ಕೊಲೆ ಪ್ರಕರಣದಲ್ಲಿ ನಾನು ಕಾನೂನಾತ್ಮಕವಾಗಿ ಜಾಮೀನು ಪಡೆದುಕೊಂಡಿದ್ದೇನೆ. ಅಲ್ಲದೆ ಜಾಮೀನಿಗೆ ವಿಧಿಸಿರುವ ಷರತ್ತುಗಳನ್ನು ಪಾಲನೆ ಮಾಡುತ್ತಿದ್ದೇನೆ. ಬೆಂಗಳೂರಿನ ಹೊರಗೆ ಹೋಗುವ ಮುನ್ನ ನ್ಯಾಯಾಲಯದ ಪೂರ್ವಾನುಮತಿ ಸಹ ಪಡೆದಿದ್ದೇನೆ. ಹೀಗಾಗಿ ಬಂದೂಕು ಪರವಾನಗಿ ರದ್ದುಪಡುವ ಅಗತ್ಯವೇ ಇಲ್ಲವೆಂದು ಉತ್ತರಿಸಿದ  ದರ್ಶನ್

ಬೆಂಗಳೂರು(ಜ.17): ಕೊಲೆ ಪ್ರಕರಣದಲ್ಲಿ ಜಾಮೀನು ನೀಡುವಾಗ ವಿಧಿಸಿರುವ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿಲ್ಲ. ನನ್ನ ಭದ್ರತೆಗೆ ಬಂದೂಕಿನ ಅಗತ್ಯವಿದೆ. ಹೀಗಾಗಿ ತಮಗೆ ನೀಡಿರುವ ಬಂದೂಕು ಪರವಾನಗಿ ರದ್ದು ಪಡಿಸದಂತೆ ನಗರದ ಡಿಸಿಪಿಗೆ (ಆಡಳಿತ) ನಟ ದರ್ಶನ್ ಮನವಿ ಮಾಡಿದ್ದಾರೆ. 

ದರ್ಶನ್ ಅವರಿಗೆ ನೀಡಲಾಗಿದ್ದ ಬಂದೂಕು ಪರವಾನಗಿ ಹಿಂಪಡೆಯುವ ಬಗ್ಗೆ ಡಿಸಿಪಿ ನೋಟಿಸ್ ನೀಡಿದ್ದರು. ಈ ನೋಟಿಸ್‌ಗೆ ದರ್ಶನ್ ಉತ್ತರಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ನಾನು ಕಾನೂನಾತ್ಮಕವಾಗಿ ಜಾಮೀನು ಪಡೆದುಕೊಂಡಿದ್ದೇನೆ. ಅಲ್ಲದೆ ಜಾಮೀನಿಗೆ ವಿಧಿಸಿರುವ ಷರತ್ತುಗಳನ್ನು ಪಾಲನೆ ಮಾಡುತ್ತಿದ್ದೇನೆ. ಬೆಂಗಳೂರಿನ ಹೊರಗೆ ಹೋಗುವ ಮುನ್ನ ನ್ಯಾಯಾಲಯದ ಪೂರ್ವಾನುಮತಿ ಸಹ ಪಡೆದಿದ್ದೇನೆ. ಹೀಗಾಗಿ ಬಂದೂಕು ಪರವಾನಗಿ ರದ್ದುಪಡುವ ಅಗತ್ಯವೇ ಇಲ್ಲವೆಂದು ದರ್ಶನ್ ಉತ್ತರಿಸಿದ್ದಾರೆ. 

ದರ್ಶನ್ ಮನೆಗೆ ಹೋಗಿದ್ದೆವು ಎಂಬುದು ಸುಳ್ಳು: ರೇಣುಕಾಸ್ವಾಮಿ ತಂದೆ ಕಾಶಿನಾಥ ಶಿವನಗೌಡ್ರು

ಇನ್ನು ಬಂದೂಕು ಪರವಾನಗಿ ಸಂಬಂಧ ದರ್ಶನ್ ಅವರು ನೋಟಿಸ್‌ಗೆ ನೀಡಿರುವ ಉತ್ತರವನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳು ಮುಂದಾಗಿದ್ದಾರೆ. 

ಚಾಮುಂಡಿ ಬೆಟ್ಟಕ್ಕೆ ದರ್ಶನ್: 

ಸಂಕ್ರಾಂತಿ ಹಬ್ಬಕ್ಕೆ ಮೈಸೂರಿಗೆ ತೆರಳಿದ್ದ ದರ್ಶನ್, ಗುರುವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಮುಂದಿನ ವಾರ ಕೊಲೆ ಆರೋಪಿ ದರ್ಶನ್‌ಗೆ ಬೆನ್ನು ನೋವಿನ ಶಸ್ತ್ರಚಿಕಿತ್ಸೆ?

ಮೈಸೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ತೀವ್ರ ಬೆನ್ನು ನೋವಿಂದ ಬಳಲುತ್ತಿದ್ದು, ಬುಧವಾರ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದರು. ಮುಂದಿನ ವಾರ ವೈದ್ಯರು ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ನೆರವೇರಿಸುವ ಸಾಧ್ಯತೆ ಇದೆ. 

ಈಗಾಗಲೇ ಶಸ್ತ್ರ ಚಿಕಿತ್ಸೆಗೆ ಒಪ್ಪಿಕೊಂಡಿದ್ದ ದರ್ಶನ್ ಅವರು, ಡಾ. ಅಜಯ್ ಹೆಗ್ಡೆ ಅವರ ಬಳಿ ಚಿಕಿತ್ಸೆಗಾಗಿ ನಟ ಧರ್‌ಜೊತೆ ಆಗಮಿಸಿದರು. ಶಸ್ತ್ರ ಚಿಕಿತ್ಸೆಗೂ ಮುನ್ನ ಪಡೆಯುವ ನರ್ವ್ ರೂಟ್ ಬ್ಲಾಕ್, ಎಪಿಡ್ಯೂರಲ್ ಇಂಜೆಕ್ಷನ್ ಪಡೆದರು. L5 & 51 ಸಮಸ್ಯೆಯಿಂದ ಬಳಲುತ್ತಿರುವ ನಟ ದರ್ಶನ್ ಗೆ ಈ ಇಂಜೆಕ್ಷನ್ ಕೆಲಸ ಮಾಡದಿದ್ದರೆ ಮೂರು ದಿನಗಳ ನಂತರ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವುದಾಗಿ ತಿಳಿಸಿದ್ದಾರೆ. 

ಪಿಸಿಯೋಥೆರಪಿಗೆ ಅಸ್ತು ಅಂದಿದ್ದೇಕೆ, ಮೈಸೂರಿನಲ್ಲಿ ನಟ ದರ್ಶನ ಈಗ ಏನ್ಮಾಡ್ತಿದಾರೆ?

ಈಗಾಗಲೇ ಸ್ಟೆಂಥನಿಂಗ್ ವರ್ಕೌಟ್ ಶುರುಮಾಡುವಂತೆ ವೈದ್ಯರು ಸೂಚಿಸಿದ್ದಾರೆ. ದೇಹದ ಮೇಲ್ಬಾಗಕ್ಕೆ ಮಾತ್ರ ವರ್ಕೌಟ್ ಮಾಡಲು ತಿಳಿಸಿದ್ದಾರೆ. ಈ ಮಧ್ಯೆ, ದರ್ಶನ್ ಅವರು ಕುಟುಂಬ ಸಮೇತ ಬುಧವಾರ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಶ್ರೀಅಹಲ್ಯ ದೇವಿ ಮಾರಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. 

ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರನೊಂದಿಗೆ ಆಗಮಿಸಿದ ದರ್ಶನ್, ಗರ್ಭಗುಡಿ ಬಳಿ ತೆರಳಿ ದೋಷ ನಿವಾರಣಾ ಪೂಜೆ ಸಲ್ಲಿಸಿ ನಂತರ ತಡೆ ಹೊಡೆಸಿರುವುದಾಗಿ ತಿಳಿದು ಬಂದಿದೆ. ಈ ವೇಳೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಅಪಾರ ಪ್ರಮಾಣ ಅಭಿಮಾನಿಗಳು ಇದ್ದರು.