Digital Library: ಡಿಜಿಟಲ್ ಗ್ರಂಥ ಗಾರುಡಿಗ ಡಾ.ಸತೀಶಕುಮಾರ್
ಡಿಜಿಟಲ್ ಗ್ರಂಥಾಲಯದ ಪಿತಾಮಹರೆಂದೇ ಹೆಸರುವಾಸಿ ಆಗಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ ಡಿಜಿಟಲ್ಆ್ಯಪ್ ಮೂಲಕ ಓದುಗರ ಬೆರಳತುದಿಯಲ್ಲಿ ಅಗಣಿತ ಸಾಹಿತ್ಯರಾಶಿಯೇ ಸಿಗುವಂತೆ ಮಾಡಿದ್ದಾರೆ ಅಂತಹ ಮಹಾನಿಯರಿಗೊಂದು ಸಲಾಂ
ಒಂದು ಒಳ್ಳೆಯ ಪುಸ್ತಕ ಒಬ್ಬ ಒಳ್ಳೆಯ ಆಪ್ತಮಿತ್ರ ಇದ್ದಂತೆ ಎಂಬುದು ಪುಸ್ತಕಗಳ ಮಹತ್ವವನ್ನು ಸಾರಿದರೆ, ಇಂಥ ಒಳ್ಳೆಯ ಪುಸ್ತಕಗಳ ಆಗರವೇ ಆಗಿರುವ ಡಿಜಿಟಲ್ ಲೈಬ್ರರಿ ನೂರಾರು ಆಪ್ತಮಿತ್ರರ ಒಕ್ಕೂಟ ಇದ್ದಂತೆ ಎಂಬುದು ಸಮಕಾಲೀನ ಡಿಜಿಟಲ್ ಯುಗಕ್ಕೆ ಸರಿಹೊಂದುವ ವಾಕ್ಯವೆಂದರೆ ತಪ್ಪೇನಿಲ್ಲ. ಇಂದಿನ ಗಡಿಬಿಡಿಯ ಜೀವನದಲ್ಲಿ ಪುಸ್ತಕವನ್ನು ಕೈಯಲ್ಲಿ ಹಿಡಿದು, ಆಪ್ಯಾಯಮಾನವಾಗಿ, ಚಿತ್ತಶಾಂತತೆಯಿಂದ ಓದುವ ತಾಳ್ಮೆ ಹೊಂದಿರುವವರ ಸಂಖ್ಯೆ ವಿರಳ. ಇಂಥದರಲ್ಲಿ ಇಂದಿನ ಜೀವನ ಅವಿಭಾಜ್ಯ ಅಂಗವಾಗಿರುವ ಮೊಬೈಲ್, ಕಂಪ್ಯೂಟರ್‌ನಲ್ಲಿ ಬೇಕೆಂದಾಗ ಬೇಕೆನಿಸಿದ ಪುಸ್ತಕ ಓದುವಂತಾದರೆ... ಹೌದು, ಇಂದು ಈ ಪರಿಕಲ್ಪನೆ ನಿಜವಾಗಿದೆ. ಡಿಜಿಟಲ್ ಗ್ರಂಥಾಲಯದ ಪಿತಾಮಹರೆಂದೇ ಹೆಸರುವಾಸಿ ಆಗಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ ಡಿಜಿಟಲಆ್ಯಪ್ ಮೂಲಕ ಓದುಗರ ಬೆರಳತುದಿಯಲ್ಲಿ ಅಗಣಿತ ಸಾಹಿತ್ಯರಾಶಿಯೇ ಸಿಗುವಂತೆ ಮಾಡಿದ್ದಾರೆ.
ಸಾರ್ವಜನಿಕ ಗ್ರಂಥಾಲಯದ ವೆಬ್‌ಸೈಟ್ ಮೂಲಕ ಡಿಜಿಟಲ್ ಗ್ರಂಥಾಲಯದ ಲಾಭ ಪಡೆಯಬಹುದಾಗಿದ್ದು, ವೆಬ್‌ಸೈಟ್‌ನಲ್ಲಿ ಆರು ವೈಶಿಷ್ಟ್ಯಗಳೊಂದಿಗೆ ಮಾಹಿತಿಯನ್ನು ಅಡಕ ಮಾಡಲಾಗಿದೆ. ಇ-ಪುಸ್ತಕಗಳು ಮತ್ತು ನಿಯತಕಾಲಿಕೆಗಳು, ವಿಡಿಯೋಗಳು, ಶೈಕ್ಷಣಿಕ ವಿಷಯ, ಸಿಮ್ಯುಲೇಷನ್ ಲ್ಯಾಬ…, ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಸಾಮಗ್ರಿಗಳು, ಟೆಕ್ ಕ್ಯಾಂಪ್‌ಗಳು ಮತ್ತು ರಸಪ್ರಶ್ನೆ ಎಂದು ವರ್ಗೀಕರಣ ಮಾಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಮುಚ್ಚಿದ್ದ ಕಾರಣ, ಡಿಜಿಟಲ… ಗ್ರಂಥಾಲಯ ಓದುಗರ ಪಾಲಿಗೆ ವರದಾನವಾಗಿದೆ. ಹಕ್ಕುಸ್ವಾಮ್ಯ ಹೊರತುಪಡಿಸಿದ ಕೃತಿಗಳು ಡಿಜಿಟಲ… ಗ್ರಂಥಾಲಯದಲ್ಲಿ ಲಭ್ಯ ಇವೆ. ಆಸಕ್ತ ಪ್ರಕಾಶಕರು ಮತ್ತು ಲೇಖಕರು ಅನುಮತಿ ಪತ್ರ ನೀಡಿದರೆ ಅವರ ಕೃತಿಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲು ಅವಕಾಶವಿದೆ.
Parenting Tips : ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ರೂಢಿಸಲು ಹೀಗ್ಮಾಡಿ.
ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವೆಬ್‌ಸೈಟ್‌ನ ಡಿಜಿಟಲ್ ಗ್ರಂಥಾಲಯ ವಿಭಾಗ ಇಲ್ಲಿಯವರೆಗೆ ವಿಶ್ವದ 32 ಕೋಟಿಗೂ ಹೆಚ್ಚು ಜನರಿಂದ ಗೂಗಲ… ಸಚ್‌ರ್‍ಗೆ ಒಳಗಾಗಿದ್ದು ಜನರ ಡಿಜಿಟಲ… ಹುಡುಕಾಟದಲ್ಲಿ ವಿಶ್ವದಲ್ಲಿಯೇ ನಂ.1 ಸ್ಥಾನಕ್ಕೇರಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮೆರಿಕನ್ ಸಾರ್ವಜನಿಕ ಗ್ರಂಥಾಲಯ ಇಲಾಖೆ ಗೂಗಲ… ಹುಡುಕಾಟದಲ್ಲಿ ಎರಡನೇ ಸ್ಥಾನದಲ್ಲಿದ್ದು, ಭಾರತದ ನ್ಯಾಷನಲ… ಡಿಜಿಟಲೈಬ್ರರಿ 3ನೇ ಸ್ಥಾನದಲ್ಲಿದೆ.
ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಡಿಜಿಟಲ… ಲೈಬ್ರರಿಯಲ್ಲಿ 4.30 ಲಕ್ಷ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು ಲಭ್ಯ ಇವೆ. 59900 ವಿಶ್ವದ ದಿನಪತ್ರಿಕೆಗಳು ಲಭ್ಯ ವಿದೆ. ಶೈಕ್ಷಣಿಕ ಮತ್ತು ಕಲಿಕೆಗೆ ಅಗತ್ಯವಿರುವ ಎಲ್ಲ ವಿಭಾಗಗಳಿಗೆ ಸಂಬಂಧಿಸಿದ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತಮಿಳು, ತೆಲುಗು ಭಾಷೆಯಲ್ಲಿ ಪಾಠಗಳನ್ನು ಒದಗಿಸಲಾಗಿದೆ. ಕಲೆ ಮತ್ತು ಮಾನವಿಕತೆ, ವ್ಯಕ್ತಿತ್ವ, ಕೌಶಲ್ಯ ಮತ್ತು ಸಾಹಿತ್ಯ ಒಳಗೊಂಡಂತೆ ಸುಮಾರು 5 ಸಾವಿರಕ್ಕೂ ಹೆಚ್ಚು ಕನ್ನಡ ವಿಷಯಗಳಿವೆ. ರಾಜ್ಯ ಸರ್ಕಾರ ಹಾಗೂ ಸಿಬಿಎಸ್ಸಿ 1ರಿಂದ 12ನೇ ತರಗತಿವರೆಗಿನ ಎಲ್ಲ ಪಠ್ಯ ಪುಸ್ತಕಗಳು ಮತ್ತು ವಿಡಿಯೋಗಳು ಲಭ್ಯವಿದೆ. ಕನ್ನಡ ಭಾಷೆಯಲ್ಲಿಯೇ ಸುಮಾರು 600ಕ್ಕೂ ಹೆಚ್ಚು ವಿಡಿಯೊಗಳು ಲಭ್ಯ ಇವೆ. ಈ ಯೋಜನೆಯ ಭಾಗವಾಗಿ ರಾಜ್ಯದ ವಿವಿಧ ಜಿಲ್ಲೆಗಳ 10 ಲಕ್ಷ ಸರ್ಕಾರಿ ಶಾಲೆ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಿಕಾ ಸಾಮಗ್ರಿ ಒದಗಿಸಲಾಗಿದೆ.
ಹೊಸಮನಿಯವರ ಪರಿಶ್ರಮದಿಂದ ಕರ್ನಾಟಕ ಗ್ರಂಥಾಲಯ ಇಲಾಖೆ ಇಡೀ ದೇಶದಲ್ಲೇ ಡಿಜಿಟಲೀಕರಣದಲ್ಲಿ ಮಂಚೂಣಿಯಲ್ಲಿದೆ. ದೇಶದಲ್ಲಿಯೇ ಅತಿ ಹೆಚ್ಚು ಹಾಗೂ ಅತ್ಯುತ್ತಮ ಗ್ರಂಥಾಲಯಗಳನ್ನು ಹೊಂದಿರುವುದು ಕರ್ನಾಟಕ ಮಾತ್ರ. ಪುಸ್ತಕ ಸಂಸ್ಕೃತಿ ಬೆಳೆಸಲು ಬೆಂಗಳೂರಿನಲ್ಲಿ 205ಮತ್ತು ರಾಜ್ಯದಲ್ಲಿ 7000ಕ್ಕೂ ಹೆಚ್ಚು ಗ್ರಂಥಾಲಯಗಳಿದ್ದು, ಇದು ರಾಷ್ಟ್ರೀಯ ದಾಖಲೆಯಾಗಿದೆ. ಡಿಜಿಟಲ… ಗ್ರಂಥಾಲಯಕ್ಕೆ ಸುಮಾರು 3.23 ಕೋಟಿ ಸದಸ್ಯರು ಚಂದಾದಾರರಾಗಿದ್ದಾರೆ. ರಾಜ್ಯದ ಎಲ್ಲ ಗ್ರಾಮೀಣ ಗ್ರಂಥಾಲಯಗಳಿಗೆ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಲಾಗಿದೆ. ರಾಜ್ಯದೆಲ್ಲೆಡೆ ಈಗಾಗಲೇ 372 ಡಿಜಿಟಲ… ಗ್ರಂಥಾಲಯಗಳು ಕಾರ್ಯಾರಂಭ ಮಾಡಿದ್ದು, ಇಡೀ ದೇಶದಲ್ಲಿ ಇದು ಅಭೂತ ಪ್ರಯತ್ನವಾಗಿದೆ.
ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಜಂಟಿ ಕಾರ್ಯದರ್ಶಿಗಳು ಕೂಡ ಕರ್ನಾಟಕ ಡಿಜಿಟಲ್ ಗ್ರಂಥಾಲಯವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಉಳಿದ 30 ರಾಜ್ಯಗಳಿಗೂ ಇದನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿರುವುದು ಶ್ಲಾಘನೀಯ.
2006ರಿಂದ ಇಲ್ಲಿಯವರೆಗೆ ಡಾ.ಸತೀಶಕುಮಾರ್ ಅವರಿಗೆ 123 ಪ್ರಶಸ್ತಿಗಳು ಸಂದಿವೆ. ಕಾಯಕಜ್ಯೋತಿ, ಕರ್ನಾಟಕ ವಿಕಾಸ ರತ್ನ, ಜ್ಞಾನಜ್ಯೋತಿ, ಭಾರತ ವಿಕಾಸ ರತ್ನರಾಷ್ಟ್ರ, ಬುದ್ಧ ಪ್ರಶಸ್ತಿ, ಕರ್ನಾಟಕ ಸರ್ಕಾರ ಪ್ರತಿಷ್ಠಿತ ಉತ್ತಮ ಗ್ರಂಥಪಾಲಕ ಪ್ರಶಸ್ತಿ, ಕುವೆಂಪು ಕರ್ನಾಟಕ ರತ್ನ, ಶ್ರೀಚಾಮುಂಡೇಶ್ವರಿ ಅನುಗ್ರಹ ಪ್ರಶಸ್ತಿ, ಡಾ.ಅಂಬೇಡ್ಕರ್ ಫೆಲೋಶಿಪ್ ಪ್ರಶಸ್ತಿ, ಥಾಯ್ಲೆಂಡ್‌ನಲ್ಲಿ ಅಂತಾರಾಷ್ಟ್ರೀಯ ಅನುಪಮ ವ್ಯಕ್ತಿ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಅಂಕ ಪ್ರಶಸ್ತಿ, ರಾಷ್ಟ್ರೀಯ ರತ್ನ ಪ್ರಶಸ್ತಿ, ಜಗಜ್ಯೋತಿ ಶ್ರೀ ಬಸವೇಶ್ವರ ಸದ್ಭಾವನಾ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ರಾಜೀವಗಾಂಧಿ ಶಿರೋಮಣಿ ಪ್ರಶಸ್ತಿ, ರಾಷ್ಟ್ರೀಯ ಕವಿರತ್ನ ಪ್ರಶಸ್ತಿ, ಸಾಧನಾ ಶ್ರೀ ಪ್ರಶಸ್ತಿ, ರಾಷ್ಟ್ರೀಯ ಭಗವಾನ್ ಬುದ್ಧ ಪ್ರಶಸ್ತಿ, ರಾಷ್ಟ್ರೀಯ ಭೂಷಣರತ್ನ ಪ್ರಶಸ್ತಿ, ಉತ್ತಮ ನಾಗರಿಕ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಡಾ.ಎಪಿಜೆಅಬ್ದುಲ್ ಕಲಾಂ ಅಂತಾರಾಷ್ಟ್ರೀಯ ಪ್ರಶಸ್ತಿ, ಚುಡಾಮಣಿ ದಕ್ಷ ಅಧಿಕಾರಿ ಪ್ರಶಸ್ತಿ, ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ, ಉರಿಲಿಂಗಪೆದ್ದಿ ಪ್ರಶಸ್ತಿ, ಭಾರತ ಜ್ಯೋತಿ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರೀಯ ಬಸವ ವಿಭೂಷಣ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (ಕಲ್ಬುರ್ಗಿ ವಿವಿಯಿಂದ), ಕರುನಾಡು ಕಣ್ಮಣಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಭಾರತಜ್ಯೋತಿರಾಷ್ಟ್ರ ಪ್ರಶಸ್ತಿ, ಕರ್ನಾಟಕ ವಿಕಾಸ ರತ್ನ ರಾಷ್ಟ್ರೀಯ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಮಹಾತ್ಮ ಗಾಂಧೀಜಿ ಪ್ರಶಸ್ತಿ, ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ (ರಾಜ್ಯ ಸರ್ಕಾರದಿಂದ ಕೊಡಲ್ಪಟ್ಟಿರುವುದು), ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ, ಕಾಯಕಯೋಗಿ ಪ್ರಶಸ್ತಿ, ಡಿಜಿಟಲ್ ರತ್ನ ಪ್ರಶಸ್ತಿ, ಕಲ್ಯಾಣ ಕರ್ನಾಟಕ ಪ್ರಶಸ್ತಿ, ಪ್ರೌಡ್ ಇಂಡಿಯನ್ ಪ್ರಶಸ್ತಿ, ಸಾಹಿತ್ಯ ಸಾರಥಿ ಪ್ರಶಸ್ತಿ, ಉತ್ತಮ ಗ್ರಂಥಪಾಲಕ ಪ್ರಶಸ್ತಿ (ಐಎಲ್‌ಎ ಸಂಸ್ಥೆಯಿಂದ), ಅಮೃತಪುತ್ರ ಪ್ರಶಸ್ತಿ, ಕರುನಾಡು ನಕ್ಷತ್ರ ಪ್ರಶಸ್ತಿ, ವಲ್ಡ್‌ರ್ ಬುಕ್ ಆಫ್ ರೆಕಾರ್ಡ್ ಸರ್ಟಿಫಿಕೇಟ್, ಕರ್ನಾಟಕ ಸಾಕ್ಷರತಾರತ್ನ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳನ್ನು ಡಾ.ಸತೀಶಕುಮಾರ್ ಅವರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.