ಮತ್ತೊಮ್ಮೆ ಮೈಸೂರು-ಮಂಡ್ಯದಲ್ಲಿ ದಂಪತಿ ಡಿಸಿಗಳು!
* ಮಂಡ್ಯ, ಮೈಸೂರಿಗೆ ಗಂಡ ಹೆಂಡತಿ ಜಿಲ್ಲಾಧಿಕಾರಿಗಳು
* ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡ ಡಾ.ಬಗಾದಿ ಗೌತಮ್
* ಪತ್ನಿ ಅಶ್ವಥಿ ಹಾಲಿ ಮಂಡ್ಯ ಜಿಲ್ಲಾಧಿಕಾರಿ
ಮೈಸೂರು(ಜೂ.06): ಮೈಸೂರಿನಲ್ಲಿ ಆರಂಭವಾಗಿದ್ದ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ಬಹಿರಂಗ ತಿಕ್ಕಾಟಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ. ಇಬ್ಬರನ್ನೂ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ, ಆ ಸ್ಥಾನಕ್ಕೆ ಬೇರೆ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಆದರೀಗ ಈ ಹೊಸ ಬೆಳವಣಿಗೆಯಿಂದ ಮತ್ತೊಮ್ಮೆ ಮೈಸೂರು- ಮಂಡ್ಯ, ಅಕ್ಕ ಪಕ್ಕದ ಜಿಲ್ಲೆಗಳಿಗೆ ಗಂಡ ಹೆಂಡತಿ ಡಿಸಿಯಾಗಿ ನೇಮಕಗೊಂಡಂತಾಗಿದೆ.
ರೋಹಿಣಿ, ಶಿಲ್ಪಾನಾಗ್ ಇಬ್ಬರೂ ಎತ್ತಂಗಡಿ!
ಹೌದು ಮೈಸೂರು ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರನ್ನಾಗಿ ಸರ್ಕಾರ ನೇಮಕ ಮಾಡಿದೆ. ಈ ಮೂಲಕ ತೆರವಾದ ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಡಾ.ಗೌತಮ್ ಬಗಾದಿ ಅವರನ್ನು ನೇಮಕ ಮಾಡಲಾಗಿದೆ.
ದಾವಣಗೆರೆ: ಐಎಎಸ್ ಜೋಡಿಯ ಪ್ರೇಮ್ ಕಹಾನಿ
ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡ ಡಾ.ಬಗಾದಿ, ಮಂಡ್ಯದ ಹಾಲಿ ಜಿಲ್ಲಾಧಿಕಾರಿ ಅಶ್ವತಿ ಅವರ ಗಂಡ ಎಂಬುವುದು ಉಲ್ಲೇಖನೀಯ. ಈ ಹಿಂದೆ ಶಿಖಾ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಅವರ ಪತಿ ಅಜಯ್ ನಾಗಭೂಷಣ್ ಮಂಡ್ಯ ಜಿಲ್ಲಾಧಿಕಾರಿಯಾಗಿದ್ದರು. ಸದದ್ಯ ಮತ್ತೊಮ್ಮೆ ಮೈಸೂರು ಹಾಗೂ ಮಂಡ್ಯ ಜಿಲ್ಲೆಗೆ ದಂಪತಿ ಡಿಸಿಯಾಗಿರುವುದು ವಿಶೇಷ.
ಐಎಎಸ್ ಜೋಡಿಗೆ ಮ್ಯಾರೇಜ್ ಗಿಫ್ಟ್ ಕೊಟ್ಟ ಸರ್ಕಾರ!
ಆಂಧ್ರ ಮೂಲದ ಡಾ.ಗೌತಮ್ ಬಗಾದಿಯವರು ಕೇರಳ ಮೂಲದ ಅಶ್ವಥಿಯವರನ್ನು 2019 ರ ಫೆಬ್ರವರಿ 14ರಂದು ಮದುವೆಯಾಗಿದ್ದರು. ನಾಲ್ಕು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಪ್ರೇಮಿಗಳ ದಿನದಂದೇ ಮದುವೆಯಾಗಿ ಸದ್ದು ಮಾಡಿತ್ತು. ನೆರೆ ರಾಜ್ಯಗಳ ಈ ಜೋಡಿ ಕರ್ನಾಟಕದಲ್ಲಿ ನಾಗರಿಕ ಸೇವೆ ಮಾಡುತ್ತಿದ್ದು, ಇಲ್ಲೇ ಅವರ ಪ್ರೀತಿ ಮೊಳಕೆಯೊಡೆದು ಮದುವೆಯಾಗಿದ್ದರು. ಇನ್ನು ಎಸ್.ಅಶ್ವತಿಯವರು ರಾಜ್ಯದಲ್ಲಿ ಶೌಚಾಲಯ ನಿರ್ಮಾಣದ ಮೂಲಕ ಕ್ರಾಂತಿಯನ್ನೇ ಮಾಡಿ ಹೆಸರುವಾಸಿಯಾಗಿದ್ದಾರೆ.