ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಗ್ಗೆ ಶೀಘ್ರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಕುರಿತ ವಿಧೇಯಕದ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ಪೂರ್ಣ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಹೇಳಿದ್ದಾರೆ. 

Quick decision on job reservation for Kannadigas Says CM Siddaramaiah gvd

ವಿಧಾನಸಭೆ (ಜು.19): ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಕುರಿತ ವಿಧೇಯಕದ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ಪೂರ್ಣ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಹೇಳಿದ್ದಾರೆ. ಅಲ್ಲದೆ, ಕರ್ನಾಟಕದಲ್ಲಿ ಯಾವ ತುಘಲಕ್ ಸರ್ಕಾರವೂ ಇಲ್ಲ. ಸಿದ್ದರಾಮಯ್ಯ ಸರ್ಕಾರದ ಆಡಳಿತ ಇರೋದು ಎಂದು ಹೇಳಿದ್ದಾರೆ. ವಿಧಾನಸಭೆಯಲ್ಲಿ ಗುರುವಾರ ಪ್ರತಿಪಕ್ಷ ನಾಯಕ ಆರ್.ಅಶೋಕ್, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಬಗ್ಗೆ ಮುಖ್ಯಮಂತ್ರಿಗಳ 'ಎಕ್ಸ್' ಪೋಸ್ಟ್ ನಲ್ಲಿ ಪದೇ ಪದೇ ಬದಲಾವಣೆ ಮಾಡಲಾಗಿದೆ. 

ನೀವು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದವರು. ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿಲ್ಲ. ಕರ್ನಾಟಕದಲ್ಲಿ ಇರೋದು ಸಿದ್ದರಾಮಯ್ಯ ಸರ್ಕಾರವಾ, ತುಘಲಕ್ ಸರ್ಕಾರವಾ? ಜನರಲ್ಲಿ ಗೊಂದಲ ಉಂಟಾಗಿದೆ. ಈ ವಿಚಾರದಲ್ಲಿ ಒಂದು ಸ್ಪಷ್ಟ ಸಂದೇಶ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಖಾರವಾಗಿಯೇ ಉತ್ತರಿಸಿದ ಸಿಎಂ, ಇಲ್ಲಿ (ರಾಜ್ಯದಲ್ಲಿ ) ಯಾವ ತುಘಲಕ್ ಆಡಳಿತವೂ ಇಲ್ಲ. ಇರುವುದು ಸಿದ್ದರಾಮಯ್ಯ ಸರ್ಕಾರದ ಆಡಳಿತ. ಸೋಮವಾರ ಸಚಿವ ಸಂಪುಟದಲ್ಲಿ ಆ ವಿಚಾರ ಅರ್ಧಂಬರ್ಧ ಚರ್ಚೆ ಆಗಿದೆ. ನಾನು ಮುಂದಿನ ಸಂಪುಟ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸೋಣ ಎಂದಿದ್ದೆ. ಅಷ್ಟರಲ್ಲಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದನ್ನು ಮತ್ತೆ ಮುಂದಿನ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಅನಾಚಾರ ಮಾಡಿ ಅಧಿಕಾರ ಕಳೆದುಕೊಂಡವರು ಬಿಜೆಪಿ, ಎಲ್ಲಾ ಹಗರಣ ಹೊರತೆಗೆಯುವೆ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಸ್ಥಳೀಯರಿಗೆ ಮೀಸಲು ಮಸೂದೆ ನಾಚಿಕೆಗೇಡು: ಕರ್ನಾಟಕದ ಖಾಸಗಿ ಕಂಪೆನಿಗಳಲ್ಲಿ ಸ್ಥಳೀಯರಿಗೆ ಮೀಸಲು ನೀಡುವ ಮಸೂದೆ ಜಾರಿಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿರುವುದಕ್ಕೆ ಫೋನ್ ಪೇ ಸಿಇಓ ಸಮೀರ್‌ನಿಗಮ್, ಆಕ್ಷೇಪ ವ್ಯಕ್ತಪಡಿಸಿದ್ದು, 'ನಾಚಿಕೆಗೇಡು' ಎಂದು ಕರೆದಿದ್ದಾರೆ. ತಮ್ಮ ಪೋಷಕರ ಕಾರಣದಿಂದ ಬಹು ರಾಜ್ಯಗಳಲ್ಲಿ ವಾಸಿಸುವ ಮಕ್ಕಳಿಗೆ ಈ ಕಾನೂನಿನಿಂದ ಅನ್ಯಾಯ ಆಗಲಿದೆ' ಎಂದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿರುವ ಸಮೀರ್, 'ನನ್ನ ತಂದೆ ಭಾರತೀಯ ನೌಕಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ದೇಶದ ಬೇರೆ ಬೇರೆ ಭಾಗದಲ್ಲಿ ಅವರನ್ನು ಕೆಲಸಕ್ಕೆನಿಯೋಜಿಸುತ್ತಿದ್ದರು.ಕರ್ನಾಟಕದಲ್ಲಿ ಬೆಳೆದಿರುವ ಅವರ ಮಕ್ಕಳು ತವರು ನೆಲದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ?' ಎಂದಿದ್ದಾರೆ.

ನಾನು ಬಾಯಿ ಬಿಟ್ಟರೆ ಬಿಜೆಪಿಯ ಸದಸ್ಯರೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳಬೇಕು: ಶಾಸಕ ಪುಟ್ಟಣ್ಣ

ಉದ್ಯೋಗ ಮೀಸಲು ವಿಷಯದಲ್ಲಿ ರಾಜ ಸರ್ಕಾರಕ್ಕೆ ಬೆಂಬಲ: ಕರ್ನಾಟಕದ ಖಾಸಗಿ ಕಂಪೆನಿಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡುವ ಮುಸೂದೆಗೆ ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ಸಾಫ್ಟ್‌ವೇರ್ ದೈತ್ಯ ಇನ್ಫೋಸಿಸ್ ಬೆಂಬಲಿಸಿದೆ. 'ಸರ್ಕಾರ ಯಾವ ಕಾನೂನು, ನಿಯಮವನ್ನು ತರಲಿದೆಯೋ ಅದರ ಪರವಾಗಿ ನಾವು ನಿಲ್ಲಲಿದ್ದೇವೆ' ಎಂದು ಇನ್ಫೋಸಿಸ್‌ನ ಸಿಇಒ ಸಲೀಲ್ ಪಾರೇಖ್ ಹೇಳಿದ್ದಾರೆ. ಗುರುವಾರ ಮಾತನಾಡಿದ ಅವರು, 'ರಾಜ್ಯ ಮತ್ತು ಕೇಂದ್ರ ಸರ್ಕಾರ ಎಲ್ಲ ನಿಯಮಗಳೊಂದಿಗೆ ಕೆಲಸ ಮಾಡಲು ನಾವು ರೂಪಿಸುತ್ತಿದ್ದೇವೆ. ನಾವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಯಾವ ಕಾನೂನು ಮತ್ತು ಮಾರ್ಗಸೂಚಿಗಳನ್ನು ತರುತ್ತಾರೋ ಅದಕ್ಕೆ ನಾವು ಬೆಂಬಲವನ್ನು ಸೂಚಿಸುತ್ತೇವೆ' ಎಂದರು.

Latest Videos
Follow Us:
Download App:
  • android
  • ios