ಮುಡಾ ಹಗರಣ: ನಮ್ಮ ತಂದೆ ತಪ್ಪು ಮಾಡಿಲ್ಲ, ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ: ಡಾ ಯತೀಂದ್ರ ಸಿದ್ದರಾಮಯ್ಯ
ಮುಡಾ ಅನುದಾನ ಬಳಕೆ ಮಾಡುವುದರಲ್ಲಿ ಯಾವುದೇ ತಪ್ಪುಗಳು ಆಗಿಲ್ಲ ಮುಡಾ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆ ಮಾತ್ರ ಹಣ ಬಳಕೆಯಾಗಿದೆ ಎಂದು ಎಂಎಲ್ಸಿ ಡಾ ಯತೀಂದ್ರ ತಿಳಿಸಿದರು.
ಮೈಸೂರು (ಸೆ.21): ಮುಡಾ ಅನುದಾನ ಬಳಕೆ ಮಾಡುವುದರಲ್ಲಿ ಯಾವುದೇ ತಪ್ಪುಗಳು ಆಗಿಲ್ಲ ಮುಡಾ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆ ಮಾತ್ರ ಹಣ ಬಳಕೆಯಾಗಿದೆ ಎಂದು ಎಂಎಲ್ಸಿ ಡಾ ಯತೀಂದ್ರ ತಿಳಿಸಿದರು.
ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಯೊಂದಿಗೆ ಮಾತನಾಡಿದ ಅವರು, ಮುಡಾ ಇರುವುದೇ ಜನರ ಒಳಿತಿಗಾಗಿ, ಜನರಿಗಾಗಿ ಹಣ ಬಳಸಿರುವುದರಲ್ಲಿ ತಪ್ಪೇನಿದೆ? ಎಲ್ಲದಕ್ಕೂ ಸುಖಾಸುಮ್ಮನೆ ಆರೋಪ ಮಾಡುತ್ತಾ ಹೋದರೆ ಹೇಗೆ ಹೇಳಿ ಎಂದರು.
ಶಿಕ್ಷಣಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು ಹೆಚ್ಚಿನ ಅನುದಾನ ನೀಡಬೇಕು: ಯತೀಂದ್ರ ಸಿದ್ದರಾಮಯ್ಯ
ನಮ್ಮ ತಂದೆಯ ಮೇಲೆ ಮಾಡುತ್ತಿರುವ ಎಲ್ಲ ಆರೋಪಗಳು ಬೋಗಸ್. ಸರ್ಕಾರದ ವಿರುದ್ಧ ಮಾತನಾಡಲು ಯಾರಿಗೂ ಯಾವ ವಿಚಾರಗಳು ಸಿಗುತ್ತಿಲ್ಲ. ಹೀಗಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇಡೀ ವಿಶ್ವದಲ್ಲಿ ಜನರ ಖಾತೆಗಳಿಗೆ ಹಣ ಹಾಕುತ್ತಿರುವ ಏಕೈಕ ಸರ್ಕಾರ ನಮ್ಮದು. ಇಂತಹ ಯೋಜನೆಗಳನ್ನು ಸಹಿಸಿಕೊಳ್ಳಲು ಆಗದೆ ವಿನಾಕಾರಣ ನಮ್ಮ ತಂದೆಯವರ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ನಮ್ಮ ತಂದೆ ತಪ್ಪು ಮಾಡಿಲ್ಲ ಎಂದು ನಮ್ಮ ತಾಯಿಗೂ ಗೊತ್ತು: ಯತೀಂದ್ರ ಸಿದ್ದರಾಮಯ್ಯ
ಮುಡಾ ವಿಚಾರದಲ್ಲಿ ತಪ್ಪು ಇಲ್ಲದಿರುವಾಗ ನಮ್ಮ ತಂದೆಯವರು ಯಾಕೆ ರಾಜೀನಾಮೆ ಕೊಡಬೇಕು? ಹೀಗೆ ಸಿಕ್ಕ ಸಿಕ್ಕ ಆರೋಪಗಳಿಗೆಲ್ಲ ರಾಜೀನಾಮೆ ಕೊಡುತ್ತಾ ಹೋದರೆ ಅದರ ಅರ್ಥ ಇದ್ಯಾ? ಎಂದು ಪ್ರಶ್ನಿಸಿದರು ಇದೇ ವೇಳೆ ಗುತ್ತಿಗೆದಾರರಿಗೆ ಬೆದರಿಕೆ, ಜಾತಿ ನಿಂದನೆ, ಮಹಿಳಾ ನಿಂದನೆ ಆರೋಪದಲ್ಲಿ ಬಂಧಿತನಾಗಿರುವ ಬಿಜೆಪಿ ಶಾಸಕ ಮುನಿರತ್ನ ಕುರಿತು ಕೇಳಿದ ಪ್ರಶ್ನೆಗೆ. ಅವರ ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ ಎನ್ನುವ ಮೂಲಕ ಪ್ರತಿಕ್ರಿಯಿಸಲು ನಿರಾಕರಿಸಿದರು.