Asianet Suvarna News Asianet Suvarna News

ನಂಗೆ ಹೇರ್ ಕಟ್ ಮಾಡೋರು ಫ್ರೀಯಿಲ್ಲ, ವಿಜಯೇಂದ್ರ ಬಂದು ಕಟಿಂಗ್ ಮಾಡಲಿ; ಶಿಕ್ಷಣ ಸಚಿವ ಮಧು ಬಂಗಾರಪ್ಪ

ನನ್ನ ತಲೆಯ ಹೇರ್ ಕಟ್ ಮಾಡುವವರು ಫ್ರೀಯಾಗಿಲ್ಲ. ಒಂದು ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಫ್ರೀಯಾಗಿದ್ದರೆ ಬಂದು ಕಟಿಂಗ್ ಮಾಡಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಟಾಂಗ್ ನೀಡಿದ್ದಾರೆ.

Education Minister Madhu Bangarappa BJP president Vijayendra if you free come and do my hair cut sat
Author
First Published May 27, 2024, 12:44 PM IST

ಚಿತ್ರದುರ್ಗ (ಮೇ 27): ನನ್ನ ತಲೆಯ ಹೇರ್ ಕಟ್ ಮಾಡುವವರು ಫ್ರೀಯಾಗಿಲ್ಲ. ಒಂದು ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಫ್ರೀಯಾಗಿದ್ದರೆ ಬಂದು ಕಟಿಂಗ್ ಮಾಡಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಟಾಂಗ್ ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ನನಗೆ ಕಟಿಂಗ್ ಮಾಡುವವರು ಫ್ರೀ ಇಲ್ಲ. ವಿಜಯೇಂದ್ರ ಫ್ರೀಯಿದ್ದರೆ ಬಂದು ಕಟಿಂಗ್ ಮಾಡಲಿ. ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ ಭ್ರಮೆಯಲ್ಲಿದ್ದಾರೆ. ವಿಜಯೇಂದ್ರ ಅವರ ಅಪ್ಪ ಮುಖ್ಯಮಂತ್ರಿ ಆಗಿದ್ದರೆಂಬ ಭ್ರಮೆಯಲ್ಲಿದ್ದಾರೆ. ಕೂಡಲೇ ವಿಜಯೇಂದ್ರ ಅವರು ಭ್ರಮೆಯಿಂದ ಹೊರ ಬರಬೇಕು. ಬಿಜೆಪಿ ರಾಜ್ಯಾದ್ಯಕ್ಷರಾಗಿ ಏನು ಮಾಡಬೇಕು ಯೋಚಿಸಲಿ. ಚಿತ್ರರಂಗದ ಬಗ್ಗೆ ವಿಜಯೇಂದ್ರ ಮಾತಾಡುವ ಅಗತ್ಯ ಇಲ್ಲ ಎಂದು ಟೀಕೆ ಮಾಡಿದರು.

ಸೆಕ್ಯೂರಿಟಿ ಏಜೆನ್ಸಿಗೆ ಶಿಕ್ಷಕರ ಸೇವೆ ಪೂರೈಸುವ ಗುತ್ತಿಗೆ ಕೊಟ್ಟ ಸರ್ಕಾರ; ಬಡ ಮಕ್ಕಳ ಶಿಕ್ಷಣದ ಬಗ್ಗೆ ಅಸಡ್ಡೆವೇಕೆ?

ವಿಜಯೇಂದ್ರ ಅವರ ಹಣೆಬರಹ ಜೂನ್ 4ಕ್ಕೆ ಬರುತ್ತದೆ ಆಗ ನೋಡಿಕೊಳ್ಳಲಿ. ನನ್ನ ಹಣಬರಹ ನಾನು ನೋಡಿಕೊಳ್ಳುತ್ತೇನೆ, ತೊಂದರೆಯಿಲ್ಲ. ಇಷ್ಟು ವರ್ಷ ಬಿಜೆಪಿ ಹೊಲಸು ಮಾಡಿದ್ದನ್ನು ನಾವು ಸರಿ ಮಾಡುತ್ತಿದ್ದೇವೆ. ಪಠ್ಯ ಪರಿಷ್ಕರಣೆ ಪ್ರಣಾಳಿಕೆಯಲ್ಲಿ ಹೇಳಿದಂತೆ ಮಾಡಿದ್ದೇವೆ. ಬಿಜೆಪಿ ಹಣೆಬರಹಕ್ಕೆ ಶಿಕ್ಷಕರ‌ ನೇಮಕಾತಿಯನ್ನೂ ಮಾಡಲಾಗಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಿದ್ದೇವೆ ಎಂದು ಹೇಳಿದರು.

ಸಾಮಾನ್ಯವಾಗಿ ಶಾಲೆಗೆ ಮಕ್ಕಳು ಉತ್ತಮ ಬಟ್ಟೆ ಧರಿಸಿ, ಕೂದಲನ್ನು ಸಣ್ಣದಾಗಿ ಕಟ್ಟಿಂಗ್ ಮಾಡಿಸಿಕೊಂಡು ತಲೆಗೆ ಎಣ್ಣೆ ಹಚ್ಚಿಕೊಂಡು ತಲೆ ಬಾಚಿಕೊಂಡು ಬರುತ್ತಾರೆ. ಆದರೆ, ಸ್ವತಃ ಶಿಕ್ಷಣ ಸಚಿವರೇ ಶಾಲೆಗೆ ಬರುತ್ತಾರೆಂದರೆ ಶಿಕ್ಷಕರು ಅವರಿಗೆ ತಲೆ ಬಾಚಿಕೊಂಡು ಬನ್ನಿ ಎನ್ನುವಂತಾಗಿದೆ. ಜೊತೆಗೆ, ಶಿಕ್ಷಣ ಇಲಾಖೆಯನ್ನು ಹೊಂದಿದ ಶಿಕ್ಷಣ ಸಚಿವರು ವಿಧಾನಸಭೆಗೆ ಬರುವಾಗಲೇ ನೀವು ತಲೆ ಬಾಚಿಕೊಂಡು ಬನ್ನಿ ಎಂದು ಹೇಳುವಂತಹ ಪರಿಸ್ಥಿತಿ ಬಂದಿದೆ. ಅವರಿಗೆ ಕಟ್ಟಿಂಗ್ ಮಾಡಿಸಿಕೊಳಡು ಬರಲು ಹೇಳಬೇಕಿ. ಅವರಿನ್ನೂ ಚಿತ್ರರಂಗದಲ್ಲಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಅದರಿಂದ ಹೊರಬರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕೆ ಮಾಡಿದ್ದರು.

ವಿಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ: ಆಯನೂರು ಮಂಜುನಾಥ್ ವಿಶ್ವಾಸ

ಎಂಎಲ್‌ಸಿ ರವಿಕುಮಾರ್ ಕೂಡ ಟೀಕೆ:  ಕಳೆದ ಮೇ 21ರಂದು ಹೊಸಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಯಾರಾದರೂ ಹೇರ್‌ ಕಟಿಂಗ್ ಮಾಡಿಸಿ, ಸಂಸ್ಕಾರ ಕಲಿಸಬೇಕಿದೆ ಎಂದು ಲೇವಡಿ ಮಾಡಿದ್ದರು. ಶಿಕ್ಷಣ ಖಾತೆ ಸಚಿವರಿಗೆ ಯಾವುದೇ ಗಾಂಭೀರ್ಯ ಇಲ್ಲ. ಶರಣರು, ಸಂತರು ಜನಿಸಿ ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಡಿನಲ್ಲಿ ಇಂತಹ ಸಚಿವ ಶಿಕ್ಷಣ ಖಾತೆಯ ಮಂತ್ರಿಯಾಗಿರುವುದು ಶೋಚನೀಯ. ಸಚಿವರು ಉಡಾಫೆ ಮಾತನಾಡುತ್ತಿದ್ದಾರೆ. ಅವರಿಗೆ ಯಾರಾದರೂ ಕಟಿಂಗ್ ಮಾಡಿಸಿ ಸಂಸ್ಕಾರ ಕಲಿಸಬೇಕಿದೆ. ಅವರಿಗೆ ಕನ್ನಡವೇ ಬರುವುದಿಲ್ಲ ಎಂದು ಆರೋಪಿಸಿದ್ದರು. ಇದನ್ನೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೂ ಉಲ್ಲೇಖ ಮಾಡಿದ್ದರು. ಆರು ದಿನಗಳ ಬಳಿಕ ಈ ಹೇಳಿಕೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿರುಗೇಟು ಕೊಟ್ಟಿದ್ದಾರೆ.

Latest Videos
Follow Us:
Download App:
  • android
  • ios