ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ವಿಜಯೋತ್ಸವದ ವೇಳೆ ಕಾಲ್ತುಳಿತ ಘಟನೆಗೆ ಆರ್‌ಸಿಬಿ ಮತ್ತು ಕೆಎಸ್‌ಸಿಎ ಆಡಳಿತ ಮಂಡಳಿ ಬಂಧಿಸಲಾಗಿದೆ. ಈ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಆರ್‌ಸಿಬಿ ಖರೀದಿಗೆ ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸುಳಿವು ಬಿಚ್ಚಿಟ್ಟಿದ್ದಾರೆ.

ಬೆಂಗಳೂರು (ಜೂ.06): ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು 18ನೇ ಐಪಿಎಲ್ ಸೀಸನ್ ಗೆಲುವಿನ ಬೆನ್ನಲ್ಲಿಯೇ ಕಾಲ್ತುಳಿತ ಸಂಭವಿಸಿ ಈ ತಂಡದ ಆಡಳಿತ ಮಂಡಳಿ ಸದಸ್ಯರನ್ನು ಬಂಧಿಸಲಾಗಿದೆ. ಈ ಬಗ್ಗೆ ಸರ್ಕಾರದ ಬಗ್ಗೆ ಆರೋಪ ಮಾಡುತ್ತಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಆರ್‌ಸಿಬಿ ತಂಡವೇನು, ಏನು ಬೇಕಾದರೂ ಖರೀದಿ ಮಾಡುತ್ತಾರೆ ಎಂದು ಹೇಳಿದರು.

ಬೆಂಗಳೂರಿನ ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತು ಸೇರಿ, ಆರ್‌ಸಿಬಿ ಮತ್ತು ಕೆಎಸ್‌ಸಿಎ ಆಡಳಿತ ಮಂಡಳಿಯವರನ್ನು ಬಂಧನ ಮಾಡಲಾಗಿದೆ. ಈ ಬಗ್ಗೆ ಸರ್ಕಾರದ ಕ್ರಮ ವಿರೋಧಿಸಿ ವಿಪಕ್ಷ ನಾಯಕರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ವೇಳೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿದರು. ಈ ವೇಳೆ ಮಾಧ್ಯಮದವರು ಡಿ.ಕೆ. ಶಿವಕುಮಾರ್ ಆರ್‌ಸಿಬಿ ಮಾಲೀಕತ್ವ ಪಡೆಯಲು ಹೊರಟಿದ್ದಾರೆ ಎಂಬ ಮಾತು ಕೇಳಿಬಂದಿದೆ ಎಂದಿದ್ದಕ್ಕೆ, ಅವರು ಏನು ಬೇಕಾದರೂ ಖರೀದಿ ಮಾಡುತ್ತಾರೆ ಬಿಡಿ ಎಂದು ಹೇಳಿದರು.

ಈ ಎಲ್ಲಾ ವಿಷಯ ಕನಕಪುರದ ಡಿಸಿಎಂ ಡಿ.ಕೆ. ಶಿವಕುಮಾರ್ ಪಾಪದ ಫಲ. ಅವರು ಕೋರ್ಟ್‌ನಲ್ಲಿದ್ದರೂ, ನನ್ನ ಕೇಳದೆ ಯಾರು ಕಾರ್ಯಕ್ರಮ ಮಾಡೋದು ಎಂದು, ಕನಕಪುರದಿಂದ ಸೀದಾ ಹೆಚ್‌ಎಎಲ್‌ಗೆ ಓಡಿ ಹೋದರು. ಅವರೆ ಕಪ್ ಗೆದ್ದವರಂತೆ ಮಾಡಿದರು. ವಿರಾಟ್ ಕೊಹ್ಲಿಗೆ ಕನ್ನಡದ ಧ್ವಜ ಕೊಟ್ಟರು. ಇವರು (ಡಿ.ಕೆ. ಶಿವಕುಮಾರ್) ಇಂಪೋರ್ಟೆಡ್ ಶಾಲು ಹಾಕಿದರು. ಆದರೆ, ಕೊಹ್ಲಿ ಪುನಃ ಆ ಕನ್ನಡದ ಶಾಲನ್ನು ಡಿಕೆಗೆ ಹಾಕಿದರು. ಇನ್ನು ವಿಧಾನಸೌಧದ ವೇದಿಕೆಯಲ್ಲಿ ಸೇರಿದ್ದು ಮಂತ್ರಿಗಳ ಮಕ್ಕಳು, ಮೊಮ್ಮಕ್ಕಳು ಅಷ್ಟೇ. ಒಬ್ಬೊಬ್ಬರು ಗ್ಲಾಸ್ ಹಾಕಿಕೊಂಡು ಪೋಸ್ ಕೊಟ್ಟರು. ವೇದಿಕೆಯಲ್ಲಿ ಏಲಕ್ಕಿ ಹಾರ ತಂದಿಲ್ವಾ ಎಂದು ಗೋವಿಂದ ರಾಜ್ ಕೇಳಿದ್ದರು. ಇಲ್ಲ ಸರ್ ಗಂಧದ ಹಾರ ತಂದಿದ್ದೀವಿ ಎಂದರು ಇನ್ನೊಬ್ಬ. ವೇದಿಕೆಯಲ್ಲಿ ಡಿ.ಕೆ.ಶಿವಕುಮಾರ್ ಒಬ್ಬನಿಗೆ ಹೊಡೆದು ಪೊಲೀಸ್ ಕೆಲಸ ಮಾಡಿದರು.

ಇನ್ನು ಮೊದಲ ಕಾಲುತುಳಿತ ಸಾವು 3.10ಕ್ಕೆ ಆಗಿದೆ. ಡಿ.ಕೆ.ಶಿವಕುಮಾರ್ ಮೈದಾನಕ್ಕೆ ಹೋಗಿ ಅಲ್ಲಿ ಕಪ್‌ಗೆ ಮುತ್ತಿಕ್ಕುತ್ತಿದ್ದರು. ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ತಮ್ಮ ಮೊಮ್ಮಗನ ಕರೆದುಕೊಂಡು ಹೋಗಿ, ಜನಾರ್ದನ ಹೊಟೇಲ್‌ಗೆ ದೋಸೆ ಹಲ್ವಾ ಸವಿಯೋಕೆ ಕರೆದುಕೊಂಡು ಹೋಗಿದ್ದರು. ಅಯ್ಯೋ ಸತ್ಯಮೇವ ಜಯತೆ ಅಂತೆ. ನಿಮಗೆ ಮಾನ ಮರ್ಯಾದೆ ಇಲ್ವಾ. ಕೋರ್ಟ್ ಬರೆ ಎಳೆಯಲಿದೆ ಎಂದು ತಾವೇ ಎನೊ ಮಾಡಿದ್ದೀವಿ ಅಂತ ಹೊರಟಿದೆ ಸರ್ಕಾರ ಎಂದು ಕುಮಾರಸ್ವಾಮಿ ಆರೋಪ ಮಾಡಿದರು.

ರಾಜ್ಯ ಕಾರ್ಯದರ್ಶಿ ಗೋವಿಂದ್ ರಾಜ್ ಒಬ್ಬರು ಇದ್ದಾರೆ. ಅವರು ಏನೊ ರಾಜಕೀಯ ಕಾರ್ಯದರ್ಶಿ ಮಾಡಿಕೊಂಡಿದ್ದೀರಿ. ರಾಜ್ಯದಲ್ಲಿ ಸರ್ಕಾರದ ಮರ್ಯಾದೆ ಉಳಿಬೇಕು ನಿಮ್ಮ ಸುತ್ತ ಮುತ್ತ ಇರೊ ಇಂತವರ ಮೊದಲು ಕಿತ್ತು ಬಿಸಾಕಿ. ಹಾಗೆ ಕಾಂಗ್ರೆಸ್ ಹೈಕಮಾಂಡ್ ಇದೆ ಎನ್ನುವುದೇ ಆದರೆ ಮೊದಲು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನನ್ನು ಹೊರಹಾಕಿ. ಕುಮಾರಸ್ವಾಮಿ ಮಾತಾಡಿದರೆ ಅಸೂಯೆ ಎನ್ನುತ್ತಾರೆ. ನಾನು ಕೇಂದ್ರದಲ್ಲಿ ಎರಡು ಖಾತೆ ನೋಡ್ತಾ ಇದ್ದೇನೆ. ಹೆಚ್‌ಎಂಟಿ (Hmt) ಕಾಯಕಲ್ಪ ‌ಮಾಡುತ್ತಿದ್ದೇ‌ನೆ. Hmtಗೆ ಸಪೋರ್ಟ್ ಮಾಡಿದ ಎಂದು ಐಎಫ್‌ಎಸ್ ಆಫೀಸರ್‌ನ ಅಮಾನತು ಮಾಡ್ತೀರಿ. ನೀವು ಏನೆ ಸಮಸ್ಯೆ ಮಾಡಿ ಹೆಚ್‌ಎಂಟಿಗೆ ಕಾಯಕಲ್ಪ‌ ನೀಡೆ ನೀಡುತ್ತೇನೆ. ನಮ್ಮಲ್ಲಿ ಒಳ್ಳೆಯ ಹೊಂದಾಣಿಕೆ ಇದೆ. ಬಿಜೆಪಿ ಹಾಗೂ ಜೆಡಿಎಸ್ ಚೆನ್ನಾಗಿ ಹೊಂದಾಣಿಕೆ ಇದೆ. ನಾವು ಕಾನೂನು ಹೋರಾಟ ಮಾಡುತ್ತೇವೆ. ಇನ್ನೊಂದು ಕಡೆ ಒಟ್ಟಿಗೆ ಹೊರಗೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಇನ್ನು ಗೃಹ ಸಚಿವ ಜಿ.ಪರಮೇಶ್ವರ ಪಾಪ. ಕೀಲು ಕುದುರೆ ಇದ್ದ ಹಾಗೆ. ಕೀಲ್ ಕೊಟ್ಟರೆ ಮಾತ್ರ ಏಳತ್ತಾರೆ ಪಾಪ ಅವರು. ಈ ಘಟನೆಯಲ್ಲಿ ಇಂಟಲಿಜೆನ್ಸ್ ತಪ್ಪಿದೆ ಎಂದು ಒಪ್ಪಿಕೊಂಡರೂ, ಅದರ ಮುಖಸ್ಥರ (ನಿಂಬಾಳ್ಕರ್) ಅಮಾನತು ಮಾಡಿಲ್ಲ. ಕಾರಣ ಅದಕ್ಕೆ ಹೈಕಮಾಂಡ್ ಹೇಳಬೇಕು. ವಿಧಾನಸೌಧಕ್ಕೆ ಕಾರ್ಯಕ್ರಮ ನಡೆಸಲು ಕಾರಣ ಸಿಎಂ ಕಾರ್ಯದರ್ಶಿ ಗೋವಿಂದ ರಾಜ್ ಕಾರಣ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಸಿದರು.