Asianet Suvarna News Asianet Suvarna News

Karnataka It Raids: ಆಪ್ತ ಫೈನಾನ್ಶಿರ್​​ಗಳಿಗೆ ಸಂಕಷ್ಟ, ಬಿಜೆಪಿ ವಿರುದ್ಧ ಡಿಕೆಶಿ ಕೆಂಡ!

ಚುನಾವಣೆ ಹೊಸ್ತಿಲಲ್ಲಿ ಡಿಕೆಶಿ ಆಪ್ತ ಫೈನಾನ್ಶಿರ್​​ಗಳಿಗೆ ಸಂಕಷ್ಟ ಎದುರಾಗಿದೆ. ಆಪ್ತರ ಮೇಲಿನ ಐಟಿ ದಾಳಿಗೆ ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

DK Shivakumar angry against BJP about Karnataka It Raids gow
Author
First Published May 6, 2023, 6:52 PM IST

ಬೆಂಗಳೂರು (ಮೇ.6): ಆಪ್ತರ ಮೇಲಿನ ಐಟಿ ದಾಳಿಗೆ ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಡಿಕೆಶಿ ಆಪ್ತ ಫೈನಾನ್ಶಿರ್​​ಗಳಿಗೆ ಸಂಕಷ್ಟ ಎದುರಾಗಿದೆ. ಬೆಂಗಳೂರು, ಮಂಗಳೂರಿನಲ್ಲಿ ಡಿಕೆಶಿ ಆಪ್ತರ ಮೇಲೆ ಐಟಿ ರೇಡ್ ನಡೆದಿದೆ. ನನ್ನನ್ನು ಭೇಟಿ ಮಾಡಿದವರ ಮೇಲೆ ಐಟಿ ದಾಳಿ ನಡೆದಿದೆ. ನಾನು ಫೋನ್ ಮಾಡಿದರ ಮೇಲೆಲ್ಲಾ ಐಟಿ ರೇಡ್ ನಡೆಯುತ್ತಿದೆ. ಐಟಿ ಬಳಸಿಕೊಂಡು ಚುನಾವಣೆ ಗೆಲ್ಲಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದು ಅರಸೀಕೆರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏನು ಮಾಡಿದ್ರು ಮತದಾರ ತೀರ್ಮಾನ ಮಾಡ್ತಾರೆ. ಕಾಂಗ್ರೆಸ್​​ಗೆ 141 ಸ್ಥಾನ, ಬಿಜೆಪಿಗೆ 60 ಸ್ಥಾನ ಬರುತ್ತೆ ಎಂದು ಡಿಕೆಶಿ ಹೇಳಿದ್ದಾರೆ.

ಡಿಕೆಶಿ ಬೆಂಬಲಿಗ ಫೈನಾನ್ಷಿಯರ್​ಗಳ ಮೇಲೆ ಐಟಿ ದಾಳಿ:
ಬೆಂಗಳೂರು , ಮೈಸೂರಿನಲ್ಲಿ ಏಕಕಾಲಕ್ಕೆ ಐಟಿ ರೇಡ್​ ನಡೆದಿದ್ದು, ಡಿಕೆಶಿ ಬೆಂಬಲಿಗ ಫೈನಾನ್ಷಿಯರ್​ಗಳು ಎನ್ನಲಾಗಿದೆ. ಈ ದಾಳಿಯಲ್ಲಿ 15 ಕೋಟಿ ನಗದು, 5 ಕೋಟಿ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ. ಚುನಾವಣಾ ಅಭ್ಯರ್ಥಿಗಳಿಗೆ ನೀಡಲು ಹಣ ಸಂಗ್ರಹಿಸಿದ್ದ ಶಂಕೆ ಮೇಲೆ  ಈ ದಾಳಿ ನಡೆದಿದೆ. ಬೆಂಗಳೂರಿನ ಶಾಂತಿನಗರ, ಆರ್.ಎಂ.ವಿ ಲೇಔಟ್, ಕನ್ನಿಂಗ್ ಹ್ಯಾಮ್ ರಸ್ತೆ, ಸದಾಶಿವನಗರ ಸೇರಿ ಹಲವೆಡೆ ದಾಳಿ ನಡೆದ ಬಗ್ಗೆ ಸುವರ್ಣ ನ್ಯೂಸ್ ಗೆ ಆದಾಯ ತೆರಿಗೆ ಇಲಾಖೆ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಕಲಬುರಗಿಯಲ್ಲಿಯೂ ಐಟಿ ರೇಡ್:
ಇನ್ನು ಮೈಸೂರು, ಬೆಂಗಳೂರಿನಲ್ಲಿ ಐಟಿ ದಾಳಿ ಬೆನ್ನಲ್ಲೆ ಕಲಬುರಗಿಯಲ್ಲಿ ಕೂಡ  ಐಟಿ ದಾಳಿ ನಡೆದಿದೆ. ಕಲಬುರಗಿ ನಗರದ ನೂರ್‌ಬಾಗ್ ಕಾಲೋನಿಯಲ್ಲಿರೋ ರಿಯಲ್ ಎಸ್ಟೇಟ್ ಉದ್ಯಮಿ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಕಳೆದ ಕೆಲ ಗಂಟೆಗಳಿಂದ ಮನೆಯಲ್ಲಿ ತಪಾಸಣೆ ಐಟಿ ಅಧಿಕಾರಿಗಳು ಹುಡುಕಾಡುತ್ತಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ವಾಹೀದ್ ಅಲೀ ಬಾತೆಖಾನಿ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ.

ಕಾಂಗ್ರೆಸಿಗರ ಮೇಲೆ ಐಟಿ ದಾಳಿ, ವಿನಯ ಕುಲಕರ್ಣಿ  ಪತ್ನಿ ಪತ್ರಿಕಾಗೋಷ್ಠಿ
ಬಿಜೆಪಿಯವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಕಾಂಗ್ರೆಸ್ ಮುಖಂಡರುಗಳ ಮೇಲೆ ಐಟಿ ರೇಡ್ ಮಾಡುತ್ತಿದ್ದಾರೆ ಎಂದು ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ  ಪತ್ರಿಕಾಗೋಷ್ಟಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತದಾನಕ್ಕೆ ನಾಲ್ಕು ದಿನ ಇರುವ ಮುನ್ನವೇ ಐಟಿ ರೆಡ್ ನಡೆದಿದೆ. ಕಾಂಗ್ರೆಸ್ ಬ್ಲಾಕ್ ಅದ್ಯಕ್ಷ ಈಶ್ವರ ಶಿವಳ್ಳಿ, ಬ್ಲಾಕ್ ಅದ್ಯಕ್ಷ ಅರವಿಂದ ಏಗನಗೌಡ, ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿ ಪ್ರಶಾಂತ ಕೇಕರೆ,ಪ್ರದೀಫ್ ಗೌಡರ್ ಮೇಲೆ ಐಟಿ ರೇಡ್ ನಡೆದಿದೆ. ಈ ನಾಲ್ವರ ಮೆಲೆ ಬಿಜೆಪಿ ಅವರು  ಷಡ್ಯಂತ್ರದಿಂದ ಐಟಿ ರೇಡ್ ಮಾಡಿಸುತ್ತಿದ್ದಾರೆ. ಈಶ್ವರ ಶಿವಳ್ಳಿ ಅವರಿಗೆ ಮೂವತ್ತು ಘಂಟೆ ಐಟಿ  ಅಧಿಕಾರಿಗಳಿಂದ ಡ್ರಿಲ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಪೈನಾನ್ಷಿಯರ್‌ಗಳ ಮೇಲೆ ಐಟಿ ದಾಳಿ, ಕಂತೆ ಕಂತೆ ನೋಟು ಪತ್ತೆ! ಇವ್ರೆಲ್ಲಾ ಡಿಕೆಶಿ ಆಪ್ತರಾ?

ಬಿಜೆಪಿ ಪಕ್ಷವು  ವಿನಯ ಕುಲಕರ್ಣಿ ಆಪ್ತರ ಮೆಲೆ ಐಟಿ ದಾಳಿ ಮಾಡುತ್ತಿದೆ. ಗ್ರಾಮೀಣ ಕ್ಷೇತ್ರದಲ್ಲಿ ಪ್ರಚಾರದ ಅಬ್ಬದರಲ್ಲಿರುವ ಕಾಂಗ್ರೆಸ್ ಪ್ರಮುಖರ ಮೇಲೆ ದಾಳಿ ನಡೆದಿದ್ದು,  ಈಶ್ವರ ಶಿವಳ್ಳಿ, ಅರವಿಂದ ಏಗನಗೌಡ, ಅವರಿಗೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಯಾಕೆ ಸೇರಿದ್ರಿ ಎಂದು  ಐ ಟಿ ಅಧಿಕಾರಿಗಳು ಪ್ರಶ್ನೆ ಕೇಳಿದ್ದಾರೆಂದು ತಿಳಿಸಿದ್ದಾರೆ.

ಬೆಂಗಳೂರು-ಮೈಸೂರಿನಲ್ಲಿ ಫೈನಾನ್ಸಿಯರ್‌ಗಳ ಮೇಲೆ ಐಟಿ ದಾಳಿ, ಅಭ್ಯರ್ಥಿಗಳಿಗಾಗಿ

 ಐಟಿ ಅಧಿಕಾರಿಗಳು ಬಿಜೆಪಿ ಏಜಂಟರಾಗಿ ಕೆಲಸ ಮಾಡುತ್ತಿದ್ದಾರೆ. ವಿನಯ ಕುಲಕರ್ಣಿ ಅವರ ಆಪ್ತರ ಮೆಲೆ ಐಟಿ ರೇಡ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಕಾಂಗ್ರೆಸ್ ನ ಪ್ರಮುಖ ಮುಂಂಡರುಗಳು ಮೇಲೆ ಐಟಿ ರೇಡ್ ಮಾಡುತ್ತಿದ್ದಾರೆ ಎಂದು ವಿನಯ ಕುಲಕರ್ಣಿ ಪತ್ನಿ ಆರೋಪಿಸಿದ್ದಾರೆ.

Follow Us:
Download App:
  • android
  • ios