ದಾವಣಗೆರೆ(ಮೇ.28) ಎಲ್ಲದಕ್ಕೂ ನಾನು ಚೆಕ್‌ ಕೊಡ್ತೀನಿ ಕೊಡ್ತೀನಿ ಅಂತ ಜೇಬಿನಲ್ಲಿ ಕೈ ಹಾಕಿಕೊಳ್ಳುವ ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಆದ ಮೇಲಷ್ಟೇ ಚೆಕ್‌ಗೆ ಸಹಿ ಹಾಕೋ ಅಧಿಕಾರ ಬರೋದು ಅನ್ನೋದನ್ನು ಮರೆಯದಿರಲಿ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಟಾಂಗ್‌ ನೀಡಿದರು.

ಇದು ಡಿ.ಕೆ.ಶಿವಕುಮಾರ್‌ರ ಆಡಂಬರ, ಹುಡುಗಾಟಿಕೆ ತೋರಿಸುತ್ತದೆ. ನೀವು ಎಲ್ಲೆಂದರಲ್ಲಿ ಬಂದು ಜೇಬಿನಲ್ಲಿ ಕೈ ಹಾಕಿಕೊಳ್ಳುವುದೇನೂ ಬೇಡ. ಕೊರೋನಾ ವೈರಸ್‌ ನಿಯಂತ್ರಣಕ್ಕೆ ನಮ್ಮ ಸರ್ಕಾರ ಎಲ್ಲ ಅಗತ್ಯವಾದ ಸೂಕ್ತ ಕ್ರಮಗಳನ್ನೂ ಕೈಗೊಂಡಿದೆ ಎಂದು ಅಶೋಕ್‌ ಅವರು ಕೆಪಿಸಿಸಿ ಅಧ್ಯಕ್ಷರ ವರ್ತನೆ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದರು.

ಕಾಂಗ್ರೆಸ್-ಜೆಡಿಎಸ್ ಮತ್ತೆ ದೋಸ್ತಿ: ದೇವೇಗೌಡರ ಮುಂದೆ ಬಂಪರ್ ಆಫರ್...!

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ನೀವು ಕೊಟ್ಟಿದ್ದಂತಹ ಚೆಕ್‌ ಅನ್ನು ನಮ್ಮವರು ಇನ್ನೂ ಸ್ವೀಕರಿಸಿಲ್ಲ. ನೀವು ಇನ್ನೂ ಕೆಪಿಸಿಸಿ ಅಧ್ಯಕ್ಷರಾಗಿಲ್ಲ. ಅಧಿಕಾರವನ್ನೂ ಸ್ವೀಕರಿಸಿಲ್ಲ. ಅಧ್ಯಕ್ಷರಾದ ನಂತರವಷ್ಟೇ ಕೆಪಿಸಿಸಿ ಚೆಕ್‌ಗಳಿಗೆ ಸಹಿ ಹಾಕಲು ನೀವು ಅರ್ಹರಾಗುತ್ತೀರಿ ಎಂದು ಸರ್ಕಾರದ ವಿರುದ್ಧ ಟೀಕಿಸುವ ಡಿ.ಕೆ.ಶಿವಕುಮಾರ್‌ ಅವರಿಗೆ ತಿರುಗೇಟು ನೀಡಿದರು.

ನಿಮ್ಮಗಳ ಟೀಕೆಗಳಿಂದ ಕೊರೋನಾ ವೈರಸ್‌ ಹೋಗುವುದಿಲ್ಲ. ವೈರಸ್‌ ನಿಯಂತ್ರಣಕ್ಕೆ ಒಗ್ಗಟ್ಟಿನಿಂದ ಹೋರಾಡೋಣ. ಕೊರೋನಾ ವೈರಸ್‌ ನಿಯಂತ್ರಿಸಲು, ನಿರ್ಮೂಲನೆಗೆ ಪ್ರತಿಪಕ್ಷವಾಗಿ ಸರ್ಕಾರದೊಂದಿಗೆ ಸಹಕರಿಸಿ ಸಾಕು ಎಂದು ಡಿ.ಕೆ.ಶಿವಕುಮಾರ್‌ಗೆ ಆರ್‌.ಅಶೋಕ ಸಲಹೆ ಹೇಳಿದರು.