Asianet Suvarna News Asianet Suvarna News

ಶಿಕ್ಷಣ ಸಚಿವ ಮಧು ಬಂಗಾರಪ್ಪ ಚೆಕ್‌ಬೌನ್ಸ್‌ ಕೇಸ್: 6.96 ಕೋಟಿ ರೂ. ದಂಡ ಅಥವಾ 6 ತಿಂಗಳು ಜೈಲು ವಿಧಿಸಿದ ಕೋರ್ಟ್

ಶಿಕ್ಷಣ ಸಚಿವ ಮಧು ಬಂಗಾರಪ್ಪ ಚೆಕ್‌ಬೌನ್ಸ್‌ ಕೇಸ್‌ನಲ್ಲಿ ವಿಶೇಷ ನ್ಯಾಯಾಲಯವು 6.96 ಕೋಟಿ ರೂ. ದಂಡ ಪಾವತಿ ಅಥವಾ 6 ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ.

Court Sentenced to Education Minister Madhu Bangarappa for Rs 6 Crore Check bounce case sat
Author
First Published Dec 29, 2023, 6:14 PM IST

ಬೆಂಗಳೂರು (ಡಿ.29): ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರರೂ ಆಗಿರುವ ಹಾಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ 2011ರ ಚೆಕ್‌ಬೌನ್ಸ್‌ ಪ್ರಕರಣಕ್ಕೆ ಸಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 6.96 ಕೋಟಿ ರೂ. ದಂಡವನ್ನು ವಿಧಿಸಿ ಆದೇಶಿಸಿದೆ. ದಂಡ ಪಾವತಿ ಮಾಡದಿದ್ದರೆ 6 ತಿಂಗಳು ಜೈಲುವಾಸ ಅನುಭವಿಸುವಂತೆ ಆದೇಶಿಸಲಾಗಿದೆ.

ರಾಜ್ಯದ ಆಕಾಶ್ ಆಡಿಯೋ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಧು ಬಂಗಾರಪ್ಪ ಅವರು, ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆಗೆ ನೀಡಲಾಗಿದ್ದ 6.60 ಕೋಟಿ ರೂಪಾಯಿ ಮೌಲ್ಯದ ಚೆಕ್ ಬೌನ್ಸ್‌ ಆಗಿತ್ತು. ಆದರೆ, ಈ ಬಗ್ಗೆ ವಿಚಾರಣೆ ಮಾಡಿದಾಗ ಉಡಾಫೆಯಾಗಿ ವರ್ತಿಸಿದ ಮಧು ಬಂಗಾರಪ್ಪ ವಿರುದ್ಧ ರಾಜೇಶ್‌ ಎಕ್ಸ್‌ಪೋರ್ಟ್‌ ಸಂಸ್ಥೆಯಿಂದ ಚೆಕ್‌ಬೌನ್ಸ್‌ ಪ್ರಕರಣವನ್ನು ದಾಖಲಿಸಲಾಗಿತ್ತು. ಈ ಪ್ರಕರಣದ ಅರ್ಜಿಯನ್ನು ವಿಚಾರಣೆ ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಹಾಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ 6,96,70,000 ರೂ. (6.96 ಕೋಟಿ ರೂ.) ದಂಡವನ್ನು ವಿಧಿಸಿದೆ.

ಹುಬ್ಬಳ್ಳಿ ಶಿಕ್ಷಕಿಯ ಮೇಲೆ ಅತ್ಯಾಚಾರವೆಸಗಿದ ಮಧ್ಯಪ್ರದೇಶ ಮುಸ್ಲಿಂ ಧರ್ಮಗುರು ಬಂಧನ!

ಇನ್ನು ನ್ಯಾಯಾಲಯ ವಿಧಿಸಿದ 6.96 ಕೋಟಿ ರೂ. ದಂಡ ಪಾವತಿಸಬೇಕು ಅಥವಾ 6 ತಿಂಗಳ ಸೆರೆವಾಸ ಅನುಭವಿಸಬೇಕು ಎಂದು ಸಚಿವ ಮಧು ಬಂಗಾರಪ್ಪಗೆ ಶಿಕ್ಷೆ ನೀಡಲಾಗಿದೆ. ಇನ್ನು ದಂಡದ ಹಣದಲ್ಲಿ 6,96,60,000 ರೂ. ಹಣವನ್ನು ದೂರುದಾರರಿಗೆ ಪರಿಹಾರವಾಗಿ ನೀಡಬೇಕು. ಉಳಿದ 10 ಸಾವಿರ ರೂ. ಹಣವನ್ನು ಸರ್ಕಾರಕ್ಕೆ ದಂಡವಾಗಿ ಪಾವತಿಸಬೇಕು ಎಂದು ಆದೇಶ ಹೊರಡಿಸಿದೆ.

ಶಿಕ್ಷಣ ಸಚಿವರ ಕಾರು ಅಪಘಾತ, ಪ್ರಾಣಾಪಾಯದಿಂದ ಪಾರು: ತುಮಕೂರು: ಸಚಿವ ಮಧು ಬಂಗಾರಪ್ಪ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ(ಬುಧವಾರ) ರಾತ್ರಿ ನಡೆದಿದೆ. ಸಚಿವ ಮಧು ಬಂಗಾರಪ್ಪ ಅವರಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸ್ವಲ್ಪದರಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ಸಚಿವ ಮಧು ಬಂಗಾರಪ್ಪ ಅವರಿದ್ದ ಕಾರು ಬೆಂಗಳೂರು ಕಡೆಗೆ ಹೋಗುತ್ತಿತ್ತು, ಈ ವೇಳೆ ಲಾರಿ ಚಾಲಕ ಕಾರನ್ನು ಉಜ್ಜಿಕೊಂಡು ಹೋಗಿದ್ದಾನೆ. ಅಪಘಾತದಲ್ಲಿ ಕಾರಿನ ಮುಂಭಾಗ ಜಖಂಗೊಂಡಿದೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ಅಪಘಾತದ ಬಳಿಕ ಸಚಿವ ಮಧು ಬಂಗಾರಪ್ಪ ಬೇರೆ ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದಾರೆ. 

3 ವರ್ಷದಲ್ಲಿ 3 ಸಾವಿರ ಕೆಪಿಎಸ್ ಶಾಲೆ ಸ್ಥಾಪನೆ ಗುರಿ: ಸಚಿವ ಮಧು ಬಂಗಾರಪ್ಪ

ನಾನು ಆರಾಮಾಗಿದ್ದೇನೆ ಎಂದು ಪ್ರಕಟಣೆ ಹೊರಡಿಸಿದ ಮಧು ಬಂಗಾರಪ್ಪ: ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದ ಮಧು ಬಂಗಾರಪ್ಪ ಅವರು ದೇವರ ಹಾಗೂ ತಂದೆತಾಯಿಗಳ ಆಶೀರ್ವಾದದಿಂದ ನಾನು ಆರಾಮಾಗಿದ್ದೇನೆ ಎಂದು ಶಿಕ್ಷಣ ಮತ್ತು ಶಿವಮೊಗ್ಗ ಜಿಲ್ಲಾ‌ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಕಾರಿನ ಚಾಲಕ ಸೇರಿದಂತೆ ಎಲ್ಲಾ ಕ್ಷೇಮವಾಗಿದ್ದು,ಯಾರೂ ಸಹ ಆತಂಕ‌,ಗಾಬರಿಯಾಗುವ ಅವಶ್ಯಕತೆಯಿಲ್ಲ.ನನಗಾಗಿ ಹಾರೈಸಿದ ಶುಭಕೋರಿದ ಪ್ರಾರ್ಥಿಸಿದ ನನ್ನೆಲ್ಲ ಮತಬಾಂಧವರಿಗೂ ಹಿತೈಷಿಗಳಿಗೂ ಜಿಲ್ಲಾ ಹಾಗೂ ಮತಕ್ಷೇತ್ರದ ಜನತೆಗೂ,ಅಭಿಮಾನಿಗಳಿಗೂ,ಸ್ನೇಹಿತರಿಗೂ ಪಕ್ಷದ ಎಲ್ಲಾ ಕಾರ್ಯಕರ್ತ ಮುಖಂಡರೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುವುದಾಗಿ ಪತ್ರಿಕಾ ಪ್ರಕಟಣೆ ಮೂಲಕ ಸಚಿವರು ತಿಳಿಸಿದ್ದರು.

Follow Us:
Download App:
  • android
  • ios