Asianet Suvarna News Asianet Suvarna News

ಚಿಕ್ಕಮಗಳೂರು: ದೇವೀರಮ್ಮನ ದೇಗುಲಕ್ಕೆ ಬರುವ ಭಕ್ತರಿಗೆ ಡ್ರೆಸ್ ಕೋಡ್

ಇತ್ತೀಚೆಗೆ ದೇವಸ್ಥಾನಗಳಲ್ಲಿ ಡ್ರೆಸ್‌ ಕೋಡ್ ಅಳವಡಿಸಬೇಕೆಂಬ ಕೂಗು ಎದ್ದಿರುವ ಬೆನ್ನಲ್ಲೇ ಇದೀಗ ಚಿಕ್ಕಮಗಳೂರು ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಬಿಂಡಿಗ ದೇವೀರಮ್ಮ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಡ್ರೆಸ್ ಕೋಡ್ ಅಳವಡಿಸಲು ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಮುಂದಾಗಿದೆ.

Dress code for devotees visiting Deviramma temple chikkamagaluru rav
Author
First Published Aug 5, 2023, 9:09 AM IST | Last Updated Aug 5, 2023, 9:09 AM IST

ಚಿಕ್ಕಮಗಳೂರು (ಆ.5) : ಇತ್ತೀಚೆಗೆ ದೇವಸ್ಥಾನಗಳಲ್ಲಿ ಡ್ರೆಸ್‌ ಕೋಡ್ ಅಳವಡಿಸಬೇಕೆಂಬ ಕೂಗು ಎದ್ದಿರುವ ಬೆನ್ನಲ್ಲೇ ಇದೀಗ ಚಿಕ್ಕಮಗಳೂರು ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಬಿಂಡಿಗ ದೇವೀರಮ್ಮ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಡ್ರೆಸ್ ಕೋಡ್ ಅಳವಡಿಸಲು ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಮುಂದಾಗಿದೆ.

ಇನ್ನುಮುಂದೆ ಪಾಶ್ಚಾತ್ಯ ಉಡುಪುಗಳು,  ಸ್ಕರ್ಟ್, ಮಿಡಿ, ಸ್ಲೀವ್ ಲೆಸ್ ಡ್ರೆಸ್, ಪ್ಯಾಂಟ್, ಸಾಕ್ಸ್ ಹಾಕಿ ದೇವಾಲಯಕ್ಕೆ ಬರುವಂತಿಲ್ಲ.ಸಾಂಪ್ರಾದಾಯಿಕ ಉಡುಗೆಯಲ್ಲಿ ಆಗಮಿಸಲು ಸೂಚಿಸಲಾಗಿದೆ. ಡ್ರೆಸ್ ಕೋಡ್ ಅಷ್ಟೇ ಅಲ್ಲದೆ ದೇವಾಲಯದ ಆವರಣದೊಳಗೆ ಮೊಬೈಲ್ ಫೋನ್ ಬಳಸುವುದು ನಿಷೇಧಿಸಿದೆ.  

Chikkamagaluru; ಬಿಂಡಿಗ ದೇವೀರಮ್ಮನವರ ದೀಪೋತ್ಸವ, ಭಾರಿ ಪ್ರಮಾಣದ ಭಕ್ತರ ನಿರೀಕ್ಷೆ

ಪ್ರತಿವರ್ಷ ದೀಪಾವಳಿ ಹಬ್ಬದ ವೇಳೆ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಮಕ್ಕಳಿಂದ ಮುದುಕರವರೆಗೂ ಮಧ್ಯರಾತ್ರಿಯಿಂದಲೇ ಪಿರಮಿಡ್ ಆಕಾರದ ಬೆಟ್ಟ ಹತ್ತಿ ಭಕ್ತ ಸಮರ್ಪಿಸುತ್ತಾರೆ. ಇದುವರೆಗೆ ಡ್ರೆಸ್ ಕೋಡ್ ಇಲ್ಲದ್ದರಿಂದ ಪಾಶ್ಯಾತ್ಯ ಉಡುಪುಗಳು ಧರಿಸಿ ಬರುತ್ತಿದ್ದ ಯುವಕ ಯುವತಿಯರು. .ಇನ್ನುಮುಂದೆ ಸಾಂಪ್ರಾದಾಯಿಕ ಉಡುಪುಗಳಿದ್ದರೆ ಮಾತ್ರ  ದರ್ಶನಕ್ಕೆ ಅವಕಾಶ. ಯಾರೇ ಬಂದರೂ ಸಾಂಪ್ರಾದಾಯಿಕ ಉಡುಗೆಯಲ್ಲೇ ಬರಬೇಕು. ದರ್ಶನಕ್ಕೆ ಬಂದು ದೇವಾಲಯದ ಆವರಣದೊಳಗೆ ಪ್ರೀವೆಡ್ಡಿಂಗ್ ಶೂಟ್, ರೀಲ್ಸ್ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ. 

ನರಕ ಚತುರ್ದಶಿಯಂದು ಅಭ್ಯಂಗ ಸ್ನಾನ ಯಾಕೆ? ಅದರ ಮಹತ್ವ ತಿಳಿಯಿರಿ

Latest Videos
Follow Us:
Download App:
  • android
  • ios