ಬೆಂಗಳೂರು(ಮೇ 28): ಪಕ್ಷಾಂತರ ಕಾಯ್ದೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೊಟ್ಟ ಸಲಹೆಗಳು, ರಾಜ್ಯದಲ್ಲಿ ಆಗುತ್ತಿರುವ ವ್ಯಾಪಕ ಚರ್ಚೆ ಬಗ್ಗೆ ಸಮಿತಿ ರಚನೆ ಆಗಿದೆ. ಅಧಿಕಾರದಾಸೆಗೆ ಬೇರೆ ಪಕ್ಷಕ್ಕೆ ವಲಸೆ ಹೋಗುವುದು ನಡೆಯಬಾರದು ಎಂದು ತಿಳಿಸಿದ್ದೇವೆ ಎಂದು ಮಾಜಿ ಸಚಿವ ಡಿಕ. ಕೆ. ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದು, ಪಕ್ಷಾಂತರ ಕಾಯ್ದೆ ವಿಚಾರದಲ್ಲಿ ರಾಜ್ಯದಲ್ಲಿ ಆಗುತ್ತಿರುವ ವ್ಯಾಪಕ ಚರ್ಚೆ ಬಗ್ಗೆ ಸಮಿತಿ ರಚನೆ ಆಗಿದೆ. ಅದರ ಬಗ್ಗೆ ಅಭಿಪ್ರಾಯ ಪಡೆಯಲು ಸಭೆ ನಡೆಯಿತು. ನಾವೂ ಕೂಡ ಪಕ್ಷದ ಹಿರಿಯರ ಸಭೆ ಕರೆಯುತ್ತೇವೆ ಎಂದು ಹೇಳಿದ್ದಾರೆ.

'ಕಾಂಗ್ರೆಸ್ ಚೆಕ್‌ಗೆ ಸಹಿ ಅಧಿಕಾರ ಡಿಕೆಶಿಗೆ ಇನ್ನೂ ಸಿಕ್ಕಿಲ್ಲ'

ಅವರ ಅಭಿಪ್ರಾಯ ಪಡೆದು 10ನೇ ತಾರೀಖಿನ ಒಳಗೆ ತಿಳಿಸುತ್ತೇವೆ. ಇಂದು ಸಚಿವ ಸಂಪುಟ ಸಭೆ ಇದೆ. ಗ್ರಾಮ ಪಂಚಾಯತಿಗಳಿಗೆ ನಾಮನಿರ್ದೇಶನ ಮಾಡಲು ಹೋಗುತ್ತಿದ್ದಾರೆ. ಆದರೆ ಇದು ನಿಮಗೂ ಒಳ್ಳೆಯದಲ್ಲ, ರಾಜ್ಯಕ್ಕೆ ಒಳ್ಳೆಯದಲ್ಲ. ನೀವು ಹೀಗೆ ಮುಂದುವರಿದರೆ ನಾವು ಹೋರಾಟ ಮಾಡುತ್ತೇವೆ. ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತೇನೆ ಎಂದು ತಿಳಿಸಿದ್ದಾರೆ.