲಕೋಟೆಯಲ್ಲಿ ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿರುವ ಪ್ರಿಯಾಂಕ್‌, ಬಿಜೆಪಿ ಹೆಣದಲ್ಲಿ ಹಣ ಮಾಡಿದೆ. ಯತ್ನಾಳ ಅವರು ಸ್ವಪಕ್ಷೀಯರ ವಿರುದ್ಧ ಆರೋಪ ಮಾಡಿರುವ ಹಿನ್ನೆಲೆಯಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್.ಅಶೋಕ್‌ ಹಾಗೂ ಕೋಟ ಶ್ರೀನಿವಾಸ್ ಪೂಜಾರಿ ಅವರು ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

ಕೋವಿಡ್‌ ಹಗರಣದ ಮೊತ್ತದ ಕುರಿತು ನಮಗೆ ತಪ್ಪು ಕಲ್ಪನೆ ಇತ್ತು. ಇದು ₹4000 ಕೋಟಿ ಭ್ರಷ್ಟಾಚಾರ ಎಂದು ಭಾವಿಸಿದ್ದೆವು. ಯತ್ನಾಳ ಅವರ ಹೇಳಿಕೆಯಿಂದ ಅದು ₹40000 ಕೋಟಿ ಹಗರಣ ಎಂಬುದು ಗೊತ್ತಾಗಿದೆ. ಯತ್ನಾಳ ಅವರ ಹೇಳಿಕೆ ತನಿಖೆಗೆ ಇನ್ನಷ್ಟು ಶಕ್ತಿ ಕೊಟ್ಟಂತಾಗಿದೆ ಎಂದು ಪರಮೇಶ್ವರ್ ಅವರು ಕಲಬುರಗಿಯಲ್ಲಿ ತಿಳಿಸಿದರು.

Follow Us:
Download App:
  • android
  • ios