ಭಕ್ತಾದಿಗಳೇ ಗಮನಿಸಿ.. ಶೃಂಗೇರಿಯ ಶಾರದಾ ಪೀಠದಲ್ಲಿ ಇನ್ಮುಂದೆ ವಸ್ತ್ರ ಸಂಹಿತೆ ಕಡ್ಡಾಯ: ಆಗಸ್ಟ್ 15ರಿಂದ ಜಾರಿ
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸದ್ದಿಲ್ಲದೆ ವಸ್ತ್ರ ಸಂಹಿತೆಯನ್ನು ತರುವ ನಿಟ್ಟಿನಲ್ಲಿ ಶೃಂಗೇರಿ ದೇವಸ್ಥಾನದ ಆಡಳಿತ ಮಂಡಳಿ ಮಹತ್ವದ ತೀರ್ಮಾನ ಕೈಗೊಂಡಿದೆ.
ಚಿಕ್ಕಮಗಳೂರು (ಜು.19): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸದ್ದಿಲ್ಲದೆ ವಸ್ತ್ರ ಸಂಹಿತೆಯನ್ನು ತರುವ ನಿಟ್ಟಿನಲ್ಲಿ ಶೃಂಗೇರಿ ದೇವಸ್ಥಾನದ ಆಡಳಿತ ಮಂಡಳಿ ಮಹತ್ವದ ತೀರ್ಮಾನ ಕೈಗೊಂಡಿದೆ. ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿರುವ ಶ್ರೀ ಶಾರದಾಮ್ಮನವರ ದರ್ಶನಕ್ಕಾಗಿ ಹಾಗೂ ಶ್ರೀಗಳ ಪಾದಪೂಜೆಗೆ ಬರುವ ಭಕ್ತಾದಿಗಳು ಭಾರತೀಯ ಸಾಂಪ್ರದಾಯಿಕ ಉಡುಗೆ ಧರಿಸಿ ಬರಲು ಆಡಳಿತಾಧಿಕಾರಿಗಳು ವಿನಂತಿಸಿದ್ದಾರೆ.
ಪುರುಷರು ಧೋತಿ & ಶಲ್ಯ ಮತ್ತು ಉತ್ತರೀಯ ಧರಿಸಬೇಕು. ಹಾಗೂ ಮಹಿಳೆಯರು ಸೀರೆ-ರವಿಕೆ, ಸಲ್ದಾರ್ ಜೊತೆಗೆ ದುಪ್ಪಟ ಅಥವಾ ಲಂಗ ದಾವಣಿ ತೊಟ್ಟು ಬರಬೇಕು ಎಂದು ಶೃಂಗೇರಿಯ ಶಾರದಾ ಪೀಠದ ಆಡಳಿತಾಧಿಕಾರಿಗಳು ಪ್ರಕಟಣೆಯನ್ನು ಹೊರಡಿಸಿದ್ದಾರೆ. ಯಾರಾದರೂ ಈ ನಿಯಮವನ್ನು ಉಲಂಘಿಸಿ ಭಾರತೀಯ ಸಾಂಪ್ರದಾಯಿಕವಲ್ಲದ ಉಡುಗೆಯನ್ನು ತೊಟ್ಟು ಬಂದವರಿಗೆ ಅರ್ಧಮಂಟಪದ ಒಳಗೆ ಪ್ರವೇಶವಿರುವುದಿಲ್ಲ. ಹೊರಗಿನ ಪ್ರಾಕಾರದಿಂದಲೇ ದೇವರ ದರ್ಶನವನ್ನು ಪಡೆಯಬೇಕಾಗುತ್ತದೆ ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ದೇವೀರಮ್ಮನ ದೇಗುಲಕ್ಕೆ ಡ್ರೆಸ್ ಕೋಡ್: ಹೆಣ್ಣು ಮಕ್ಕಳು ಸ್ಕರ್ಚ್, ಮಿಡಿ, ಸ್ಲೀವ್ ಲೆಸ್ ಡ್ರೆಸ್, ಪ್ಯಾಂಟ್, ಸಾಕ್ಸ್ ಹಾಕಿ ಬಂದ್ರೆ ದೇವಸ್ಥಾನದೊಳಗೆ ನೋ ಎಂಟ್ರಿ. ಈ ಹೊಸ ರೂಲ್ಸ್ ಜಾರಿಗೆ ಬಂದಿರೋದು ಮುಜರಾಯಿ ಇಲಾಖೆಗೆ ಸೇರಿರುವ ತಾಲೂಕಿನ ಪ್ರಸಿದ್ಧ ಬಿಂಡಿಗ ದೇವೀರಮ್ಮನ ದೇವಾಲಯದಲ್ಲಿ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಇಲ್ಲಿಗೆ ಬರುವ ಭಕ್ತರ ಪೈಕಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಆದರೆ ಅವರಲ್ಲಿ ಹಲವರು ಸ್ಕರ್ಚ್, ಮಿಡಿ, ಸ್ಲೀವ್ ಲೆಸ್ ಡ್ರೆಸ್, ಪ್ಯಾಂಟ್, ಸಾಕ್ಸ್ ಹಾಕಿ ದೇವಾಲಯದ ಒಳಗೆ ಬಂದರೆ ಇತರೆ ಭಕ್ತರಿಗೆ ಇರುಸು-ಮುರುಸಾಗುತ್ತದೆ. ಈ ಕಾರಣಕ್ಕಾಗಿ ದೇವಾಲಯದ ಅಭಿವೃದ್ಧಿ ಮಂಡಳಿ ವಸ್ತ್ರ ಸಂಹಿತೆ ಜಾರಿಗೆ ತರಲು ನಿರ್ಧಾರ ತೆಗೆದುಕೊಂಡಿದೆ.
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಗ್ಗೆ ಶೀಘ್ರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಇತ್ತೀಚಿನ ದಿನಗಳಲ್ಲಿ ಈ ದೇವಾಲಯದ ಬಳಿ ಪ್ರೀ ವೆಡ್ಡಿಂಗ್ ಶೂಟ್ ಮಾಡುವುದು ಸಹ ಹೆಚ್ಚಾಗಿದೆ. ದೇವೀರಮ್ಮ ದೇವಾಲಯ ಗಿರಿಯ ತಪ್ಪಲಿನಲ್ಲಿ ಇರುವುದರಿಂದ ಪ್ರೀ ವೆಡ್ಡಿಂಗ್ ಶೂಟ್‌ಗೆ ಹೆಚ್ಚು ಮಂದಿ ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ದೇವಾಲಯದ ಸುತ್ತಲಿನ ವಾತಾವರಣ ಹಾಳಾಗುತ್ತಿದೆ. ಈ ಕಾರಣಕ್ಕಾಗಿ ಪ್ರೀ ವೆಡ್ಡಿಂಗ್ ಶೂಟ್ ನಿಷೇಧ ಮಾಡಲಾಗಿದೆ. ಇದರ ಜತೆಗೆ ಆವರಣದೊಳಗೆ ಮೊಬೈಲ್ ಫೋನ್ ಬಳಕೆ ಮಾಡುವುದನ್ನು ಕೂಡ ನಿಷೇಧಿಸಲಾಗಿದೆ. ಯಾರೇ ದೇಗುಲಕ್ಕೆ ಬಂದರೂ ಸಾಂಪ್ರಾದಾಯಿಕ ಉಡುಗೆಯಲ್ಲೇ ಬರಬೇಕು ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.