Asianet Suvarna News Asianet Suvarna News

ಡಿಜಿಟಲ್ ಕ್ರಾಂತಿಗೆ ಹೊಸ ಮುನ್ನುಡಿ ಬರೆದ ಸಾರ್ವಜನಿಕ ಗ್ರಂಥಾಲಯ

ನಮ್ಮ ಕರ್ನಾಟಕ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ ಅತೀ ಕಡಿಮೆ ಅವಧಿಯಲ್ಲಿ ಸುಮಾರು 3.50 ಕೋಟಿ ಜನ ಓದುಗರು ನೋಂದಣಿಯಾಗಿ ದಾಖಲೆ ನಿರ್ಮಿಸಿ ಡಿಜಿಟಲ್ ಕ್ರಾಂತಿಗೆ ಹೊಸ ಮುನ್ನುಡಿ ಬರೆದಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್‌ಕುಮಾರ ಹೊಸಮನಿ((Dr satish kumar hosamani)) ಹೇಳಿದರು.

Dr Satish Kumar spoke at the 29th International Cultural Festival  Philippines rav
Author
First Published Jul 4, 2023, 12:50 PM IST

ಬೆಳಗಾವಿ (ಜು.4) : ನಮ್ಮ ಕರ್ನಾಟಕ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ ಅತೀ ಕಡಿಮೆ ಅವಧಿಯಲ್ಲಿ ಸುಮಾರು 3.50 ಕೋಟಿ ಜನ ಓದುಗರು ನೋಂದಣಿಯಾಗಿ ದಾಖಲೆ ನಿರ್ಮಿಸಿ ಡಿಜಿಟಲ್ ಕ್ರಾಂತಿಗೆ ಹೊಸ ಮುನ್ನುಡಿ ಬರೆದಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್‌ಕುಮಾರ ಹೊಸಮನಿ((Dr satish kumar hosamani)) ಹೇಳಿದರು.

ಫಿಲಿಫೈನ್ಸ್‌ನ ಬರ್ಜ್ಯಾಯ್ ಬ್ಯಾಂಕ್ವೆಟ್ ಹಾಲ್, ಮಕಾಟಿ ಮನಿಲಾದಲ್ಲಿ ನಡೆದ 39ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮಾರಂಭದಲ್ಲಿ ಮಾತನಾಡಿದ ಅವರು, ಡಿಜಿಟಲ್ ಯುಗದಲ್ಲಿ ನಮ್ಮ ಕರ್ನಾಟಕ ಸಾರ್ವಜನಿಕ ಗ್ರಂಥಾಲಯಗಳು ಸಹ ಡಿಜಿಟಲ್‌ಮಯವಾಗಿವೆ. ಸುಮಾರು ಒಂದು ಕೋಟಿಗೂ ಹೆಚ್ಚಿನ ಡಿಜಿಟಲ್ ಪುಸ್ತಕಗಳು ಮತ್ತು ಇತರೆ ವಿಷಯ ವಸ್ತುಗಳು ಡಿಜಿಟಲ್ ಸಾರ್ವಜನಿಕ ಪೋರ್ಟಲ್‌ನಲ್ಲಿ ಲಭ್ಯವಿವೆ. ಪ್ರಪಂಚದ ಯಾವುದೇ ಮೂಲೆಯ ಓದುಗರು ನೋಂದಣಿಯಾಗಿ ಇದರ ಉಪಯೋಗ ಪಡೆಯಬಹುದು ಎಂದು ವಿವರಿಸಿ ಕವಿಗೋಷ್ಠಿಯಲ್ಲಿ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯದ ಬಗ್ಗೆ ಅವರೇ ರಚಿಸಿದ ಕವನ ವಾಚನ ಮಾಡಿದರು.

Digital Library: ಡಿಜಿಟಲ್‌ ಗ್ರಂಥ ಗಾರುಡಿಗ ಡಾ.ಸತೀಶಕುಮಾರ್‌

 ಕಾರ್ಯಕ್ರಮದಲ್ಲಿ ಡಾ.ನಾಗರಾಜು.ವಿ, ಶಂಕರೇಗೌಡ, ಡಾ.ಕೆ.ಬಿ.ನಾಗೂರ, ಕೆ.ಪಿ.ಮಂಜುನಾಥ ಸಾಗರ ಮತ್ತು ವಿಶೇಷ ಆಹ್ವಾನಿತರಾಗಿ ಶಿವಪುತ್ರ ಭಾವಿ, ಗೋನಸ್ವಾಮಿ ಮುಂತಾದವರು ಉಪಸ್ಥಿತರಿದ್ದರು. ಕವಿಗೋಷ್ಠಿಯ ನಂತರ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳು ಜರುಗಿದವು.

ಡಾ.ಸತೀಶ್ ಕುಮಾರ್‌ಗೆ ಇಂಡೋ ಫಿಲಿಫೈನ್ಸ್ ಅಚಿವರ್ಸ್ ಪ್ರಶಸ್ತಿ(Indo Philippines Achievers Award) ಗೌರವ
ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ(Digital Public Library) ಕ್ಷೇತ್ರದಲ್ಲಿ ಅವರ ಅಮೋಘ ಸಾಧನೆಯನ್ನು ಪರಿಗಣಿಸಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್‌ಕುಮಾರ್ ಹೊಸಮನಿ ಅವರಿಗೆ ಪ್ರತಿಷ್ಠಿತ ಇಂಡೋ ಫಿಲಿಫೈನ್ಸ್ ಅಚಿವರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Parenting Tips : ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ರೂಢಿಸಲು ಹೀಗ್ಮಾಡಿ.


ರಾಜ್ಯದಲ್ಲಿನ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯವನ್ನು ಕೇಂದ್ರ ಸರ್ಕಾರ ಗುರುತಿಸಿ, ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ ಸೇವೆಯನ್ನು ಇತರೆ ರಾಜ್ಯಗಳಲ್ಲಿ ಯಾವ ರೀತಿ ಪರಿಣಾಮಕಾರಿಯಾಗಿ ಬಳಸಬಹುದು ಎಂಬುವುದರ ಬಗ್ಗೆ ಮಾಹಿತಿ ಪಡೆದಿದ್ದು, ಎಲ್ಲ ರಾಜ್ಯಗಳು ಇದೇ ಮಾದರಿಯಾಗಿ ಬಳಸಲು ತಿಳಿಸಿದ್ದಾರೆ.

ಡಾ.ಸತೀಶ್ ಕುಮಾರ ಹೊಸಮನಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರು.

Follow Us:
Download App:
  • android
  • ios