Asianet Suvarna News Asianet Suvarna News

ನಮ್ಮ ತಂದೆ ತಪ್ಪು ಮಾಡಿಲ್ಲ ಎಂದು ನಮ್ಮ ತಾಯಿಗೂ ಗೊತ್ತು: ಯತೀಂದ್ರ ಸಿದ್ದರಾಮಯ್ಯ

ನನ್ನ ತಾಯಿ ಯಾವತ್ತೂ ಸಾರ್ವಜನಿಕ ಜೀವನಕ್ಕೆ ಪ್ರವೇಶ ಮಾಡಿದವರಲ್ಲ. ಈಗ ವಿನಾಕಾರಣ ಅವರ ಹೆಸರನ್ನು ಎಳೆದು ತರಲಾಗುತ್ತಿದೆ. ಇದರಿಂದ ತಾಯಿಗೆ ಮೊದಲು ಬೇಸರವಾಗಿದ್ದು ಸತ್ಯ: ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ

congress mlc Yathindra Siddaramaiah react to cm Siddaramaiah's muda scam grg
Author
First Published Aug 20, 2024, 6:45 AM IST | Last Updated Aug 20, 2024, 6:45 AM IST

ಮೈಸೂರು(ಆ.20): ನನ್ನ ತಂದೆ ಮಾಡಿರುವುದರಲ್ಲಿ ತಪ್ಪಿಲ್ಲ ಎಂಬುದು ನನ್ನ ತಾಯಿಗೂ ಗೊತ್ತಿದೆ. ಆದರೂ, ತಮ್ಮ ವಿಚಾರದಲ್ಲಿ ಇವರ ಮೇಲೆ ಆರೋಪ ಬರುತ್ತಿದೆಯಲ್ಲಾ ಎಂಬ ಬೇಸರವೂ ಇದೆ. ಏನೇ ಇರಲಿ, ಕಾನೂನು ಹೋರಾಟದಲ್ಲಿ ನಮಗೆ ಜಯ ಸಿಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, ನನ್ನ ತಾಯಿ ಯಾವತ್ತೂ ಸಾರ್ವಜನಿಕ ಜೀವನಕ್ಕೆ ಪ್ರವೇಶ ಮಾಡಿದವರಲ್ಲ. ಈಗ ವಿನಾಕಾರಣ ಅವರ ಹೆಸರನ್ನು ಎಳೆದು ತರಲಾಗುತ್ತಿದೆ. ಇದರಿಂದ ತಾಯಿಗೆ ಮೊದಲು ಬೇಸರವಾಗಿದ್ದು ಸತ್ಯ. ಜನರಿಂದ ಆಯ್ಕೆಯಾದ ಸರ್ಕಾರವನ್ನು ಅಸ್ಥಿರಗೊಳಿಸಿ ಪ್ರಜಾಪ್ರಭುತ್ವ ನಾಶಪಡಿಸಲು ಬಿಜೆಪಿ ಹಾಗೂ ಜೆಡಿಎಸ್ ಮುಂದಾಗಿವೆ. ಕಾನೂನು ಬಾಹಿರ ಮತ್ತು ಸಂವಿಧಾನಕ್ಕೆ ವಿರೋಧವಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದರಿಂದ ಸಿದ್ಧರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದರು.

ಸಿಎಂ ಸಿದ್ದರಾಮಯ್ಯನವರೇ ಹಠಮಾರಿತನ ಬಿಟ್ಟು ರಾಜೀನಾಮೆ ನೀಡಿ: ಎಚ್.ವಿಶ್ವನಾಥ್

ಇದರ ವಿರುದ್ಧ ನಾವು ಕಾನೂನು ಮೂಲಕವೇ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

Latest Videos
Follow Us:
Download App:
  • android
  • ios