Asianet Suvarna News Asianet Suvarna News

Ede Snana: ಈ ಬಾರಿಯೂ ಕುಕ್ಕೆಯಲ್ಲಿ ಎಡೆಸ್ನಾನ ಸೇವೆಗಿಲ್ಲ ಅವಕಾಶ

* ಈ ಬಾರಿಯೂ ಎಡೆಸ್ನಾನ ಸೇವೆಗಿಲ್ಲ ಅವಕಾಶ
* ಚಂಪಾಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳು ನಡೆಸುವ ಎಡೆಸ್ನಾನ ಸೇವೆ
* ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲದಲ್ಲಿ ನಡೆಯುತ್ತಿದ್ದ ಎಡೆಸ್ನಾನ

ede snana Cancels In kukke-subrahmanya Temple during champashasti mahothsava rbj
Author
Bengaluru, First Published Dec 5, 2021, 6:11 PM IST

ಕುಕ್ಕೆ ಸುಬ್ರಹ್ಮಣ್ಯ, (ಡಿ.5): ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ (Kukke Subramanya) ದೇವಾಲದ ಚಂಪಾಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳು ನಡೆಸುವ ಎಡೆಸ್ನಾನ(Ede Snana) ಸೇವೆಯನ್ನು ರದ್ದು ಮಾಡಲಾಗಿದೆ.

ಇದೇ ಡಿಸೆಂಬರ್ 09ರಂದು ಚಂಪಾಪುಷ್ಠಿ ಮಹಾರಥೋತ್ಸವ ನಡೆಯಲಿದೆ. ಆದ್ರೆ, ಕೋವಿಡ್ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ರದ್ದು ಮಾಡಿ ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಜಿಲ್ಲಾಡಳಿತದ ಸೂಚನೆಯಂತೆ ನಿರ್ಣಯ ಕೈಗೊಂಡಿದೆ.

ಚಂಪಾ ಷಷ್ಠಿಯ ವಿಶೇಷತೆ : ಶಿವ , ಸುಬ್ರಮಣ್ಯರ ಆರಾಧಾನ ದಿನ

 ಚಂಪಾಷಷ್ಠಿ ಮಹೋತ್ಸವದ ಚೌತಿ, ಪಂಚಮಿ, ಷಷ್ಠಿ ದಿನಗಳಂದು ಶ್ರೀ ದೇವಳದ ಹೊರಾಂಗಣದಲ್ಲಿ ಭಕ್ತಾಧಿಗಳು ಸ್ವಯಂ ಆಗಿ ನಡೆಸುವ ಎಡೆಸ್ನಾನ ನಡೆಸಲು ಈ ಬಾರಿಯು ಅವಕಾಶ ನೀಡಲಾಗಿಲ್ಲ. ಕೋವಿಡ್ ಹಿನ್ನಲೆಯಲ್ಲಿ ಕಳೆದ ವರ್ಷವೂ ಎಡೆಸ್ನಾನ ಸೇವೆಯನ್ನು ರದ್ದು ಮಾಡಲಾಗಿತ್ತು.  ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

2020ರಲ್ಲೂ ಸಹ ಕೊರೋನಾ ಕಾರಣದಿಂದ ಎಡೆಸ್ನಾನ ಸೇವೆಗೆ ಅವಕಾಶ ನೀಡಿರಲಿಲ್ಲ. ಇದೀಗ ಈ ಬಾರಿಯೂ ಕೊರೋನಾ ವೈರಸ್ ರೂಪಾಂತರಿ ಎಮಿಕ್ರಾನ್ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಡೆಸ್ನಾನಕ್ಕೆ ಅವಕಾಶ ಕೊಡದಂತೆ ದೇವಾಸ್ಥಾನ ಸಮಿತಿಗೆ ಸೂಚನೆ ನೀಡಿದೆ. ಅದರಂತೆ ದೇವಸ್ಥಾನ ಮಂಡಳಿ ಚಂಪಾಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳು ನಡೆಸುವ ಎಡೆಸ್ನಾನವನ್ನು ರದ್ದು ಮಾಡುವ ತೀರ್ಮಾನ ತೆಗೆದುಕೊಂಡಿದೆ.

2019ರಲ್ಲಿ 314 ಮಂದಿ ಎಡೆಸ್ನಾನ 
ಪುಣ್ಯ ಕ್ಷೇತ್ರದ ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಷಷ್ಠಿ ವೇಳೆ 314 ಮಂದಿ ಎಡೆಸ್ನಾನ ಸೇವೆಗೈದಿದ್ದರು.

ಗೋವು ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಎಡೆಸ್ನಾನ ಹರಕೆ ಸಲ್ಲಿಸಿದ್ದರು.  ಚೌತಿ ದಿನ 100 ಭಕ್ತರು, ಪಂಚಮಿ ದಿನ 399 ಮಂದಿ ಹಾಗೂ ಷಷ್ಠಿಯಂದು 314 ಭಕ್ತರು ಈ ಸೇವೆ ನೆರವೇರಿಸಿದ್ದರು.

ಎಡೆಸ್ನಾನ-ಮಡೆಸ್ನಾನದಲ್ಲಿ ಜಾತಿ ಪ್ರಸ್ತಾಪದಿಂದ ಈ ಹಿಂದೆ ಭಾರೀ ವಿರೋಧ ವ್ಯಕ್ತವಾಗಿದ್ದವು. ತಿನ್ನುವ ಅನ್ನದ ಮೇಲೆ ಉರುಳಾಡಿ ಅದನ್ನು ವ್ಯರ್ಥ ಮಾಡುವುದು ಸರಿಯಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇದರಿಂದ ಉಡುಪಿ ಕೃಷ್ಣಮಠದಲ್ಲಿ ನಡೆಯುತ್ತಿದ್ದ ಎಡೆಸ್ನಾನ-ಮಡೆಸ್ನಾನವನ್ನು ನಿಷೇಧಿಸಲಾಗಿದೆ.

ಚಂಪಾ ಷಷ್ಠಿಯ ವಿಶೇಷತೆ : ಶಿವ , ಸುಬ್ರಮಣ್ಯರ ಆರಾಧಾನ ದಿನ
ಚಂಪಾ ಷಷ್ಠಿ ಇದು ಶಿವ ಹಾಗೂ ಸುಬ್ರಮಣ್ಯನನ್ನು ಪೂಜಿಸುವ ಉತ್ಸವ . ಈ ಉತ್ಸವ ಆರು ದಿನಗಳ ಕಾಲ ನಡೆಯುತ್ತದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಶಿವನು ಖಂಡೋಬ ರೂಪದಲ್ಲಿ ನೆಲೆಸಿದ್ದು ಚಂಪಾ ಷಷ್ಠಿಯಂದು ಈ ಭಾಗಗಳಲ್ಲಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಈ ಉತ್ಸವ ಮಾರ್ಗಶಿರ ಮಾಸದ ಶುಕ್ಲಪಕ್ಷದಂದು ನಡೆಯುತ್ತದೆ. ಕರ್ನಾಟಕದ ದಕ್ಷಿಣ ಭಾಗದಲ್ಲಿ ಸುಬ್ರಮಣ್ಯನನ್ನು ಈ ದಿನ ಆರಾಧಿಸುತ್ತಾರೆ. ಈ ಹಬ್ಬದ ಆಚರಣೆಯ ಮುಖ್ಯ ಉದ್ದೇಶ ಸಂತೋಷ, ನೆಮ್ಮದಿ , ಸುಖ, ಶಾಂತಿ ಆರೋಗ್ಯ , ಧನ್ಯಾತ್ಮಕ ಭಾವನೆಗಳು ಮನದಲ್ಲಿ ಉಂಟುಮಾಡಲಿವೆ ಎಂದು ಹೇಳುತ್ತಾರೆ. 

Follow Us:
Download App:
  • android
  • ios