ಪೈನಾನ್ಷಿಯರ್‌ಗಳ ಮೇಲೆ ಐಟಿ ದಾಳಿ, ಕಂತೆ ಕಂತೆ ನೋಟು ಪತ್ತೆ! ಇವ್ರೆಲ್ಲಾ ಡಿಕೆಶಿ ಆಪ್ತರಾ?
ಬೆಂಗಳೂರು (ಮೇ 06): ಮುಂಬರುವ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಹಣ ನೀಡಲು ಹಣ ಸಂಗ್ರಹಿಸಿದ್ದಾರೆ ಎಂದು ಹೇಳಲಾದ ಕೆಲವು ಹಣಕಾಸುದಾರರನ್ನು ಗುರಿಯಾಗಿಸಿಕೊಂಡು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ ಹಲವಾರು ಸ್ಥಳಗಳಲ್ಲಿ ಭಾರಿ ದಾಳಿ ನಡೆಸಿದೆ. ಈ ವೇಳೆ ಫೈನಾನ್ಷಿಯರ್‌ಗಳ ಬಳಿ ಕಂತೆ ಕಂತೆ ನೋಟುಗಳು ಲಭ್ಯವಾಗಿದ್ದು, 20 ಕೋಟಿ ರೂ.ಗಿಂತ ಅಧಿಕವಾಗಿದೆ.
ಬೆಂಗಳೂರು ನಗರದ ಶಾಂತಿ ನಗರ, ಕಾಕ್ಸ್ ಟೌನ್, ಶಿವಾಜಿ ನಗರ, ಆರ್‌ಎಂವಿ ಎಕ್ಸ್‌ಟೆನ್ಶನ್, ಕನ್ನಿಂಗ್‌ಹ್ಯಾಮ್ ರಸ್ತೆ, ಸದಾಶಿವ ನಗರ, ಕುಮಾರಪಾರ್ಕ್ ವೆಸ್ಟ್ ಮತ್ತು ಫೇರ್‌ಫೀಲ್ಡ್ ಲೇಔಟ್ ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ.
ಈ ದಾಳಿಗಳ ಪರಿಣಾಮವಾಗಿ ಅವರ ರಹಸ್ಯ ಅಡಗುತಾಣಗಳಲ್ಲಿ ಸಂಗ್ರಹಿಸಲಾಗಿದ್ದ ಅಪಾರ ಪ್ರಮಾಣದ ಲೆಕ್ಕಕ್ಕೆ ಸಿಗದ ನಗದು ಮತ್ತು ಚಿನ್ನಾಭರಣಗಳು ಮತ್ತು ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು ಹಾಗೂ ಮೈಸೂರಿನಲ್ಲಿ ಏಕಕಾಲಕ್ಕೆ ದಾಳಿ ಮಾಡಲಾಗಿದೆ. ಬೆಂಗಳೂರಿನ ಶಾಂತಿನಗರ, ಆರ್.ಎಂ.ವಿ ಲೇಔಟ್, ಕನ್ನಿಂಗ್ ಹ್ಯಾಂ ರೋರ್, ಸದಾಶಿವ ನಗರ, ಕುಮಾರ ಪಾರ್ಕ್ ವೆಸ್ಟ್ ಸೇರಿ ಹಲವೆಡೆ ದಾಳಿ ಮಾಡಲಾಗಿದೆ.
ಐಟಿ ದಾಳಿಯಿಂದ 15 ಕೋಟಿ ರೂ. ನಗದು ಹಾಗೂ 5 ಕೋಟಿ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗುದೆ ಎಂದು ಸುವರ್ಣ ನ್ಯೂಸ್ ಗೆ ಆದಾಯ ತೆರಿಗೆ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಐಟಿ ದಾಳಿಗೊಳಗಾದ ಫೈನಾನ್ಷಿಯರ್‌ಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪ್ತರು ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ.