ಶೃಂಗೇರಿ ಬಳಿಕ ಹೊರನಾಡಲ್ಲೂ ಅನ್ನಪೂರ್ಣೇಶ್ವರಿ ದರ್ಶನಕ್ಕೆ ಡ್ರೆಸ್ ಕೋಡ್ ಜಾರಿ
ಶೃಂಗೇರಿ ಶಾರದಾಂಬೆ ದೇಗುಲದ ಬಳಿಕ ಇದೀಗ ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲೂ ಡ್ರೆಸ್ ಕೋಡ್ ಜಾರಿಗೆ ಬಂದಿದೆ. ಕಳೆದ ಒಂದು ತಿಂಗಳ ಹಿಂದೆ ಶೃಂಗೇರಿ ಶಾರದಾಂಬೆ ದೇಗುಲದಲ್ಲೂ ಆಡಳಿತ ಮಂಡಳಿ ಡ್ರೆಸ್ ಕೋಡ್ ಜಾರಿಗೆ ತಂದಿದ್ದರು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಸೆ.19): ಮಲೆನಾಡಿನ ಎರಡು ಪ್ರಮುಖ ಧಾರ್ಮಿಕ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಗೆ ಬಂದಿದೆ.ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಹಾಗೂ ಹೊರನಾಡಿನಲ್ಲಿ ಭಕ್ತರು ಸಾಂಪ್ರದಾಯಿಕ ಉಡುಗೆ ತೊಟ್ಟು ದೇವರ ದರ್ಶನ ಪಡೆಯಬೇಕಾಗಿದೆ.
ಶೃಂಗೇರಿ ಬಳಿಕ ಹೊರನಾಡಲ್ಲೂ ಡ್ರೆಸ್ ಕೋಡ್ ಜಾರಿ: ಶೃಂಗೇರಿ ಶಾರದಾಂಬೆ ದೇಗುಲದ ಬಳಿಕ ಇದೀಗ ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲೂ ಡ್ರೆಸ್ ಕೋಡ್ ಜಾರಿಗೆ ಬಂದಿದೆ. ಕಳೆದ ಒಂದು ತಿಂಗಳ ಹಿಂದೆ ಶೃಂಗೇರಿ ಶಾರದಾಂಬೆ ದೇಗುಲದಲ್ಲೂ ಆಡಳಿತ ಮಂಡಳಿ ಡ್ರೆಸ್ ಕೋಡ್ ಜಾರಿಗೆ ತಂದಿದ್ದರು. ಶೃಂಗೇರಿ ಶಾರದಾಂಬೆ ಹಾಗೂ ಗುರುವತ್ರಯರ ದರ್ಶನಕ್ಕೆ ಬರುವ ಭಕ್ತರು ಸಾಂಪ್ರದಾಯಿಕ ಉಡುಗೆಯ ಶೈಲಿಯಲ್ಲಿ ಬರಬೇಕೆಂದು ಸೂಚನೆ ನೀಡಿದ್ದರು. ಗಂಡು ಮಕ್ಕಳು ಪಂಚೆ, ಶಲ್ಯ ಹಾಗೂ ಶರ್ಟ್ ಧರಿಸಿ ಬಂದರೆ ಹೆಣ್ಣು ಮಕ್ಕಳು ಸೀರೆ, ಚೂಡಿದಾರ ಧರಿಸಿ ಬರಬೇಕೆಂದು ನಮ್ಮ ಸೂಚನೆ ನೀಡಿದ್ದರು. ಇದೀಗ ಜಿಲ್ಲೆಯ ಮತ್ತೊಂದು ಶಕ್ತಿಪೀಠ ಕಳಸ ತಾಲೂಕಿನ ಆದಿಶಕ್ತ್ಯಾತ್ಮಕ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೂ ಆಡಳಿತ ಮಂಡಳಿಡ್ರೆಸ್ ಕೋಡ್ ಜಾರಿಗೆ ತಂದಿದೆ.
ಹಿಂದೂ ಮಹಾಸಭಾ ಗಣಪತಿ ವಿಸರ್ಜನ ಮಹೋತ್ಸವ: ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ ಯುವಜನತೆ
ಪುರುಷ, ಹೆಣ್ಣು ಮಕ್ಕಳಿಗೆ ಯಾವ ಡ್ರೆಸ್: ಗಂಡು ಮಕ್ಕಳು ಪಂಚೆ, ಶಲ್ಯ, ಪ್ಯಾಂಟ್ ಹಾಗೂ ಶರ್ಟ್ ಧರಿಸಿಕೊಂಡು ಬಂದರೆ. ಹೆಣ್ಣು ಮಕ್ಕಳು ಸೀರೆ ಹಾಗೂ ಚೂಡಿದಾರ ಧರಿಸಿಯೇ ಅನ್ನಪೂರ್ಣೇಶ್ವರಿ ದರ್ಶನಕ್ಕೆ ಬರಬೇಕೆಂದು ಸೂಚನೆ ನೀಡಿದ್ದಾರೆ. ಸಾಂಪ್ರದಾಯಿಕ ಉಡುಗೆ ತೊಟ್ಟು ಬರದಿದ್ದರೆ ದೇವಸ್ಥಾನದ ಒಳಕ್ಕೆ ಪ್ರವೇಶವಿಲ್ಲ ಎಂದು ಸೂಚನೆ ನೀಡಿದ್ದಾರೆ. ಇದರಿಂದ ಜಿಲ್ಲೆಯ ಎರಡು ಶಕ್ತಿ ದೇವತೆಗಳಾದ ಹೊರನಾಡು ಅನ್ನಪೂರ್ಣೇಶ್ವರಿ ಹಾಗೂ ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ಭಕ್ತರಿಗೆ ಡ್ರೆಸ್ ಕೋಡ್ ಜಾರಿಗೆ ಬಂದಂತಾಗಿದೆ. ಇದರಿಂದ ಇನ್ನು ಮುಂದೆ ದೇವಾಲಯ ಹಾಗೂ ದೇವಾಲಯದ ಆವರಣ ಸಾಂಪ್ರದಾಯಿಕ ಶೈಲಿಯಲ್ಲಿ ರಾರಾಜಿಸಲಿದೆ.