ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳಿಗೆ ನೀಡಲು ಅಪಾರ ಪ್ರಮಾಣದ ಹಣ ಸಂಗ್ರಹಿಸಿದ್ದ ಸುಳಿವಿನ ಬೆನ್ನಲ್ಲೇ ಹಲವು ಫೈನಾನ್ಸಿಯರ್ ಗಳ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು 15 ಕೋಟಿ ಮತ್ತು 5 ಕೋಟಿ ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು (ಮೇ.6): ರಾಜ್ಯ ವಿಧಾಸಭಾ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳಿಗೆ ನೀಡಲು ಅಪಾರ ಪ್ರಮಾಣದ ಹಣ ಸಂಗ್ರಹಿಸಿದ್ದ ಸುಳಿವಿನ ಬೆನ್ನಲ್ಲೇ ಹಲವು ಫೈನಾನ್ಸಿಯರ್ ಗಳ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಏಕಕಾಲಕ್ಕೆ ಈ ದಾಳಿ ನಡೆದಿದ್ದು, ಬೆಂಗಳೂರು ನಗರದ ಶಾಂತಿ ನಗರ, ಕಾಕ್ಸ್ ಟೌನ್, ಶಿವಾಜಿ ನಗರ, ಆರ್‌ಎಂವಿ ಎಕ್ಸ್‌ಟೆನ್ಶನ್, ಕನ್ನಿಂಗ್‌ಹ್ಯಾಮ್ ರಸ್ತೆ, ಸದಾಶಿವ ನಗರ, ಕುಮಾರಪಾರ್ಕ್ ವೆಸ್ಟ್ ಮತ್ತು ಫೇರ್‌ಫೀಲ್ಡ್ ಲೇಔಟ್ ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಅಡಗುತಾಣಗಳಲ್ಲಿ ಸಂಗ್ರಹಿಸಲಾಗಿದ್ದ ಅಪಾರ ಪ್ರಮಾಣ ಹಣ ಮತ್ತು ಚಿನ್ನ ವಶಕ್ಕೆ ಪಡೆಯಲಾಗಿದೆ. 15 ಕೋಟಿ ನಗದು ಹಣ ಹಾಗೂ 5 ಕೋಟಿ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಸುವರ್ಣ ನ್ಯೂಸ್ ಗೆ ಆದಾಯ ತೆರಿಗೆ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಯಾವ ಅಭ್ಯರ್ಥಿ ಜೊತೆ ಫೈನಾನ್ಸಿಯರ್ ಸಂಪರ್ಕ ಹೊಂದಿದ್ದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
