ಸೋಲಾರ್‌ ಪಾರ್ಕ್ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖೆ ಯಾಕೆ? ಸಿಬಿಐ ತನಿಖೆಯನ್ನೇ ಮಾಡಿ ಎಂದು ಬೊಮ್ಮಾಯಿ ಸರ್ಕಾರಕ್ಕೆ ಸವಾಲು ಹಾಕಿದ ಡಿಕೆಶಿ 

ನವದೆಹಲಿ(ಅ.08): ತಾವು ಇಂಧನ ಸಚಿವರಾಗಿದ್ದಾಗ ಸ್ಥಾಪನೆಯಾದ ಪಾವಗಡ ಸೋಲಾರ್‌ ಪಾರ್ಕ್ಗೆ ಸಂಬಂಧಿಸಿ ತನಿಖೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾವಗಡ ಸೋಲಾರ್‌ ಪಾರ್ಕ್ ಪ್ರಕರಣದಲ್ಲಿ ನಾನು ತಪ್ಪು ಮಾಡಿದ್ದರೆ ನನ್ನನ್ನು ಗಲ್ಲಿಗೇರಿಸಿ ಎಂದು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಈ ಸಂಬಂಧ ದೆಹಲಿಯಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸೋಲಾರ್‌ ಪಾರ್ಕ್ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖೆ ಯಾಕೆ? ಸಿಬಿಐ ತನಿಖೆಯನ್ನೇ ಮಾಡಿ ಎಂದು ಬೊಮ್ಮಾಯಿ ಸರ್ಕಾರಕ್ಕೆ ಸವಾಲು ಹಾಕಿದರು. ಈ ಸೋಲಾರ್‌ ಪಾರ್ಕ್‌ಗೆ ಮೋದಿ ಸರ್ಕಾರವೇ ಪ್ರಶಂಸಿಸಿ ಪತ್ರ ನೀಡಿದೆ. ಈ ಪಾರ್ಕ್ ದೇಶಕ್ಕೇ ಮಾದರಿ ಎಂದು ಕೇಂದ್ರ ಸರ್ಕಾರವೇ ಹೇಳಿದೆ. ನಾನು ಎಷ್ಟು ಪ್ರಾಮಾಣಿಕನಾಗಿದ್ದೆ, ಇಂಧನ ಇಲಾಖೆಗೆ ಎಷ್ಟು ಸಹಾಯ ಮಾಡಿದ್ದೇನೆ ಅನ್ನುವ ಅರಿವಿದೆ ಎಂದು ಇದೇ ವೇಳೆ ತಿಳಿಸಿದರು.

ಸಿದ್ದರಾಮೋತ್ಸವ ಜೀವಂತವಾಗಿಡಲು ಪ್ರಯತ್ನ: ಶಾಸಕ, ಎಂಎಲ್‌ಸಿ, ಕಾರ್ಯಕರ್ತರಿಗೆ ಸಿದ್ದು ಔತಣ

ಇದೇ ವೇಳೆ, ದೀನದಯಾಳ್‌ ವಸತಿ ಯೋಜನೆ ಅಡಿ ಎಷ್ಟು ಅವ್ಯವಹಾರ ಆಗಿದೆ ಅನ್ನೋದು ಸಿಐಜಿ ವರದಿಯಲ್ಲಿ ಉಲ್ಲೇಖವಾಗಿದೆ. ಅದನ್ನೂ ತನಿಖೆಗೆ ಕೊಡಿ ಎಂದು ಇದೇ ವೇಳೆ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದರು.